ಮೈಸೂರಿನ ವಿವಿಧೆಡೆ `ಮಾಸ್ಕ್ ಡೇ’ ಆಚರಣೆ  

ಮೈಸೂರು, ಜೂ.18(ಪಿಎಂ)- ಕೊರೊನಾ ಸೋಂಕು ವಿರುದ್ಧ ಹೋರಾಡಲು ಮಾಸ್ಕ್ (ಮುಖಗವಸು) ಪ್ರಮುಖ ಅಸ್ತ್ರ. ಈ ಹಿನ್ನೆಲೆ ಯಲ್ಲಿ ರಾಜ್ಯಾದ್ಯಂತ ಸರ್ಕಾರದ ಆದೇ ಶದ ಮೇರೆಗೆ ಇಂದು (ಜೂ.18) `ಮಾಸ್ಕ್ ಡೇ’ ಆಚರಿಸುವ ಮೂಲಕ ಜನಜಾಗೃತಿ ಮೂಡಿಸಲಾಯಿತು. ಮೈಸೂರು ನಗರಾ ದ್ಯಂತ ಮಾಸ್ಕ್ ದಿನ ಆಚರಿಸಿ ಕೊರೊನಾ ನಿಯಂತ್ರಣದಲ್ಲಿ ಮಾಸ್ಕ್‍ನ ಮಹತ್ವದ ಬಗ್ಗೆ ಸಂದೇಶ ರವಾನಿಸಲಾಯಿತು.

ಪಾಲಿಕೆ: ಮೈಸೂರು ಮಹಾನಗರ ಪಾಲಿಕೆ ಯಿಂದ ನಡೆದ `ಮಾಸ್ಕ್ ಡೇ’ ಜಾಥಾಕ್ಕೆ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಡಿಸಿ ಅಭಿ ರಾಮ್ ಜಿ.ಶಂಕರ್ ಚಾಲನೆ ನೀಡಿದರು. ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು, ರೆಡ್‍ಕ್ರಾಸ್ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡು ಮಾಸ್ಕ್ ಧರಿಸುವುದರ ಉಪಯೋಗವನ್ನು ವಿವರಿಸಿದರು.

`ಮಾಸ್ಕ್ ಧರಿಸೋಣ ಕೋವಿಡ್‍ನಿಂದ ರಕ್ಷಿಸಿಕೊಳ್ಳೊಣ’…, `ಕೋವಿಡ್ ಮಹಾಮಾರಿ ದೂರವಿಡಲು ಸದಾ ಮಾಸ್ಕ್ ಬಳಸು ವುದು ಅಗತ್ಯ’…, `ಬನ್ನಿ ಎಲ್ಲರೂ ಮಾಸ್ಕ್ ಧರಿಸೋಣ, ಸಾಮಾಜಿಕ ಅಂತರ ಕಾಯ್ದು ಕೊಳ್ಳೋಣ… ಸ್ವಚ್ಛತೆ ಕಾಪಾಡಿಕೊಳ್ಳೋಣ…. ಕೊರೊನಾ ಸೋಂಕನ್ನು ತಡೆಗಟ್ಟೋಣ’ ಮೊದಲಾದ ಸಂದೇಶಗಳ ಫಲಕಗಳನ್ನು ಹಿಡಿದು ನೂರೊಂದು ಗಣಪತಿ ದೇವ ಸ್ಥಾನ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.

ಮೇಯರ್ ತಸ್ನೀಂ, ಉಪ ಮೇಯರ್ ಶ್ರೀಧರ್, ಪಾಲಿಕೆ ಆಯೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ, ಮಾಜಿ ಮೇಯರ್ ಅಯೂಬ್‍ಖಾನ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಮ.ವಿ.ರಾಮ ಪ್ರಸಾದ್, ಡಿಹೆಚ್‍ಓ ಡಾ.ವೆಂಕಟೇಶ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಹೆಚ್ಚುವರಿ ಆಯುಕ್ತ ಎಂ.ಎನ್.ಶಶಿಕುಮಾರ್, ಪಾಲಿಕೆ ಆರೋ ಗ್ಯಾಧಿಕಾರಿಗಳಾದ ಡಾ.ಜಯಂತ್, ಡಾ. ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.

