ಕೊಡಗು ಮಾಡೆÀಲ್ ಶಾಲೆಗೆ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಪಟ್ಟಚೇರುವಂಡ ಸಿ.ತಿಮ್ಮಯ್ಯ ಭೇಟಿ

ಮೈಸೂರು, ಸೆ.27- ಲೆಫ್ಟಿನೆಂಟ್ ಜನ ರಲ್ (ನಿವೃತ್ತ) ಪಟ್ಟಚೇರುವಂಡ ಸಿ.ತಿಮ್ಮಯ್ಯ ಅವರು ಇಂದು ಮೈಸೂರಿನ ಸಾತಗಳ್ಳಿಯ ವಿದ್ಯಾಶಂಕರ ಬಡಾವಣೆಯಲ್ಲಿನ ಕೊಡಗು ಮಾಡೆಲ್ ಶಾಲೆಗೆ ಭೇಟಿ ನೀಡಿ, ಶಾಲೆಯ ನಿರ್ವಹಣೆ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತ ಪಡಿಸಿದರು. ಶ್ರೀಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಈಸ್ಟ್ ವತಿಯಿಂದ ಈ ಶಾಲೆ ಯನ್ನು ನಿರ್ವಹಿಸಲಾಗುತ್ತಿದ್ದು, ತಿಮ್ಮಯ್ಯ ಅವರು ಸಹ ಅಸೋಸಿ ಯೇಷನ್‍ನ ಸದಸ್ಯರು ಹಾಗೂ ಮೈಸೂರು ನಿವಾಸಿಯಾಗಿದ್ದಾರೆ.

ಶಾಲೆಯ ಪ್ರಗತಿಗೆ ಮಾರು ಹೋದ ತಿಮ್ಮಯ್ಯನವರು ಶಾಲೆಯಲ್ಲಿನ ಮೂಲಸೌಕರ್ಯ ಹಾಗೂ ಅಲ್ಪಾವಧಿಯಲ್ಲಿಯೇ ಅದರ ಸಾಧನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಯೊಂದಿಗೆ ಶಾಲೆ ಅಭಿವೃದ್ಧಿಯೂ ಸೇರಿದಂತೆ ಅನೇಕ ವಿಷಯಗಳ ಕುರಿತು ಅವರು ಚರ್ಚಿಸಿದರು.
ದೇಶಾದ್ಯಂತ ಫೀಡರ್ ಶಾಲೆ ಯನ್ನು ಸೈನಿಕ ಶಾಲೆಗಳಾಗಿ ಮಾಡುವುದು ಶಾಲೆಗಳಲ್ಲಿ ಎನ್‍ಸಿಸಿ ಘಟಕ ಸ್ಥಾಪನೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಂಬಂಧವೂ ಸಲಹೆ ನೀಡಿ ದರು. ಅಲ್ಲದೇ ಅಗತ್ಯ ವಿದ್ದಾಗ ಶಾಲೆಯ ಬೆಳವಣಿಗೆಗೆ ಸಂಬಂ ಧಿಸಿದಂತೆ ಸಲಹೆ, ಮಾರ್ಗ ದರ್ಶನ ನೀಡುವ ಭರವಸೆ ಸಹ ನೀಡಿದರು. ಈ ವೇಳೆ ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.