ಮಧುರ ಗೀತೆಗಳ ಗಾನ ಮಾಧುರ್ಯ

ಮೈಸೂರು: ಸುಂದರ ಮುಸ್ಸಂಜೆಯ ಚುಟು ಚುಟು ಮಳೆಯಲಿ ಸುಮಧುರ ಕನ್ನಡ ಚಲನಚಿತ್ರ ಗೀತೆÀಗಳು ಕಲಾರಸಿಕರಿಗೆ ರಸದೌತಣ ನೀಡಿತು.

ಮೈಸೂರಿನ ನಾದಬ್ರಹ್ಮ ಸಂಗೀತ ಸಭಾಂ ಗಣದಲ್ಲಿ ಮಿತ್ರ ಸಿಂಧು ವೃಂದ ಆಯೋಜಿ ಸಿದ್ದ ಸ್ವರ-ಸಂಜೆ ಕಾರ್ಯಕ್ರಮದಲ್ಲಿ ಗಾಯಕ ರಾದ ಎ.ಎಸ್.ರವಿಪ್ರಕಾಶ್, ಎಸ್.ರಂಗ ನಾಥ್, ವಿ.ರವಿಕುಮಾರ್, ಆರ್.ವಿ.ರಮಾ ಮಣ , ರಾಧಿಕಾ ದ್ವಾರಕನಾಥ್, ರಶ್ಮಿ ವಿ.ರಾವ್, ಅನನ್ಯ ಆರ್.ಭಟ್, ಅಮೂಲ್ಯ ಆರ್.ಭಟ್ ಮತ್ತಿತರರ ಸುಮಧುರ ಕಂಠದಿಂದ ಹೊರ ಹೊಮ್ಮಿದ ಹಾಡುಗಳು ಸಂಗೀತ ಪ್ರಿಯರು ತಲೆದೂಗುವಂತೆ ಮಾಡಿದವು.

ಮೊದಲಿಗೆ ವೇದಿಕೆ ಹಂಚಿಕೊಂಡ ಗಾಯಕ ಎ.ಎಸ್ ರವಿಪ್ರಕಾಶ್ ‘ಮಲಯ ಮಾರುತ’ ಚಿತ್ರದ ಶಾರದೆ ದಯೆ ತೋರಿದೆ’ ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗಾಯಕ ರಂಗನಾಥ್ ‘ಪ್ರೇಮಾನುಬಂದ’ ಚಿತ್ರದ ‘ಬೆಳದಿಂ ಗಳೊಂದು ಹೆಣ್ಣಾಗಿ ಬಂದಂತೆ ಕಂಡೆ’ ಹಾಡನ್ನು ಹಾಡಿದರೆ, ಗಾಯಕ ರವಿ ಕುಮಾರ್ ‘ಹಾಲು ಜೇನು’ ಚಿತ್ರದ ‘ಹಾಲು ಜೇನು ಒಂದಾದ ಮೇಲೆ’ ಹಾಡನ್ನು ಸುಮಧುರವಾಗಿ ಹಾಡಿ ಎಲ್ಲರನ್ನು ರಂಜಿಸಿದರು. ಗಾಯಕಿಯರಾದ ಅಮೂಲ್ಯ, ಅನನ್ಯ ‘ಹೊಸಬೆಳಕು’ ಚಿತ್ರದ `ತೆರೆದಿದೆ ಮನೆ ಓ ಬಾ ಅತಿಥಿ’ ಹಾಡಿದರೆ, ಗಾಯಕಿ ರಶ್ಮಿ ‘ಗಾಳಿ ಮಾತು’ ಚಿತ್ರದ ‘ಒಮ್ಮೆ ನಿನ್ನನ್ನು ಕಣ್ತುಂಬ’ ಹಾಡನ್ನು ಹಾಡಿದರು. ಎ.ಎಸ್ ರವಿಪ್ರಕಾಶ್, ಎಸ್.ರಂಗನಾಥ್, ವಿ.ರವಿಕುಮಾರ್, ಆರ್.ವಿ.ರಮಾಮಣ , ರಾಧಿಕಾ ದ್ವಾರಕನಾಥ್, ರಶ್ಮಿ ವಿ.ರಾವ್, ಅನನ್ಯ ಆರ್.ಭಟ್, ಅಮೂಲ್ಯ ಆರ್.ಭಟ್ ಅವರು, ‘ಕವಿರತ್ನ ಕಾಳಿದಾಸ’ ಚಿತ್ರದ ‘ಓ ಪ್ರಿಯತಮ’, ‘ಮಾಂಗಲ್ಯ ಭಾಗ್ಯ’ ಚಿತ್ರದ ‘ಆಸೆಯ ಭಾವ ಒಲವಿನ ಜೀವ’, ‘ಬೆಳ್ಳಿ ಮೋಡ’ ಚಿತ್ರದ ಮೂಡಲ ಮನೆಯ ಮುತ್ತಿನ ನೀರಿನ’, ‘ನಾ ಮೆಚ್ಚಿದ ಹುಡುಗ’ ಚಿತ್ರದ ‘ನಾ ಮಚ್ಚಿದ ಹುಡುಗನಿಗೆ’, ‘ಚಲಿಸುವ ಮೋಡಗಳು’ ಚಿತ್ರದ ಜೇನಿನ ಹೊಳೆಯೋ ಹಾಲಿನ ಮಳೆಯೋ’ ಹಾಡು ಸೇರಿದಂತೆ 25 ಹಾಡುಗಳನ್ನು ಹಾಡಿ ನೆರೆದವರ ಮನತಣ ಸಿದರು.