ಬಸ್ ನಿಲ್ದಾಣ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ಗ್ರಾಮಾಂ ತರ ವಿಭಾಗದಿಂದ ಮೈಸೂರು ಸಬ್ ಅರ್ಬನ್ ಬಸ್ ನಿಲ್ದಾಣದ ಆವರಣದಲ್ಲಿ ಮಾಸ್ಕ್ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋ ಗ್ಯಾಧಿಕಾರಿ ಡಾ.ವೆಂಕಟೇಶ್ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿ, ಮಾಸ್ಕ್ ಧರಿಸುವುದರಿಂದ ಕೇವಲ ಕೊರೊನಾ ಸೋಂಕು ಮಾತ್ರವಲ್ಲದೆ, ಟಿಬಿ ಹರಡುವಿಕೆ ತಡೆಯಬಹುದು. ಜನರು ಮಾಸ್ಕ್ ಧರಿಸಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.

ಮೈಸೂರು ಗ್ರಾಮಾಂತರ ಸಾರಿಗೆ ವಿಭಾ ಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಮಾತನಾಡಿ, ಕೊರೊನಾ ನಿಯಂತ್ರಣದ ಸರಳ-ಸುಭದ್ರ ಅಸ್ತ್ರ ಎಂದರೆ ಅದು ಮಾಸ್ಕ್. ಈ ಬಗ್ಗೆ ಪ್ರಯಾಣಿಕರು, ಸಾರ್ವಜನಿ ಕರು, ನಮ್ಮ ಸಿಬ್ಬಂದಿಯಲ್ಲೂ ಜಾಗೃತಿ ಮೂಡಿಸಲು ಮಾಸ್ಕ್ ಡೇ ಆಚರಿಸುತ್ತಿ ದ್ದೇವೆ. ನಮ್ಮ ಎಲ್ಲಾ ಸಿಬ್ಬಂದಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ವಿತರಿಸಿದ್ದೇವೆ. ಜೊತೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದರು.

ಇದೇ ವೇಳೆ ಹಲವು ಪ್ರಯಾಣಿಕರಿಗೆ ಉಚಿತವಾಗಿ ಮಾಸ್ಕ್‍ಗಳನ್ನು ವಿತರಿಸ ಲಾಯಿತು. ಮಾಸ್ಕ್ ಧರಿಸಿಯೇ ಪ್ರಯಾ ಣಿಸಿ… ಕೊರೊನಾ ಸೋಂಕು ಹರಡುವಿಕೆ ತಡೆಯಲು ಕಡ್ಡಾಯವಾಗಿ ಮುಖಗವಸು ಧರಿಸಿ… ಮುಖಗವಸು ಧರಿಸಿ ನಿಮ್ಮ ಹಾಗೂ ಕುಟುಂಬದವರನ್ನು ರಕ್ಷಿಸಿ… ಹೀಗೆ, ಕೊರೊನಾ ನಿಯಂತ್ರಣ ಸಂಬಂಧದ ಹತ್ತು ಹಲವು ಸಂದೇಶವಿರುವ ಫಲಕಗಳನ್ನಿಡಿದು ಸಾರಿಗೆ ನಿಗಮದ ಸಿಬ್ಬಂದಿ ಜಾಥಾ ನಡೆಸಿ ಜಾಗೃತಿ ಮೂಡಿಸಿದರು. ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಿಂದ ಹೊರಟ ಜಾಥಾ, ಇರ್ವಿನ್ ರಸ್ತೆ, ಅಶೋಕ ರಸ್ತೆ, ದೊಡ್ಡ ಗಡಿಯಾರ ವೃತ್ತ, ಚಾಮರಾಜ ಒಡೆಯರ್ ವೃತ್ತ, ಜಯ ಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ), ಬೆಂಗಳೂರು ನೀಲಗಿರಿ ರಸ್ತೆ ಮಾರ್ಗವಾಗಿ ಸಂಚರಿಸಿತು. ಲಷ್ಕರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಸುರೇಶ್ ಕುಮಾರ್ ಇದ್ದರು.

