ಉಚಿತವಾಗಿ ಸಾವಿರಾರು ಮಾಸ್ಕ್ ವಿತರಣೆ

ಮೈಸೂರು,ಏ.18-ಮೈಸೂರು ಮಹಾನಗರ ಪಾಲಿಕೆಯ 55ನೇ ವಾರ್ಡ್‍ನ ಪ್ರತಿ ಮನೆಗೂ ಕಾರ್ಪೊರೇಟರ್ ಮಾ.ವಿ.ರಾಮ ಪ್ರಸಾದ್ 20 ಸಾವಿರ ಮಾಸ್ಕ್‍ಗಳನ್ನು ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶನಿವಾರ ಸುಮಾರು 3000 ಮಾಸ್ಕ್‍ಗಳನ್ನು ತಮ್ಮ ವಾರ್ಡಿನ ವ್ಯಾಪ್ತಿಯಲ್ಲಿ ವಿತರಿಸಿದರು.

ವಾರ್ಡ್‍ನ ಪ್ರತಿ ಮನೆಯ ಸದಸ್ಯರಿಗೂ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಾಸ್ಕ್ ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ವೈರಸ್ ಬರದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ನಮ್ಮೆ ಲ್ಲರ ಕರ್ತವ್ಯ. ಮನೆಯಿಂದ ಯಾರೂ ಹೊರಗಡೆ ಹೋಗಬೇಡಿ. ಸರ್ಕಾರದ ಆದೇಶವನ್ನು ಪಾಲಿಸಿ. ಕೇಂದ್ರ ಸರ್ಕಾರ ಮನೆಯಿಂದ ಹೊರಗಡೆ ಹೊರಡುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿಯೇ ಹೊರಗಡೆ ಹೋಗುವಂತೆ ತಿಳಿಸಿದೆ. ಅದರಂತೆ ನಡೆದುಕೊಳ್ಳಿ. ಮನೆ ಯಲ್ಲಿರುವಾಗಲೂ ಮಾಸ್ಕ್ ಧರಿಸಿಕೊಂಡೇ ಇದ್ದರೂ ಏನೂ ತಪ್ಪಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡೇ ಮಾತನಾಡಿ ಎಂದರು.

ಇತ್ತೀಚಿನ ದಿನಗಳಲ್ಲಿ ಮಾಸ್ಕ್‍ಗಳು ಹೆಚ್ಚಾಗಿ ಸಿಗುತ್ತಿಲ್ಲ. ಅದರ ಬೆಲೆ ದುಬಾರಿಯಾಗಿರುವುದರಿಂದ, ತಮ್ಮ ವಾರ್ಡ್ ಹಾಗೂ ಸುತ್ತಮುತ್ತಲ ಪ್ರದೇಶದ ಮನೆಗಳಿಗೆ ಉಚಿತವಾಗಿ ಕೊಡುತ್ತಿದ್ದೇವೆ. ಇಂದು ಮೇದರಕೇರಿಯಿಂದ ಮಾಸ್ಕ್ ವಿತರಣೆ ಪ್ರಾರಂಭವಾಯಿತು. ಮುಂದಿನ ವಾರದಿಂದ ರಂಜಾನ್ ಉಪವಾಸ ಆರಂಭವಾಗಲಿದ್ದು, ಮುಸ್ಲಿಂ ಸಮುದಾಯದವರು ಮನೆಯಲ್ಲೇ ಎಲ್ಲ ಆಚರಣೆಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ಸಿ.ಸಂದೀಪ್, ವಿಕ್ರಮ್ ಐಯ್ಯಂಗಾರ್, ಧರ್ಮೇಂದ್ರ, ಶಿವು, ವೆಂಕಟೇಶ್, ಪುಟ್ಟಸ್ವಾಮಿ ಮುಂತಾದವರು ಹಾಜರಿದ್ದರು.