ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ

ಹನಗೋಡು: ರಾಜ್ಯದಲ್ಲಿ ಹೈನುಗಾರರಿಗೆ ಪ್ರತಿ ಲೀ. ಹಾಲಿಗೆ ಸರಾಸರಿ 23.50 ರೂ. ದೊರೆಯುತ್ತಿದ್ದು, ಜೊತೆಗೆ ಸರ್ಕಾರ ಪ್ರತಿ ಲೀ.ಗೆ ಜಿಡ್ಡಿನಾಂಶದ ಆಧಾರದ ಮೇಲೆ 5 ರೂ. ವರೆವಿಗೂ ಪ್ರೋತ್ಸಾಹಧನ ನೀಡು ತ್ತಿರುವುದು ದೇಶದಲ್ಲೇ ಪ್ರಥಮ ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಎಸ್.ಕುಮಾರ್ ತಿಳಿಸಿದರು.ಹನಗೋಡು ಹೋಬಳಿಯ ಕಡೇಮನು ಗನಹಳ್ಳಿ-ಬೋವಿಕಾಲೋನಿ ಗ್ರಾಮದಲ್ಲಿ 1789ನೇ ನೂತನ ಹಾಲು ಉತ್ಪಾದಕರ ಸಹ ಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಹುಣಸೂರು ತಾಲೂಕಿನ 178 ಸಂಘ ಗಳಿಂದ ಪ್ರತಿನಿತ್ಯ 85 ಸಾವಿರ ಲೀ. ಹಾಲು ಉತ್ಪಾದಿಸುತ್ತಿದ್ದು, ಮೈಸೂರು-ಚಾಮ ರಾಜನಗರ ಒಕ್ಕೂಟದಿಂದ ಒಟ್ಟು 7.25 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಗ್ರಾಮಸ್ಥರು ನೂತನ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲು ನೀಡಿದರೆ ಮಾತ್ರ ಸಂಘ ಬೆಳವಣಿಯಾಗಲು ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ವಿಸ್ತರಣಾಧಿಕಾರಿ ಬಿ.ಗೌತಮ್, ಸಂಘದ ಅಧ್ಯಕ್ಷ ವೃಷಬೇಂದ್ರ, ಕಾರ್ಯದರ್ಶಿ ಕಿರಣ್, ಗ್ರಾಮದ ಮುಖಂಡರಾದ ಹಲಗೇ ಗೌಡ, ತಿಮ್ಮಯ್ಯ, ತಮ್ಮಬೋವಿ, ಗೋವಿಂದ ಬೋವಿ, ರಾಮಯ್ಯ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರಿದ್ದರು.