ಶಾಸಕ ರವೀಂದ್ರ-ಸಂಸದೆ ಸುಮಲತಾ ‘ಲೆಟರ್‍ಹೆಡ್ ವಾಕ್ಸಮರ’

ಮಂಡ್ಯ, ಆ.18(ಮೋಹನ್‍ರಾಜ್)- ಸಂಸದೆ ಸುಮಲತಾ ಅಂಬರೀಷ್ ಅಧ್ಯಕ್ಷತೆ ಯಲ್ಲಿ ನಡೆದ ದಿಶಾಸಭೆಯಲ್ಲಿ ಜೆಡಿಎಸ್ ಶಾಸಕರು ಹಾಗೂ ಸಂಸದೆ ಸುಮಲತಾ ಅಂಬರೀಷ್ ನಡುವಿನ ವಾಕ್ಸಮರ ತಾರಕ ಕ್ಕೇರಿತ್ತು. ಸುಮಲತಾ ಆಪ್ತರು ಸಂಸದರ ಲೆಟರ್‍ಹೆಡ್ ದುರ್ಬಳಕೆ ಮಾಡಿಕೊಳ್ಳು ತ್ತಿದ್ದಾರೆಂದು ಸಾಕ್ಷಿ ಸಭೆ ಮುಂದಿಟ್ಟ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದರ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು. ಇದಕ್ಕೆ ದಳ ಶಾಸಕರು ಬೆಂಬಲವಾಗಿ ನಿಂತಿದ್ದರಿಂದ ಸಭೆ ರಣರಂಗವಾಯಿತು. ಇನ್ನು ಸಭೆಗೆ ಆಗಮಿಸಿದ್ದ ಅಧಿಕಾರಿ ವರ್ಗ ಮೂಕ ಪ್ರೇಕ್ಷಕರಾದರು.

ಬುಧವಾರ ನಗರದ ಜಿಲ್ಲಾ ಪಂಚಾ ಯ್ತಿಯ ಕಾವೇರಿ ಸಭಾಂಗಣದಲ್ಲಿ ಸಂಸದೆ ಸುಮಲತಾ ಅಂಬರೀಷ್ ಅಧ್ಯಕ್ಷತೆಯಲ್ಲಿ ದಿಶಾ ಸಭೆ ಕರೆಯಲಾಗಿತ್ತು. ಜೆಡಿಎಸ್‍ನ ಐವರು ಶಾಸಕರು ಸಭೆಗೆ ಹಾಜರಾಗಿ ದ್ದರು. ಸಭೆಯಲ್ಲಿ ಸ್ವಾಗತ ಭಾಷಣ ಮುಗಿ ಯುತ್ತಿದ್ದಂತೆಯೇ ಜೆಡಿಎಸ್ ಶಾಸಕರು ಹಾಗೂ ಸಂಸದರ ನಡುವೆ ವಾಕ್ ಪ್ರಹಾರ ಆರಂಭವಾಯಿತು.

ಸಭೆ ಆರಂಭಕ್ಕೂ ಮುನ್ನ ಮಾತನಾ ಡಿದ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ, ದಿಶಾ ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಆಹ್ವಾನವಿದೆ. ಆದರೆ ಕೆಲ ಆಹ್ವಾನ ವಿಲ್ಲದ ವ್ಯಕ್ತಿಗಳು (ಸುಮಲತಾ ಕಾರ್ಯದರ್ಶಿ ಗಳು) ಸಭೆಗೆ ಬಂದು ಕುಳಿತಿದ್ದಾರೆ. ಅವ ರನ್ನು ಹೊರ ಕಳುಹಿಸಿ ಎಂದು ಸಿಇಓ ದಿವ್ಯಪ್ರಭು ಗಮನ ಸೆಳೆದರು.

ಕಾನೂನು ಬದ್ಧವಾಗಿ ಸಭೆ ನಡೆಸಿ, ಕಾನೂನು ಬಾಹಿರವಾಗಿ ಸಭೆಗೆ ಬಂದವ ರನ್ನು ಹೊರ ಕಳುಹಿಸಿ ಎಂದು ಶಾಸಕ ರವೀಂದ್ರ ಒತ್ತಾಯಿಸಿದಾಗ, ಸಿಇಓ ದಿವ್ಯ, ಸಭೆಗೆ ಕರೆದವರಷ್ಟೇ ಬಂದಿದ್ದಾರೆ ಎಂದರು. ಅದಕ್ಕೆ ಶಾಸಕ ರವೀಂದ್ರ, ಹಿಂದೆ- ಮುಂದೆ ಸರಿಯಾಗಿ ನೋಡಿ ಹೇಳಿ ಎಂದು, ಸಿಇಓ ಹಾಗೂ ಎಸ್ಪಿ ವಿರುದ್ಧ ಗರಂ ಆದರು.

