ವಿವೇಕ ಸ್ಮಾರಕ ನಿರ್ಮಾಣಕ್ಕೆ ಬೇಗ ಚಾಲನೆ ದೊರೆಯಲಿ: ಸಾಹಿತಿ, ಚಿಂತಕರ ಒತ್ತಾಯ

ಮೈಸೂರು, ಜೂ.23(ಎಸ್‍ಪಿಎನ್)- ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಜಾಗವನ್ನು ರಾಜ್ಯ ಸರ್ಕಾರ ಆದಷ್ಟು ಬೇಗನೇ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಿ ಎಂಬ ಒತ್ತಾಯ ಸಾರ್ವ ಜನಿಕ ವಲಯದಿಂದ ಕೇಳಿ ಬರುತ್ತಿದೆ.

ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ 1893ರ ಸೆ.11ರಂದು ವಿಶ್ವ ಧರ್ಮ ಸಮ್ಮೇ ಳನದಲ್ಲಿ ಭಾಗವಹಿಸುವ ಮುನ್ನ ಮೈಸೂರಿಗೆ ಬಂದು ತಂಗಿದ್ದರು. ಈ ಸಂದರ್ಭ ಮೈಸೂ ರಿನ ಮಹಾರಾಜರನ್ನು ಭೇಟಿ ಮಾಡಿ ಮಾತು ಕತೆ ನಡೆಸಿದ್ದರು ಎಂಬುದೇ ಮೈಸೂರಿಗ ರಾದ ನಮಗೆ ಹೆಮ್ಮೆಯ ವಿಷಯ. ಹಾಗಾಗಿ ಅವರು ತಂಗಿದ್ದ ಜಾಗವನ್ನು ಸ್ಮಾರಕ ಮಾಡಿ ದರೆ ಮುಂದಿನ ಯುವ ಪೀಳಿಗೆ ನೆನ ಪಿಟ್ಟುಕೊಳ್ಳುತ್ತದೆ ಎಂದು ಮರಿಮಲ್ಲಪ್ಪ ಪಿಯು ಕಾಲೇಜಿನ ನಿವೃತ್ತ ಸಂಸ್ಕøತ ಪ್ರಾಧ್ಯಾ ಪಕ ಹಾಗೂ ಎಬಿವಿಪಿ ನಗರ ಘಟಕದ ಮಾಜಿ ಅಧ್ಯಕ್ಷ ಪ್ರೊ.ಎಸ್.ಪರ್ವತರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಗಳನ್ನು ಪಾಶ್ಚಿಮಾತ್ಯ ದೇಶ ಗಳಲ್ಲಿ ಪ್ರಚಾರ ಮಾಡಿದರಲ್ಲದೆ, 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನ ದಲ್ಲಿ ತಮ್ಮ ಭಾಷಣದ ಮೂಲಕ ನಮ್ಮ ಆಧ್ಯಾ ತ್ಮದ ಮಹತ್ವವನ್ನು ಎತ್ತಿ ಹಿಡಿದಿದ್ದರು. ಅಲ್ಲದೆ, ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಹಿಂದೂ ಧರ್ಮ ಹಾಗೂ ಭಾರತೀಯ ಪರಂಪರೆ ಬಗ್ಗೆ ತಮ್ಮ ಭಾಷಣದ ಮೂಲಕ ಪ್ರತಿಪಾದಿಸಿರುವುದು ಎಲ್ಲರೂ ಹೆಮ್ಮೆಪಡುವ ಸಂಗತಿ ಎಂದರು. ಇಂದಿಗೂ 1ನೇ ತರಗತಿ ಯಿಂದ ಕಾಲೇಜು ವಿದ್ಯಾರ್ಥಿಗಳವರೆಗೂ ವಿವೇಕಾನಂದರ ತತ್ವಾದರ್ಶದ ಮಾತು ಗಳನ್ನು ತರಗತಿಯಲ್ಲಿ ಹೇಳದೇ ಯಾವೊಬ್ಬ ಶಿಕ್ಷಕನೂ ತಮ್ಮ ಪಾಠಗಳನ್ನು ಆರಂಭಿಸು ವುದಿಲ್ಲ. ಮೈಸೂರಿನಲ್ಲಿ ವಿವೇಕಾನಂದ ಸ್ಮಾರಕ ಆಗುತ್ತಿರುವುದು ಲಕ್ಷಾಂತರ ವಿದ್ಯಾರ್ಥಿ ಗಳ ಪಾಲಿನ ಸುದೈವ ಎಂದ ಅವರು, ಈ ವಿಷಯದಲ್ಲಿ ರಾಜ್ಯ ಸರ್ಕಾರ ಅನಗತ್ಯ ವಿಳಂಬ ಮಾಡದೇ ಸ್ಮಾರಕ ನಿರ್ಮಾಣಕ್ಕೆ ಕೈ ಜೋಡಿಸಲಿ ಎಂದು ಒತ್ತಾಯಿಸಿದರು.