ಸಮಸ್ಯೆಗಳ ಪರಿಹಾರಕ್ಕೆ ಸಮಾಜವೂ ಪ್ರಯತ್ನಶೀಲವಾಗಲಿ

ಮೈಸೂರು, ಡಿ.10(ಎಂಕೆ)- ಭಾರತೀಯ ಇತಿಹಾಸ ಸಂಕಲನಾ ಸಮಿತಿ ಕರ್ನಾಟಕ ಪ್ರಾಂತ ಮೈಸೂರು ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ.ಎ.ಎಸ್.ಚಂದ್ರಶೇಖರ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರನ್ನು ಅಭಿನಂದಿಸಲಾಯಿತು.

ನಗರದ ನಂಜುಮಳಿಗೆಯಲ್ಲಿರುವ ಗೋಪಾಲಸ್ವಾಮಿ ಶಿಶುವಿಹಾರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಮ.ವೆಂಕಟರಾಮ್ ಸನ್ಮಾನಿಸಿದರು.

ಬಳಿಕ ಮಾತನಾಡಿ, ಸಮಾಜದಲ್ಲಿ ಭಯೋತ್ಪಾದನೆ, ಮತಾಂತರ ಮೊದಲಾದ ಸಮಸ್ಯೆಗಳಿದ್ದು, ಸರಕಾರವೇ ಎಲ್ಲ ದಕ್ಕೂ ಪರಿಹಾರ ನೀಡುವುದಿಲ್ಲ. ಸಮಾಜವೂ ಪರಿಹಾರ ಕಂಡುಕೊಳ್ಳಲು ಯತ್ನಿಸಬೇಕು. ಯುವಪೀಳಿಗೆಗೆ ಸರಿಯಾದ ಮಾರ್ಗದರ್ಶನ ನೀಡುವವರ ಅಗತ್ಯವಿದೆ. ಈ ದಿಸೆಯಲ್ಲಿ ವೈದ್ಯ ಚಂದ್ರಶೇಖರ್ ಯುವಕರÀ ತಂಡ ಕಟ್ಟಿಕೊಂಡು, ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಸಮಾಜಮುಖಿ ಕಾರ್ಯ ಮಾಡಲಾಗದವರು ಕನಿಷ್ಠ ಮಾಡುವವರಿ ಗಾದರೂ ಪೆÇ್ರೀತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಕೋವಿಡ್-19 ಸಂದರ್ಭ ಕೆಲವು ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ಹಣ ಸುಲಿಗೆ ಮಾಡುತ್ತಿವೆ ಎಂಬುದನ್ನು ಕೇಳಿ ಬೇಸರವಾಗಿತ್ತು. ಆದರೆ ಇದಕ್ಕೆ ವಿರುದ್ಧ ವಾಗಿ ಡಾ.ಚಂದ್ರಶೇಖರ್ ತಮ್ಮ ಆಯುರ್ವೇದ ಚಿಕಿತ್ಸೆ ಮೂಲಕ ಕಡಿಮೆ ವೆಚ್ಚದಲ್ಲಿ ಕೊರೊನಾ ಸೋಂಕಿತರು ಗುಣವಾಗಲು ಸಹಕರಿಸಿದ್ದಾರೆ. ಅದೇ ರೀತಿ `ಸ್ವಚ್ಛ ಭಾರತ್ ಮಿಷನ್’ ಮೂಲಕ ದೇಶದ ಗಮನ ಸೆಳೆದಿರುವ ಹೆಚ್.ವಿ. ರಾಜೀವ್, ಮೈಸೂರಿನಲ್ಲಿ ಸ್ವಚ್ಛತಾ ಆಂದೋಲನವನ್ನೇ ಕೈಗೊಂಡು ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಪ್ರಶಂಸಿಸಿದರು. ಮೈವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಪ್ರಧಾನ ಗುರುದತ್ತ ಮಾತನಾಡಿ, ಚಂದ್ರಶೇಖರ್ ಮೈಸೂರಿನ ಖ್ಯಾತ ವೈದ್ಯರು ಎಂಬುದನ್ನು ಅವರಿಗೆ ಸಂದಿರುವ ರಾಜ್ಯೋತ್ಸವ ಪ್ರಶಸ್ತಿಯೇ ಹೇಳುತ್ತದೆ. ಅವರು ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ವೈದ್ಯ ವೃತ್ತಿ ಜೊತೆಗೇ ಯೋಗ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ. ಕಳೆದ 30 ವರ್ಷಗಳಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಾ ಸಾವಿರಾರು ಬಡವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಬಣ್ಣಿಸಿದರು.

ಕ್ರಿಟಿಕಲ್ ಕೇರ್ ಸೆಂಟರ್: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಎ.ಎಸ್.ಚಂದ್ರಶೇಖರ್, ಬೆಂಗಳೂರಿ ನಲ್ಲಿರುವಂತೆ ಮೈಸೂರಿನಲ್ಲಿಯೂ ಎಲ್ಲಾ ಬಗೆಯ ಚಿಕಿತ್ಸೆ ಗಳನ್ನೂ ಒಂದೆಡೆ ನೀಡುವ `ಕ್ರಿಟಿಕಲ್ ಕೇರ್ ಸೆಂಟರ್’ ಅಗತ್ಯವಿದೆ. ಅದಕ್ಕಾಗಿ ನಾನು ಶ್ರಮಿಸುತ್ತಿದ್ದೇನೆ ಎಂದರು.

ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದವರ ಕುರಿತು ಹೆಚ್ಚಾಗಿ ತಿಳಿಸಬೇಕು. ಈ ನಿಟ್ಟಿನಲ್ಲಿ 1ರಿಂದ 10ನೇ ತರಗತಿ ಪಠ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಕೊಡುಗೆ ಮತ್ತಿತರ ವಿಚಾರಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು. ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಭಾರತೀಯ ಇತಿಹಾಸ ಸಂಕಲನಾ ಸಮಿತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಎಸ್.ಬಿ.ಎಂ.ಪ್ರಸನ್ನ, ಪಿ.ಬಾಲಸುಬ್ರಹ್ಮಣ್ಯ, ಆರ್.ಚಲುವಮೂರ್ತಿ, ದಿವ್ಯಾ ವಿನಯ್ ಮತ್ತಿತರರು ಉಪಸ್ಥಿತರಿದ್ದರು.