ಪಡಿತರ ಅಕ್ಕಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ: ಗೋಪಾಲಯ್ಯ

ಬೆಂಗಳೂರು, ಮೇ 11 (ಕೆಎಂಶಿ)- ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ವಿತರಿಸುವ ಪಡಿತರ ಧಾನ್ಯಗಳನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗೆ ನೀಡುತ್ತಿರುವ ಪಡಿತರ ವಿತರಣೆಯನ್ನು ಕೆಲವರು ದುರ್ಬ ಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರು ಬಂದಿವೆ. ಸರ್ಕಾರ ಉಚಿತವಾಗಿ ವಿತರಿಸುವ ಅಕ್ಕಿಯನ್ನು ಕೆಜಿಗೆ 12 ರಿಂದ 15 ರೂ.ಗಳಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹವÀರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬಡವರಿಗೆ ಕೋಟ್ಯಾಂತರ ರೂ. ವ್ಯಯ ಮಾಡಿ ಸರ್ಕಾರ ಪಡಿತರ ಒದಗಿಸುತ್ತಿದೆ. ಆದರೆ ಇದನ್ನು ದುರ್ಬಳಕೆ ಮಾಡಿ ಕೊಳ್ಳುವುದು ತಪ್ಪು. ಇಂತಹ ದುರ್ಬಳಕೆ ತಡೆಯಲು ಕಾನೂನು ಜಾರಿ ಮಾಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಪಡಿತರ ಬೇಡ ಎಂದರೆ ಅದನ್ನು ಅಂಗಡಿಯಲ್ಲೇ ಬಿಟ್ಟುಬಿಡಿ, ಅದರಿಂದ ಬಡವರಿಗೆ ಅನುಕೂಲವಾಗುತ್ತದೆ. ಅದು ಬಿಟ್ಟು ಉಚಿತವಾಗಿ ಪಡಿತರ ಪಡೆದು ಅದನ್ನು ಮಾರಾಟ ಮಾಡುವುದು ಸರಿಯಲ್ಲ. ಇಂತಹವರ ಪಡಿತರ ಚೀಟಿ ಯನ್ನು ರದ್ದು ಮಾಡುವುದಾಗಿಯೂ ಅವರು ಎಚ್ಚರಿಕೆ ನೀಡಿದರು. ಪಡಿತರ ದುರ್ಬಳಕೆ ಮಾಡಿಕೊಂಡಿರುವ 499 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. 33 ಅಂಗಡಿಗಳ ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದು ಸಚಿವರು ಹೇಳಿದರು. ಇನ್ನು ಗುಲ್ಬರ್ಗ, ಮೈಸೂರು ಮತ್ತು ದಾವಣಗೆರೆ ಖಾಸಗಿ ಗೋದಾಮುಗಳ ಮೇಲೆ ನಮ್ಮ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಸಾವಿರಾರು ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಇದು ನಮ್ಮ ಸರಕಾರದ ಅಕ್ಕಿಯೋ ಇಥವಾ ಬೇರೆ ರಾಜ್ಯದ ಅಕ್ಕಿಯೋ ಎಂದು ತನಿಖೆ ನಡೆಸಿ, ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಚಿಂತಿಸುವುದಿಲ್ಲ. ಕ್ರಿಮಿನಲ್ ಮೊಕ ದ್ದಮೆ ಹೂಡಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಪಡಿತರ ವಿತರಣೆಯಲ್ಲಿ ಲೋಪ, ಅಕ್ರಮ ದಾಸ್ತಾನು ಎಂಡಿಸಿಸಿಡಬ್ಲ್ಯೂ ಸ್ಟೋರ್ ವ್ಯವಸ್ಥಾಪಕ ಅಮಾನತು
7 ನ್ಯಾಯಬೆಲೆ ಅಂಗಡಿಗಳಿಗೆ ನೋಟೀಸ್
ಮೈಸೂರು, ಮೇ 11(ಆರ್‍ಕೆಬಿ)- ಪಡಿತರ ವಿತರಣೆಯಲ್ಲಿ ಲೋಪ ಹಾಗೂ ಅಕ್ರಮ ದಾಸ್ತಾನು ಮಾಡಿದ ಆರೋಪದ ಮೇರೆಗೆ ಮೈಸೂರು ತಾಲೂಕಿನ ಒಂದು ನ್ಯಾಯಬೆಲೆ ಅಂಗಡಿ ಮತ್ತು ಎಂಡಿಸಿಸಿಡಬ್ಲ್ಯೂ ಸ್ಟೋರ್ ವ್ಯವಸ್ಥಾಪಕನನ್ನು ಅಮಾನತುಪಡಿಸಿ 7 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಜಂಟಿ ನಿರ್ದೇಶಕ ಶಿವಣ್ಣ ತಿಳಿಸಿದ್ದಾರೆ.

