ಇಂದು ಮಡಿಕೇರಿ ನಗರಸಭೆ ಚುನಾವಣೆ

ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ
23 ವಾರ್ಡ್‍ಗಳಲ್ಲಿ 27 ಮತಗಟ್ಟೆ ಸ್ಥಾಪನೆ
ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ 23 ವಾರ್ಡ್‍ಗಳಿಗೆ ಒಟ್ಟು 27 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 6 ಸೂಕ್ಷ್ಮ, 3 ಅತೀ ಸೂಕ್ಷ್ಮ ಹಾಗೂ 18 ಸಾಮಾನ್ಯ ಮತಗಟ್ಟೆಗಳಿವೆ. 13,166 ಪುರುಷರು, 13,718 ಮಹಿಳಾ ಮತದಾರರು, ಇತರೆ 2 ಸೇರಿದಂತೆ ಒಟ್ಟು 26,887 ಮತದಾರÀರು ಮತ ಚಲಾಯಿಸುವ ಹಕ್ಕು ಹೊಂದಿ ದ್ದಾರೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಮಡಿಕೇರಿ ತಹಸೀಲ್ದಾರ್ ಮಹೇಶ್ ಮಾಹಿತಿ ನೀಡಿದ್ದಾರೆ. ಏ.30ರಂದು ಮತ ಎಣಿಕೆ ಕಾರ್ಯ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ. ಅಂದು 11 ಗಂಟೆಯ ವೇಳೆಗೆ ಚುನಾವಣೆ ಎದುರಿಸಿದ ಎಲ್ಲಾ 108 ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಬಹಿರಂಗವಾಗಲಿದೆ.

ಮಡಿಕೇರಿ,ಏ.26-ಕೊರೊನಾ ಆತಂಕದ ನಡುವೆಯೇ ಮಡಿಕೇರಿ ನಗರಸಭೆಯ 23 ವಾರ್ಡ್‍ಗಳಿಗೆ ಮಂಗಳವಾರ ಚುನಾವಣೆ ನಡೆಯಲಿದ್ದು, ಇಂದು ಮಸ್ಟರಿಂಗ್ ಕಾರ್ಯ ನಡೆಯಿತು.

ನಗರಸಭೆಯ 23 ವಾರ್ಡ್‍ಗಳಿಗೆ 108 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ನಗರದ ವಿವಿಧ ಮತಗಟ್ಟೆಗಳಲ್ಲಿ ಮತ ದಾನ ನಡೆಯಲಿದೆ. 26 ಸಾವಿರಕ್ಕೂ ಅಧಿಕ ಮತದಾರರು 108 ಮಂದಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಇವಿಎಂ (ಮತಯಂತ್ರ)ನಲ್ಲಿ ಬರೆಯಲಿದ್ದಾರೆ.
ಸೋಮವಾರ ನಗರದ ಸಂತ ಜೋಸೆ ಫರ ಶಾಲೆಯಲ್ಲಿ ಇವಿಎಂ ಯಂತ್ರಗಳನ್ನು ಪರಿಶೀಲನೆ ನಡೆಸಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಬಳಿಕ ಸೂಕ್ತ ಪೊಲೀಸ್ ಬಂದೋಬಸ್ತ್‍ನಲ್ಲಿ ಆಯಾ ವಾರ್ಡ್‍ಗಳ ಬೂತ್‍ಗಳಿಗೆ ಮತಯಂತ್ರ ಗಳನ್ನು ಕಳುಹಿಸಿಕೊಡಲಾಯಿತು. ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾ ಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಹಾಗೂ ಇತರ ಅಧಿಕಾರಿ ವರ್ಗ ಸ್ಥಳದಲ್ಲಿ ಹಾಜರಿದ್ದು, ಪ್ರಕ್ರಿಯೆಗಳನ್ನು ಪರಿಶೀಲಿಸಿದರು.

