ಮೈಸೂರಿನ ಬೀದಿಶ್ವಾನಗಳಿಗೆ ಮೇಘಾಲಯ ವಿದ್ಯಾರ್ಥಿನಿಯಿಂದ ಆಹಾರ

ಮಾ.23ರಿಂದಲೂ ಸದ್ದಿಲ್ಲದೆ ಮೂಕ ಪ್ರಾಣಿಗಳ ಸೇವೆಯಲ್ಲಿ ನಿರತ
ಮೈಸೂರು,ಏ.9(ಎಂಟಿವೈ)- ಲಾಕ್‍ಡೌನ್ ಜನರನ್ನು ತತ್ತರಿಸುವಂತೆ ಮಾಡಿರುವುದ ಲ್ಲದೆ ಬೀದಿನಾಯಿಗಳನ್ನು ಕಂಗೆಡಿಸಿದೆ. ಮೈಸೂರಿನಲ್ಲಿಯೂ ದೇಶಿತಳಿ ಬೀದಿ ನಾಯಿಗಳು ಆಹಾರ ಅರಸಿ ಒಂದೆಡೆ ಯಿಂದ ಮತ್ತೊಂದೆಡೆಗೆ ಅಲೆಯುತ್ತಿವೆ. ಮೈಸೂರಿನಲ್ಲಿರುವ ಮೇಘಾಲಯದ ವಿದ್ಯಾರ್ಥಿನಿಯೊಬ್ಬರು 50ಕ್ಕೂ ಬೀದಿ ಶ್ವಾನಗಳ ಹಸಿವನ್ನು ಪ್ರತಿದಿನವೂ ತಣಿ ಸುವ ಕಾಯಕ ಮಾಡುತ್ತಿದ್ದಾರೆ.

ಮೈಸೂರಿನ ದತ್ತ ನಗರದಲ್ಲಿ ವಾಸವಿದ್ದು, ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಎಸ್ ಡಬ್ಲ್ಯು ವ್ಯಾಸಂಗ ಮಾಡುತ್ತಿರುವ ಮೇಘಾ ಲಯದ ಮೊನಿಕಾ ಖರ್ಸಂಚೈ, ಬೀದಿಶ್ವಾನ ಗಳ ಹಸಿವು ತಣಿಸುತ್ತಿದ್ದಾರೆ. ಯಾವುದೇ ಪ್ರಚಾರವಿಲ್ಲದೆ ತನ್ನ ಪಾಡಿಗೆ ತಾನು ಪ್ರಾಣಿಗಳ ಸೇವೆಯಲ್ಲಿ ನಿರತರಾಗಿರುವ ಯುವತಿಯ ಪ್ರಾಣಿಪ್ರೀತಿ ಸ್ಥಳೀಯರ ಮನಗೆದ್ದಿದೆ.

ಹೋಟೆಲ್, ಫಾಸ್ಟ್‍ಫುಡ್, ಬೇಕರಿ, ಅಂಗಡಿ ಮುಂಗಟ್ಟುಗಳಲ್ಲಿ ಸಿಗುತ್ತಿದ್ದ ಅಲ್ಪಸ್ವಲ್ಪ ಆಹಾರವನ್ನು ತಿಂದು ಜೀವಿಸುತ್ತಿದ್ದ ಬೀದಿನಾಯಿಗಳು ಲಾಕ್‍ಡೌನ್‍ನಿಂದಾಗಿ ಕಂಗೆಟ್ಟಿವೆ. ಹಾಗಾಗಿ, ಮಾ.24ರಿಂದಲೇ ಬೀದಿನಾಯಿಗಳಿಗೆ ಪ್ರತಿಸಂಜೆ ಊಟ ಹಾಕಲು ಆರಂಭಿಸಿದೆ. ಮೊದಲು ನನ್ನದೇ ಹಣದಲ್ಲಿ ಈ ಕಾರ್ಯ ಆರಂಭಿಸಿದೆ. ಬಳಿಕ ನನ್ನ ಕೋರಿಕೆ ಮೇರೆಗೆ ಪೀಪಲ್ ಪಾರ್ ಅನಿಮಲ್ಸ್ (ಪಿಎಫ್‍ಎ) ಸಂಸ್ಥೆ 12 ಕೆಜಿ ಪೆಡಿಗ್ರಿ ಕೊಡುಗೆಯಾಗಿ ನೀಡಿದೆ. ಇದ ರೊಂದಿಗೆ ನನ್ನ ಇಬ್ಬರು ಸ್ನೇಹಿತರೂ ಕೈಜೋಡಿಸಿದ್ದಾರೆ ಎಂದು ‘ಮೈಸೂರು ಮಿತ್ರ’ನಿಗೆ ಮೋನಿಕಾ ತಿಳಿಸಿದ್ದಾರೆ.