ಗ್ರಂಥಾಲಯ ಇಲಾಖೆ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ, ಜಿಲ್ಲಾ ಕೇಂದ್ರ ಗ್ರಂಥಾಲಯ ಸಂಯುಕ್ತಾ ಶ್ರಯದಲ್ಲಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಮೈಸೂರು ನಗರ ಕೇಂದ್ರ ಗ್ರಂಥಾ ಲಯ ಆವರಣದಿಂದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಗ್ರಂಥಾಲಯದ ಸಿಬ್ಬಂದಿ ಮಾಸ್ಕ್ ಡೇ ಜಾಗೃತಿ ಜಾಥಾ ನಡೆಸಿದರು. ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯ ಕ್ಷೆಯೂ ಆದ ಮೇಯರ್ ತಸ್ನೀಂ ಜಾಥಾಗೆ ಚಾಲನೆ ನೀಡಿದರು. ಸಾರ್ವಜನಿಕ ಗ್ರಂಥಾ ಲಯ ಇಲಾಖೆ ಉಪನಿರ್ದೇಶಕ ಬಿ. ಮಂಜುನಾಥ್, ಪಾಲಿಕೆ ಸದಸ್ಯೆ ಹಾಗೂ ಗ್ರಂಥಾಲಯ ಪ್ರಾಧಿಕಾರ ಸದಸ್ಯೆ ಹೆಚ್.ಎಂ. ಶಾಂತಕುಮಾರಿ, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಜಿಲ್ಲಾ ಗ್ರಂಥಾಲಯ ಪ್ರಾಧಿ ಕಾರ ಉಪಾಧ್ಯಕ್ಷ ಸಿ.ರಾಮಶೇಷ್, ಮೈವಿವಿ ಗ್ರಂಥಾಲಯ ವಿಜ್ಞಾನ ವಿಭಾಗದ ಪ್ರಾಧ್ಯಾ ಪಕ ಎಂ.ಚಂದ್ರಶೇಖರ್, ಮೈಸೂರು ತಾಲೂಕು ವೈದ್ಯಾಧಿಕಾರಿ ಡಾ.ಮಹದೇವ ಪ್ರಸಾದ್, ದೇವರಾಜ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್ ಇದ್ದರು.

ಆರೋಗ್ಯ ಇಲಾಖೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನರ ಸಿಂಹರಾಜ ಪೊಲೀಸ್ ಠಾಣೆ ಜಂಟಿ ಆಶ್ರಯ ದಲ್ಲಿ ಮೈಸೂರಿನ ರಾಜೇಂದ್ರನಗರದ ಆರ್ಚ್ ಸರ್ಕಲ್ ಬಳಿ ಹಮ್ಮಿಕೊಂಡಿದ್ದ ಮಾಸ್ಕ್ ಡೇ ಜಾಗೃತಿ ಜಾಥಾಕ್ಕೆ ಡಿಹೆಚ್‍ಓ ಡಾ. ಆರ್.ವೆಂಕಟೇಶ್ ಚಾಲನೆ ನೀಡಿದರು. ರಾಜೇಂದ್ರ ನಗರದ ಹಲವು ರಸ್ತೆಗಳಲ್ಲಿ ವೈದ್ಯಕೀಯ ಸಿಬ್ಬಂದಿ, ಪೆÇಲೀಸ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜಾಥಾ ನಡೆಸಿದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾ ಧಿಕಾರಿ ಎಸ್.ಪ್ರಕಾಶ್, ತಾಲೂಕು ಆರೋ ಗ್ಯಾಧಿಕಾರಿ ಮಹದೇವ್ ಪ್ರಸಾದ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಪಿ.ರವಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿರಾಜ್ ಅಹಮ್ಮದ್, ನರಸಿಂಹರಾಜ ಠಾಣೆ ಪೆÇಲೀಸ್ ಇನ್ಸ್‍ಪೆಕ್ಟರ್ ಜಿ.ಶೇಖರ್, ಸಬ್‍ಇನ್ಸ್‍ಪೆಕ್ಟರ್ ಕೆ.ಎಸ್.ರವಿ ಮತ್ತಿತರರಿದ್ದರು.