ಕೊಡಗು ಜಿಲ್ಲಾಡಳಿತ ಸ್ಥಳೀಯ ಸಂಸ್ಥೆ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಗಳನ್ನು ಮಾಡಿಕೊಂಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನೂ ನೀಡಿದೆ. ಮತಗಟ್ಟೆಗಳ ಸ್ಯಾನಿಟೈಸ್, ಸಾಮಾಜಿಕ ಅಂತರ ಕಾಪಾಡು ವುದು, ಮತಗಟ್ಟೆ ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ಈಗಾಗಲೇ ನಡೆಸಿದೆ.

ಈ ಬಾರಿಯ ನಗರಸಭೆ ಚುನಾವಣೆ ಯಲ್ಲಿ ಮತದಾರರ ಮೇಲೆ ಕೊರೊನಾ ಪ್ರಭಾವ ಬೀರಿದ್ದು, ಚುನಾವಣೆ ಎದುರಿ ಸುತ್ತಿರುವ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೊಡಗು ಜಿಲ್ಲೆ ಯಲ್ಲಿಯೂ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾ ಗುತ್ತಿರುವುದು ಮತದಾನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

ನಗರಸಭೆ ವಾರ್ಡ್ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿಯೇ ಕಂಟೈನ್‍ಮೆಂಟ್ ಝೋನ್‍ಗಳಿದ್ದು, ಕೆಲ ಮತದಾರರು ಕೋವಿಡ್ ಭೀತಿಗೆ ಮತಗಟ್ಟೆಯಿಂದ ದೂರ ಉಳಿಯುವ ಸಾಧ್ಯತೆಯೂ ಇದೆ. ಪ್ರತಿ ವಾರ್ಡ್‍ನಲ್ಲೂ ಅಭ್ಯರ್ಥಿಗಳ ನಿರೀಕ್ಷೆ ರೀತಿಯಲ್ಲಿ ಮತದಾನವಾಗದ ಸಾಧ್ಯತೆ ಗಳಿದ್ದು, ಚುನಾವಣೆ ಎದುರಿಸುತ್ತಿರುವ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ತ್ರಿಶಂಕು ಸ್ಥಿತಿಗೆ ತಳ್ಳಿದೆ. ನೈಟ್ ಕಫ್ರ್ಯೂ, ವೀಕೆಂಡ್ ಕಫ್ರ್ಯೂ, ಸುಡುಬಿಸಿಲಿನ ನಡುವೆ ಸ್ಪರ್ಧಾಕಾಂಕ್ಷಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದು, ಶ್ರಮಕ್ಕೆ ತಕ್ಕಂತೆ ಮತದಾನ ಆಗುತ್ತದೆಯೋ ಎಂಬ ಆತಂಕ ಅಭ್ಯರ್ಥಿಗಳಲ್ಲಿಯೂ ಮನೆ ಮಾಡಿದೆ.

23 ವಾರ್ಡ್‍ಗಳಿಗೂ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಎಲ್ಲಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ 22, ಎಸ್‍ಡಿಪಿಐ 9, ಆಮ್ ಆದ್ಮಿ ಪಾರ್ಟಿ 4 ಹಾಗೂ ಕರ್ನಾಟಕ ರಾಷ್ಟ್ರ ಸಂಘ ಪಕ್ಷ 1 ವಾರ್ಡ್‍ನಲ್ಲಿ ಅಭ್ಯರ್ಥಿ ಗಳನ್ನು ಅಖಾಡಕ್ಕಿಳಿಸಿವೆ. ವಿವಿಧ ಪಕ್ಷಗಳಿ ಂದಲೇ ಒಟ್ಟು 82 ಮಂದಿ ಹಾಗೂ 26 ಮಂದಿ ಪಕ್ಷೇತರರು ಚುನಾವಣೆ ಎದುರಿಸುತ್ತಿದ್ದಾರೆ. 21ನೇ ವಾರ್ಡ್‍ನಲ್ಲಿ ಪಕ್ಷೇತರರಾಗಿ ಸ್ಪರ್ಧಿ ಸಿರುವ ಮಂಗಳಮುಖಿ ದೀಕ್ಷಾ ಅವರು ಕೂಡ ಚುನಾವಣಾ ಕಣದಲ್ಲಿ ಗಮನ ಸೆಳೆದಿದ್ದಾರೆ.