ಮೈಸೂರಿನ ಎಂ.ಜಿ.ರಸ್ತೆ ಮಾರುಕಟ್ಟೆ ಏ.14ರವರೆಗೆ ಬಂದ್; ದಸರಾ ವಸ್ತು ಪ್ರದರ್ಶನ ಆವರಣಕ್ಕೆ ಶಿಫ್ಟ್

ಮೈಸೂರು, ಮಾ.27(ಆರ್ ಕೆಬಿ)- ಮೈಸೂರಿನ ಎಂಜಿ ರಸ್ತೆಯಲ್ಲಿರುವ ಮಾರುಕಟ್ಟೆಯನ್ನು ಮಾರ್ಚ್ 28 ರಿಂದ ಬಂದ್ ಮಾಡಲು ವ್ಯಾಪಾರಸ್ಥರ ಪರ ತತ್ವವಾಗಿ ಸಂಘದವರು ತಿಳಿಸಿದ್ದಾರೆ. ಇಂದು ತರಕಾರಿ ಮಾರುಕಡ್ಟೆಯ ವರ್ತಕರು ಸಾರ್ವಜನಿಕರ ಹಿತದೃಷ್ಟಿಯಿಂದ ನಾಳೆ ಶನಿವಾರದಿಂದ ತರಕಾರಿ ಮಾರಾಟ ಮಾಡುವುದಿಲ್ಲ ಎಂದು ತಿಳಿದಿದ್ದಾರೆ.

ಸರ್ಕಾರದ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದಿನ ಆದೇಶ ಬರುವವರೆಗೆ ಎಂ.ಜಿ.ರಸ್ತೆಯಲ್ಲಿ ತರಕಾರಿ ಮಾರಾಟ ಇರುವುದಿಲ್ಲ ಎಂದು ತರಕಾರಿ ಮಾರಾಟ ಸಂಘದ ಪ್ರಧಾನ ಸಂಚಾಲಕ ಬೆಟ್ಟಯ್ಯ ಕೋಟೆ ಪತ್ರಕರ್ತರಿಗೆ ತಿಳಿಸಿದ್ದಾರೆ.

ಎಂ.ಜಿ.ರಸ್ತೆ ಮಾರುಕಟ್ಟೆಗೆ ರೈತರು ತರಕಾರಿ ತಂದರೆ ಅವರೇ ಹೊರಗೆ ಮಾರಾಟ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿರುವ ವರ್ತಕರು, ರೈತರಿಗೆ ನಾವು ತೊಂದರೆ ಮಾಡುವುದಿಲ್ಲ ಎಂದು ಹೇಳಿದರು.

ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲಿ 450ಕ್ಕೂ ಹೆಚ್ಚು ತರಕಾರಿ ಮಾರಾಟ ಮಾಡುವ ವರಿದ್ದು ಲಕ್ಷಾಂತರ ರೂ. ಮಾರಾಟದ ವಹಿವಾಟಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಮೈಸೂರು ಜಿಲ್ಲಾಡಳಿತ ಮಾರುಕಟ್ಟೆಯ ಸ್ಥಳವನ್ನು ವಸ್ತು ಪ್ರದರ್ಶನ ಆವರಣಕ್ಕೆ ಸ್ಥಳಾಂತರಿಸಲು ಆದೇಶ ಮಾಡಿತ್ತು. ಆದರೆ ತರಕಾರಿ ಮಾರಾಟಗಾರರು ಅಲ್ಲಿಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದಾರೆ. ತರಕಾರಿ ಮಾರಾಟಕ್ಕೆ ಸ್ಥಳ ಯೋಗ್ಯವಾಗಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.