368 ಬೀದಿಶ್ವಾನಗಳಿಗೆ ಆಹಾರ: ಮನೆ ಯಲ್ಲಿ 5 ಕೆಜಿ ಅಕ್ಕಿಯಲ್ಲಿ ಅನ್ನ ಮಾಡಿ, ಅದಕ್ಕೆ ಪಾರ್ಲೆಜಿ ಬಿಸ್ಕತ್, ಪೆಡಿಗ್ರಿ ಮಿಶ್ರಣ ಮಾಡಿ, ಬಕೆಟ್‍ನಲ್ಲಿ ತುಂಬಿಕೊಂಡು ಪ್ರತಿಸಂಜೆ 7ರಿಂದ ರಾತ್ರಿ 9.30ರವರೆಗೂ ದತ್ತನಗರ, ಚಾಮುಂಡಿಪುರಂ, ಬಲ್ಲಾಳ್ ವೃತ್ತ, ಗುಂಡೂರಾವ್ ನಗರ ಮೊದಲಾ ದೆಡೆ ದಾರಿಯಲ್ಲಿ ಕಾಣುವ ಪ್ರತಿ ಬೀದಿ ನಾಯಿ, ಬೆಕ್ಕಿಗೂ ಬೌಲ್‍ನಲ್ಲಿ ಊಟ ಬಡಿಸು ತ್ತಿದ್ದೇನೆ. ಪ್ರತಿದಿನ 45-50 ನಾಯಿಗಳಂತೆ ಈವರೆಗೆ 368 ಶ್ವಾನಗಳಿಗೆ ಊಟ ಹಾಕಿ ದ್ದೇನೆ. 7-8 ಬಟ್ಟಲನ್ನು ತೆಗೆದುಕೊಂಡು ಹೋಗುತ್ತೇನೆ. ಒಂದು ನಾಯಿ ಊಟ ತಿಂದ ನಂತರ ಬಟ್ಟಲನ್ನು ತೊಳೆದು, ಬೇರೆ ನಾಯಿಗೆ ಊಟ ಹಾಕುತ್ತೇನೆ. ಬೀದಿ ನಾಯಿಗಳೂ ನಮ್ಮಂತೆಯೇ ಜೀವಿಸುವ ಹಕ್ಕು ಹೊಂದಿವೆ. ಜನರು ತಮ್ಮ ಬಡಾ ವಣೆಯ ಬೀದಿನಾಯಿಗಳಿಗೆ ಊಟ ಹಾಕಲು ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು. ಕೆಲ ಬೀದಿನಾಯಿ ಗಳು ಪೆಡಿಗ್ರಿ ತಿನ್ನುವುದಿಲ್ಲ. ಅದಕ್ಕಾಗಿ ಅನ್ನದಲ್ಲಿ ಪೆಡಿಗ್ರಿ ಮಿಶ್ರಣ ಮಾಡುತ್ತೇನೆ. ದಿನಕ್ಕೆ ಎಷ್ಟು ಖರ್ಚಾಗುತ್ತದೆ ಎನ್ನುವು ದನ್ನು ಲೆಕ್ಕ ಹಾಕುವುದಿಲ್ಲ. ನಮ್ಮ ಉದ್ದೇಶ ಬೀದಿನಾಯಿಗಳ ಹಸಿವಿನಿಂದ ಪರಿತಪಿಸ ಬಾರದು ಎನ್ನುವುದಾಗಿದೆ ಎಂದರು.