ಕೋವಿಡ್ ನಿಯಮ ಉಲ್ಲಂಘಿಸಿದ ವ್ಯಾಪಾರಿಗಳು-ಗ್ರಾಹಕರು

ಯಳಂದೂರು,ಏ.25(ವಿ.ನಾಗರಾಜು)-ವಾರಾಂತ್ಯ ಕಫ್ರ್ಯೂ ಎರಡನೇ ದಿನವಾದ ಭಾನುವಾರ ಅಂಗಡಿ-ಮುಂಗಟ್ಟುಗಳ ಮುಂದೆ ಜನಸಂದಣಿ ಏರ್ಪಟ್ಟು, ಕೊರೊನಾ ನಿಯಮ ಗಾಳಿಗೆ ತೋರಿದ ಘಟನೆಗಳು ಪಟ್ಟಣದಲ್ಲಿ ಕಂಡುಬಂತು.

ಭಾನುವಾರ ಬೆಳಗ್ಗೆಯಿಂದಲೇ ವ್ಯಾಪಾರಿಗಳು ಗ್ರಾಹಕರ ಜೊತೆಯಲ್ಲಿ ಬ್ಯುಸಿಯಾಗಿದ್ದರು. ನಿತ್ಯ ಬಳಕೆ ವಸ್ತು ಗಳನ್ನು ಖರೀದಿಸಲು ಹಳ್ಳಿಗಳಿಂದ ಪಟ್ಟಣಕ್ಕೆ ಆಗಮಿಸಿದ ಜನರು ಅಂಗಡಿಗಳ ಮುಂದೆ ಗುಂಪು ಕಟ್ಟಿ ನಿಂತು ದಿನಸಿ ಪದಾರ್ಥ ಖರೀದಿಸುತ್ತಿದ್ದರೆÉ, ಅಂಗಡಿ ಮಾಲೀಕರು ಸಂಪಾದನೆ ಖುಷಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಕೊವೀಡ್ ನಿಯಮ ಗಾಳಿಗೆ ತೂರಿದರು. ಪ್ರಜ್ಞಾವಂತ ನಾಗರಿಕರಿಂದ ಆಕ್ಷೇಪ ವ್ಯಕ್ತವಾಯಿತು.
ಗಗನಕ್ಕೇರಿದ ತರಕಾರಿ ಬೆಲೆ : ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉತ್ಪನ್ನ ಮಾರು ಕಟ್ಟೆಗಳು ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ತರಕಾರಿಗಳು ಲಭ್ಯವಾ ಗಿರಲಿಲ್ಲ. ಇದನ್ನರಿತ ತರಕಾರಿ ವ್ಯಾಪಾರಿಗಳು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ತರಕಾರಿಗಳನ್ನು ಮಾರುವ ಮೂಲಕ ಸುಲಿಗೆಗೆ ಇಳಿದಿದ್ದರು. ಕೆ.ಜಿ. ಬೀನಿಸ್‍ಗೆ 100 ರೂ. ಟೊಮೋಟೊಗೆ 30 ರೂ., ಬದನೆಕಾಯಿ 40, ಆಲೂಗೆಡ್ಡೆ 40, ಕ್ಯಾರೇಟ್ 80 ರೂ.ಗೆ ಮಾರುವ ಮೂಲಕ ಜನರನ್ನು ಸುಲಿಗೆ ಮಾಡಿದರು.

ಮಾಂಸಕ್ಕೆ ಮುಗಿಬಿದ್ದರು : ಚಿಕನ್ ಹಾಗೂ ಮಟನ್ ಅಂಗಡಿಗಳ ಮುಂದೆ ಮಾಂಸ ಕೊಳ್ಳಲು ಗ್ರಾಹಕರು ಒಬ್ಬರ ಹಿಂದೆ ಒಬ್ಬರಂತೆ ಮುಗಿ ಬೀಳುತ್ತಿದ್ದರು. ಯಾವುದೇ ಕೂೀವಿಡ್ ನಿಯಮ ಪಾಲನೆ ಕಂಡು ಬರಲಿಲ್ಲ. 10 ಗಂಟೆ ಸಮೀಪಿ ಸುದಂತೆ ಮಾಂಸದ ಅಂಗಡಿ ಮಾಲೀ ಕರು ಮನೆಗಳಿಂದಲೇ ಮಾರಾಟದ ದಂಧೆ ಆರಂಭಿಸಿದರು. ಮದ್ಯದಂಗಡಿ ಗಳು ಮುಚ್ಚಿದ್ದರಿಂದ ಮದ್ಯಪ್ರಿಯರಿಗೆ ನಿರಾಸೆಯಾಯಿತು.
ಬೆಳಗ್ಗೆ 10 ಗಂಟೆ ವೇಳೆಗೆ ರಸ್ತೆಗಿಳಿದ ಪೆÇಲೀಸರು ಹಾಗೂ ಪಪಂ ಆಡಳಿತ ವರ್ಗ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಧÀ್ವನಿವರ್ಧಕಗಳಲ್ಲಿ ಪ್ರಚಾರ ಮಾಡುತ್ತಿದ್ದಂತೆ ವ್ಯಾಪಾರಿಗಳು ಅಂಗಡಿ ಗಳನ್ನು ಮುಚ್ಚಿ ಮನೆಗಳಿಗೆ ತೆರಳಿದರು. ಪಪಂ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಅವರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ಅಂಗಡಿ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಸಿದರು. ಬೈಕ್‍ನಲ್ಲಿ ಪಟ್ಟಣದ ಪ್ರತಿವಾರ್ಡ್‍ಗೆ ಭೇಟಿ ನೀಡಿ ಅಂಗಡಿಗಳನ್ನು ಬಾಗಿಲು ಮುಚ್ಚಿಸುವಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾದರು. ಪೊಲೀಸರು ಸೇರಿದಂತೆ ಅಧಿಕಾರಿಗಳು ಗಸ್ತಿನಲ್ಲಿದ್ದರಿಂದ ವಾಹನಗಳ ಸಂಚಾರ ವ್ಯವಸ್ಥೆ ಬಹಳ ವಿರಳವಾಗಿತ್ತು. ನಿಯಮ ಉಲ್ಲಂಘನೆಗಳ ನಡುವೆಯೇ ವಾರಾಂತ್ಯ ಕಫ್ರ್ಯೂ ಯಶ ಕಂಡಿತು.