ಮಾವುತ-ಕಾವಾಡಿಗಳಿಗೆ ಹಿರಿಯ ಅಧಿಕಾರಿಗಳಿಂದ ಭೋಜನಕೂಟ

ಮೈಸೂರು, ಅ.27(ಎಂಟಿವೈ)- ಜಂಬೂ ಸವಾರಿಯಲ್ಲಿ ಯಶಸ್ವಿಯಾಗಿ ತಮ್ಮ ಜವಾ ಬ್ದಾರಿ ನಿಭಾಯಿಸಿದ ದಸರಾ ಗಜ ಪಡೆಯ ಮಾವುತ-ಕಾವಾಡಿ, ವಿಶೇಷ ಮಾವುತರಿಗೆ ಮಂಗಳವಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಔತಣಕೂಟ ಆಯೋಜಿಸಿ ದ್ದರು. ದಸರೆಯಲ್ಲಿನ ಯಶಸ್ವಿ ಪಾಲ್ಗೊಳ್ಳು ವಿಕೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಪ್ರತಿವರ್ಷ ಜಂಬೂಸವಾರಿಯ ಮರು ದಿನ ಅರಣ್ಯ ಇಲಾಖೆಯು ಗಜಪಡೆಯ ಮಾವುತ-ಕಾವಾಡಿಗಳು ಹಾಗೂ ಅವರ ಕುಟುಂಬ ಸದಸ್ಯರನ್ನು ರಂಗನತಿಟ್ಟಿಗೆ ಕರೆ ದೊಯ್ದು ಭೋಜನಕೂಟ ಏರ್ಪಡಿಸು ತ್ತಿತ್ತು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆನೆ ಹಾಗೂ ಮಾವುತರು-ಕಾವಾಡಿಗಳು ಅರಮನೆ ಆವರಣದಿಂದ ಅನಗತ್ಯವಾಗಿ ಹೊರಹೋಗುವುದನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ಅರಮನೆ ಆವರಣದಲ್ಲಿಯೇ ಇಂದು ಸಿಸಿಎಫ್ ಟಿ.ಹೀರಾಲಾಲ್ ಅವರು ಭೋಜನಕೂಟ ಏರ್ಪಡಿಸಿದ್ದರು. ಈ ಸಂದರ್ಭ ಹುಲಿ ಯೋಜನೆ ನಿರ್ದೇಶಕ ಜಗತ್‍ರಾಮ್, ಡಿಸಿಎಫ್ ಎಂ.ಜಿ.ಅಲೆಗ್ಸಾಂಡರ್, ಮೃಗಾ ಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಕೆ.ಸಿ.ಪ್ರಶಾಂತ್ ಕುಮಾರ್, ರವಿಶಂಕರ್, ಇಲವಾಲ ತರಬೇತಿ ಕೇಂದ್ರದ ಎಸಿಎಫ್ ಸೀಮಾ, ವಿರಾಜಪೇಟೆ ಎಸಿಎಫ್ ರೋಶಿಣಿ, ಆರ್‍ಎಫ್‍ಓ ಕೆ.ಸುರೇಂದ್ರ, ಡಿಆರ್ ಎಫ್‍ಓ ಪುಟ್ಟಮಾದೇಗೌಡ, ಪಶುವೈದ್ಯ ಡಾ.ಡಿ.ಎನ್.ನಾಗರಾಜು ಮತ್ತಿತರರಿದ್ದರು.