ಮೇಕ್ ಇನ್ ಇಂಡಿಯಾ ಮಾದರಿ ‘ಮೇಕ್ ಇನ್ ಕರ್ನಾಟಕ’

ಬೆಂಗಳೂರು, ನ.೭-ಎಲೆಕ್ಟಾçನಿಕ್ ತಯಾರಿಕಾ ಕಂಪನಿ ಗಳಿಗೆ ಒತ್ತು ನೀಡುವ ಮೂಲಕ `ಮೇಕ್ ಇನ್ ಇಂಡಿಯಾ’ ಮಾದರಿಯಲ್ಲಿ `ಮೇಕ್ ಇನ್ ಕರ್ನಾಟಕ’ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಈ ಕುರಿತು ಮಾತನಾಡಿರುವ ಐಟಿ-ಬಿಟಿ ಸಚಿವ ಡಾ.ಅಶ್ವಥ್ ನಾರಾಯಣ್ ಅವರು, ‘ಎಲೆ ಕ್ಟಾçನಿಕ್ ತಯಾರಿಕಾ ಕಂಪನಿಗಳಿಗೆ ಒತ್ತು ನೀಡುವ ಮೂಲಕ ಮೇಕ್ ಇನ್ ಇಂಡಿಯಾ ಮಾದರಿ ಯಲ್ಲಿ ಮೇಕ್ ಇನ್ ಕರ್ನಾಟಕ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಮುಂದಿನ ೫ ವರ್ಷಗಳಲ್ಲಿ ೧೦ ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದರು.

`ಕರ್ನಾಟಕ ಎಲೆಕ್ಟಾçನಿಕ್ಸ್ ವಿನ್ಯಾಸ ಮತ್ತು ಅಭಿವೃದ್ಧಿಗೆ ಹೆಸರುವಾಸಿಯಾಗಿದೆ. ಆದರೆ ಉತ್ಪಾದನೆಯ ಮೇಲೆ ಒತ್ತಡದ ಅಗತ್ಯವಿದೆ. ಸರ್ಕಾರದಿಂದ ಪ್ರೋತ್ಸಾಹಕಗಳನ್ನು ನೀಡುವ ಮೂಲಕ ಮತ್ತು ತ್ವರಿತ ಮತ್ತು ಸುಲಭವಾದ ಅನುಮತಿಗಳನ್ನು ನೀಡಿ, ಇದನ್ನು ಸಾಧಿಸಲು ಸರ್ಕಾರ ಯೋಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾ ಪಿಸಿದ ಮೇಕ್ ಇನ್ ಇಂಡಿಯಾ, ದೇಶದಲ್ಲಿ ಉತ್ಪನ್ನ ಗಳನ್ನು ಅಭಿವೃದ್ಧಿಪಡಿಸಲು, ತಯಾರಿಸಲು ಮತ್ತು ಜೋಡಿ ಸಲು ಕಂಪನಿಗಳನ್ನು ಉತ್ತೇಜಿಸುತ್ತದೆ. ಮೇಕ್ ಇನ್ ಕರ್ನಾಟಕ ಕೂಡ ಮೇಕ್ ಇನ್ ಇಂಡಿಯಾದ ಭಾಗವಾಗ ಲಿದೆ ಎಂದು ಸಚಿವರು ಹೇಳಿದರು.

ತಯಾರಕ ಸಂಸ್ಥೆಗಳಿಗೆ ಪತ್ರ: ಇನ್ನು ಈ ಹಿಂದೆ ದೆಹಲಿ ಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕರ್ನಾಟಕದಲ್ಲಿ ಎಲ್ಲಾ ರಾಜ್ಯಗಳ ಐಟಿ-ಬಿಟಿ ಸಚಿವರ ಸಮಾವೇಶ ನಡೆಸುವ ಕುರಿತು ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು. ನಾವು ಕಂಪನಿ ಗಳಿಗೆ ಪತ್ರಗಳನ್ನು ಬರೆಯುತ್ತಿದ್ದೇವೆ. ಅವರು ಕರ್ನಾಟಕ ದಲ್ಲಿ ಐಟಿ ಮತ್ತು ಬಿಟಿ ಕ್ಷೇತ್ರಗಳ ಬಗ್ಗೆ ಚರ್ಚಿಸಲು ಮತ್ತು ಚರ್ಚೆಗೆ ವೇದಿಕೆಯನ್ನು ಪಡೆದರೆ, ಅದು ನಾವು ಒಟ್ಟಾಗಿ ಬೆಳೆಯಲು ಸಹಾಯ ಮಾಡುತ್ತದೆ. ರಾಜ್ಯ ಸರ್ಕಾರವು ಕೌಶಲ್ಯ ಬೇಡಿಕೆ ಮೌಲ್ಯಮಾಪನ ಸಮೀಕ್ಷೆಯನ್ನು ಸಹ ನಡೆಸುತ್ತಿದೆ, ಇದು ಪ್ರದೇಶವಾರು ಕೌಶಲ್ಯದ ಅಗತ್ಯತೆಯ ಡೇಟಾವನ್ನು ಒದಗಿಸುತ್ತದೆ ಮತ್ತು ಯುವಕರಿಗೆ ನಿರ್ದಿಷ್ಟ ತರಬೇತಿ ನೀಡಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದರು.