ಫೆ.1ರ ರಥಸಪ್ತಮಿಯಂದು ಸಾಮೂಹಿಕ ಸೂರ್ಯ ನಮಸ್ಕಾರ

ಮೈಸೂರು: ರಥಸಪ್ತಮಿ ಅಂಗವಾಗಿ ಫೆ.1ರಂದು ಮುಂಜಾನೆ 5.30 ಗಂಟೆಗೆ ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ 108 ಸಾಮೂ ಹಿಕ ಸೂರ್ಯ ನಮಸ್ಕಾರ ಕಾರ್ಯ ಕ್ರಮ ನಡೆಯಲಿದೆ. ಮೈಸೂರು ಯೋಗ ಒಕ್ಕೂಟ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸುಮಾರು 800 ಮಂದಿ ಯೋಗಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಯೋಗ ಒಕ್ಕೂಟದ ಅಧ್ಯಕ್ಷ ಡಾ. ಬಿ.ಪಿ.ಮೂರ್ತಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದೇ ವೇಳೆ ಸೂರ್ಯ ಯಜ್ಞ ಸಹ ನಡೆಯಲಿದ್ದು, ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಳ್ಳಲಿ ಚ್ಛಿಸುವವರೇ ಯೋಗ ಚಾಪೆ, ನೀರಿನ ಬಾಟಲಿ ತರುವುದು ಸೂಕ್ತ. ಇದರಲ್ಲಿ ಪಾಲ್ಗೊ ಳ್ಳಲು ಯಾವುದೇ ಶುಲ್ಕವಿಲ್ಲ ಎಂದರು.

ಅನೇಕ ಚರ್ಮರೋಗಗಳನ್ನು ನಿವಾ ರಿಸುವ ಸೂರ್ಯ ನಮಸ್ಕಾರ, ಉತ್ತಮ ಆರೋಗ್ಯಕ್ಕೂ ನೆರವಾಗಲಿದೆ. ರಥ ಸಪ್ತಮಿ ಯಂದು ಮುಂಜಾನೆ ಸೂರ್ಯ ನಮ ಸ್ಕಾರ ಮಾಡುವುದರಿಂದ ಆರೋಗ್ಯಕಾರಿ ಪರಿ ಣಾಮಗಳು ಉಂಟಾಗುತ್ತವೆ ಎಂದು ಹೇಳಿದರು. ಗೋಷ್ಠಿಯಲ್ಲಿ ಡಾ.ಎ.ಎಸ್.ಚಂದ್ರಶೇಖರ್, ದೇವ ರಾಜ್, ರಮೇಶ್‍ಕುಮಾರ್ ಉಪಸ್ಥಿತರಿದ್ದರು.