ತಿ.ನರಸೀಪುರ. ಏ.12(ಎಸ್.ಕೆ)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಡವರಿಗೆÉ ಉಚಿತವಾಗಿ ಔಷಧಗಳನ್ನು ಪೂರೈಸಲು ಸ್ಥಳೀಯ ಬಿ.ವೈ.ವಿಜಯೇಂದ್ರ ಅಭಿಮಾನಿ ಗಳ ಬಳಗ ಶ್ರಮಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಸಹ-ವಕ್ತಾರ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ರಘು ಹೇಳಿದರು.
ತಾಲೂಕಿನ ಹೆಳವರಹುಂಡಿ ಗ್ರಾಮದಲ್ಲಿ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗವು ಹಮ್ಮಿಕೊಂಡಿದ್ದ ಮನೆ ಮನೆಗೆ ಔಷಧ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನತೆ ಮನೆಯಿಂದ ಹೊರಬಂದು ಔಷಧಗಳನ್ನು ಪಡೆಯಲು ಸಾಧ್ಯವಿಲ್ಲದ ಕಾರಣ ಹಾಗೂ ಕೂಲಿಯನ್ನೇ ನಂಬಿ ಜೀವನ ನಡೆಸುವ ಅಶಕ್ತ ಬಡ ಜನರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುತ್ತಾರೆ. ಇಂತಹವರನ್ನು ಗುರುತಿಸಿ ವಿಜಯೇಂದ್ರ ಅಭಿಮಾನಿ ಬಳಗದ ಸ್ಥಳೀಯ ಸದಸ್ಯರು ಅವರ ಮನೆ ಮನೆಗೆ ಅವಶ್ಯಕ ಔಷಧ ಪದಾರ್ಥಗಳನ್ನು ತಲುಪಿಸುವ ಮಹತ್ತರ ಕಾರ್ಯ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಯಾರಿಗೆ ಔಷಧ ಬೇಕಾದರೂ ಸ್ಥಳೀಯ ಸದಸ್ಯರನ್ನು ಸಂಪರ್ಕಿಸಬಹುದು ಎಂದರು.
ಲಾಕ್‍ಡೌನ್ ಅವಧಿಯನ್ನು ತಿಂಗಳಾಂತ್ಯದ ವರೆವಿಗೂ ವಿಸ್ತರಿಸಲಾಗಿದ್ದು, ಕೊರೊನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಜನತೆ ಸಹಕರಿಸಬೇಕು. ಸರ್ಕಾರದ ಆದೇಶವನ್ನು ತಪ್ಪದೇ ಪಾಲಿಸಿ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಕುಟುಂಬದ ತಮ್ಮ ರಕ್ಷಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಲು ಜನತೆಯಲ್ಲಿ ಮನವಿ ಮಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೊರೊನಾ ಹಿಮ್ಮೆಟ್ಟಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಕೊರೊನಾ ಭೀತಿಗೆ ಯಾರೂ ಎದೆಗುಂದದೇ ಧೈರ್ಯವಾಗಿರುವಂತೆ ತಿಳಿಸಿದ ಅವರು, ಬಡ ಜನತೆಯೊಂದಿಗೆ ಸರ್ಕಾರಗಳಿದ್ದು ಉಚಿತವಾಗಿ ಪಡಿತರ ವಿತರಿಸಲು ಕ್ರಮ ಕೈಗೊಂಡಿದೆ. ಜನತೆ ಮನೆಯಿಂದ ಹೊರಬರದೇ ಸಹಕರಿಸ ಬೇಕು ಎಂದು ಮನವಿ ಮಾಡಿದರು.
ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಬಾಗಳಿ ಯೋಗೇಶ್ ಮಾತನಾಡಿ, ಅಭಿಮಾನಿ ಬಳಗವು ಲಾಕ್ ಡೌನ್ ಜಾರಿಯಾದಾಗಿನಿಂದಲೂ ಬಡ ಜನತೆಗೆ ಆಹಾರ ಪದಾರ್ಥ ಹಾಗೂ ಊಟೋ ಪಾಹಾರ ವ್ಯವಸ್ಥೆ ಕಲ್ಪಿಸುತ್ತಿದೆ. ಸದ್ಯ ಎರಡನೇ ಹಂತದಲ್ಲಿ ಮನೆ ಮನೆಗೆ ಉಚಿತವಾಗಿ ಔಷಧ ವಿತರಿಸಲು ಮುಂದಾಗಿದೆ. ಅವಶ್ಯಕತೆ ಇರುವವರು ಸಂಘದ ಸದಸ್ಯರಿಗೆ ಕರೆ ಮಾಡಿದರೆ ಮನೆಗೆ ಬಂದು ಔಷಧ ತಲುಪಿಸಲಾಗುವುದು ಮಾಹಿತಿ ನೀಡಿದರು. ಬಳಗದ ಅಧ್ಯಕ್ಷ ಬಿ.ಮಹೇಶ್, ದೀಪು, ಬಾರ್ ಮಂಜು ಕುಮಾರ್, ಕಿಚ್ಚ ಕುಮಾರ್, ನಂದ, ಅಭಿ, ವಿಜಯ್, ನಂದೀಶ್, ರಕ್ಷಿತ್ ಮತ್ತಿತರರು ಹಾಜರಿದ್ದರು.