ದಾಳಿ ನಡೆದ ವೇಳೆ 697 ಕ್ವಿಂಟಾಲ್ ಅಕ್ಕಿ, 8.30 ಕ್ವಿಂಟಾಲ್ ತೊಗರಿಬೇಳೆ ಲೆಕ್ಕ ಪತ್ರ ದಾಸ್ತಾನಿಗೂ, ಭೌತಿಕ ದಾಸ್ತಾನಿಗೂ ವ್ಯತ್ಯಾಸ ಕಂಡು ಬಂದ ಕಾರಣ ಎಂಡಿಸಿ ಸಿಡಬ್ಲು ಸ್ಟೋರ್ಸ್ ಸಗಟು ನಾಮಿನಿಯ ಪ್ರಾಧಿಕಾರವನ್ನು ಮೇ 8ರಂದು ವಿಚಾರಣೆ ಕಾಯ್ದಿರಿಸಿ, ಅಮಾನತುಪಡಿಸಿ, ಕೆಎಫ್‍ಸಿಎಸ್‍ಸಿ ಉತ್ತರ ಸಗಟು ನಾಮಿನಿ ಇವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಎಂಡಿಸಿಸಿಡಬ್ಲೂ ಸ್ಟೋರ್ಸ್ ಸಗಟು ನಾಮಿನಿಯ ಮಳಿಗೆ ವ್ಯವಸ್ಥಾಪಕರನ್ನು ಅಮಾನತ್ತಿನಲ್ಲಿರಿಸಿ, ಮುಂದಿನ ಶಿಸ್ತು ಕ್ರಮ ಜರುಗಿಸಲಾಗು ತ್ತಿದೆ. ಸದರಿ ಸಗಟು ನಾಮಿನಿಯ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಗೌಸಿಯಾನಗರ, ಕ್ಯಾತಮಾರನಹಳ್ಳಿ, ಜೆ.ಪಿ.ನಗರ, ಉದಯಗಿರಿ, ಹೂಟಗಳ್ಳಿ ಮುಂತಾದ ಪ್ರದೇಶಗಳಿಗೆ ಅನಿರೀಕ್ಷಿತ ದಾಳಿ ಮಾಡಿ ತನಿಖೆ ನಡೆಸಿದ ತಂಡ, ಗೌಸಿಯಾನಗರ ವ್ಯಾಪ್ತಿಯ ಕಾರ್ಡುದಾರರಿಂದ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನಿರಿಸಿದ್ದ ಸುಮಾರು 3.80 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಪರಿಶೀಲನಾ ಸಮಯದಲ್ಲಿ ತೂಕದಲ್ಲಿ ಕಡಿಮೆ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದ ಮೈಸೂರು ತಾಲೂಕಿನ ಶ್ರೀಕಂಠ ನ್ಯಾಯಬೆಲೆ ಅಂಗಡಿಯನ್ನು ಅಮಾನತುಪಡಿಸಲಾಗಿದೆ. ಮೈಸೂರು ನಗರದ ಶಾರದಾ ನ್ಯಾಯಬೆಲೆ ಅಂಗಡಿ ಯನ್ನು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಒಟ್ಟು 7 ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.