ನಂತರ ಎಸ್‍ಪಿ ಅಶ್ವಿನಿ ಅವರಿಗೆ ಸಂಸ ದರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ನಡೆಸಿರುವ ಪತ್ರ ವ್ಯವಹಾರದ ಬಗ್ಗೆ ದೂರು ನೀಡಿದ್ದೇನೆ. ಈ ಬಗ್ಗೆ ಮಾಹಿತಿ ಕೊಡಿ ಎಂದು ಶಾಸಕರು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಂಸದೆ ಸುಮಲತಾ, ಮಹತ್ವದ ಸಭೆ ಇದಾಗಿದ್ದು, ಚರ್ಚೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿ ಸಭೆ ಶುರು ಮಾಡಲು ಸಿಇಓಗೆ ಸೂಚಿಸಿದರು. ಆಗ ಕೆಂಡಾಮಂಡಲ ರಾದ ಶಾಸಕ ರವೀಂದ್ರ, ಸಂಸದರ ಲೆಟರ್ ಹೆಡ್ ದುರುಪಯೋಗ ಆಗಿರುವುದು ಮಹತ್ವದ ವಿಚಾರವಲ್ಲವಾ? ನಿಮ್ಮ ಲೆಟರ್‍ಹೆಡ್ ಅನ್ನು ನಿಮ್ಮ ಆಪ್ತ ಶ್ರೀನಿವಾಸ್ ಭಟ್ ಸೇರಿ ನಾಲ್ವರು ಬೆಂಬಲಿಗರು ದುರುಪಯೋಗಪಡಿಸಿಕೊಂಡಿ ದ್ದಾರೆ. ನಿಮಗಿಷ್ಟ ಬಂದಂತೆ ಜಿಲ್ಲೆಯನ್ನು ಕೊಂಡೊಯ್ಯಲು ಆಗಲ್ಲ ಎಂದು ಸಂಸ ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಶಾಸಕ ರವೀಂದ್ರ, ಸಭೆಗೆ ಸಂಬಂಧಿಸ ದವರು ಆಗಮಿಸಿದ್ದಾರೆ ಎಂದು ಹೇಳುತ್ತಿ ದ್ದಾರೆ. ಆದರೆ ಎಂಎಲ್‍ಸಿಗಳಿಗೆ ಸಭೆಗೆ ಬರಲು ಆಹ್ವಾನವಿಲ್ಲ. ಆದರೂ ಹೇಗೆ ಸಭೆಗೆ ಬಂದಿದ್ದಾರೆ. ಅವರೂ ಹೊರ ಹೋಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದರ ವಿರುದ್ಧ ಮುಗಿಬಿದ್ದ ವಿಧಾನ ಪರಿಷತ್ ಸದಸ್ಯರು, ನಾವ್ಯಾಕೆ ಹೊರ ಹೋಗಬೇಕೆಂದು ಪ್ರಶ್ನಿಸಿದರು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಯಿತು.
ಈ ವೇಳೆ ಮಧ್ಯ ಪ್ರವೇಶಿಸಿದ ಮೇಲು ಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ನಾನು ಸಹ ಸಂಸದನಾಗಿದ್ದಾಗ ದಿಶಾ ಸಭೆ ನಡೆಸಿದ್ದೆ. ಎಂಎಲ್‍ಸಿಗಳಿಗೂ ಆಹ್ವಾನ ಕೊಡು ತ್ತಿದ್ದೆ. ಮುಂದಿನ ಸಭೆಗೆ ಪರಿಷತ್ ಸದಸ್ಯ ರಿಗೂ ಸಭೆಗೆ ಆಹ್ವಾನಿಸಿ ಎಂದು ಸಿಇಓಗೆ ತಿಳಿಸಿದರು. ಇದಕ್ಕೆ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸಹ ಧ್ವನಿಗೂಡಿಸಿದ ಪರಿಣಾಮ ಈ ಬಗ್ಗೆ ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆದು ಸಭೆಗೆ ಆಹ್ವಾನಿಸುವುದಾಗಿ ಸಿಇಓ ತಿಳಿಸಿದರು. ಬಳಿಕ ಸಭೆಯಲ್ಲಿದ್ದ ಸುಮ ಲತಾ ಆಪ್ತರಾದ ಶ್ರೀನಿವಾಸ್ ಭಟ್ ಹಾಗೂ ಮದನ್ ಸಭೆಯಿಂದ ಹೊರ ನಡೆದರು.

ಇತ್ತ ಸಂಸದರ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ರವೀಂದ್ರ, ನಾಲ್ಕು ತಿಂಗಳಿಗೊಮ್ಮೆ ಮಾತ್ರ ದಿಶಾ ಸಭೆ ನಡೆ ಸಲು ಅವಕಾಶವಿದ್ದು, ಒಂದು ತಿಂಗಳಿ ಗೊಮ್ಮೆ ಸಭೆ ನಡೆಸುವುದಾದರೆ ಸಂತೋಷ. ಈ ಬಗ್ಗೆ ನನಗೆ ಪತ್ರದ ಮೂಲಕ ಆದೇಶ ಪತ್ರ ಕೊಡಿ ಎಂದಾಗ ಸಿಇಓ ಪತ್ರದಲ್ಲಿ ಈ ಬಗ್ಗೆ ಮಾಹಿತಿ ಕೊಟ್ಟ ಮೇಲೆ ದಿಶಾ ಸಭೆ ಆರಂಭವಾಯಿತು.

ಸಭೆಯಲ್ಲಿ ಶಾಸಕರಾದ ಸಿ.ಎಸ್.ಪುಟ್ಟ ರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಎಂ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್. ಅಪ್ಪಾಜಿಗೌಡ, ಜಿಪಂ ಸಿಇಓ ದಿವ್ಯಪ್ರಭು, ಎಸ್ಪಿ ಡಾ.ಅಶ್ವಿನಿ, ಅಪರ ಜಿಲ್ಲಾಧಿಕಾರಿ ಶೈಲಜಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ವರ್ಗ ಉಪಸ್ಥಿತರಿದ್ದರು.