ಶ್ರೀರಾಮಾನುಜಾಚಾರ್ಯರ ಸಹಸ್ರ ವರ್ಷದ ಜನ್ಮೋತ್ಸವ ಸರ್ಕಾರದಿಂದ ಆಚರಿಸಲು ಆಗ್ರಹ

ಮೈಸೂರು,ಏ.19(ಪಿಎಂ)- ವಿಶಿಷ್ಟಾ ದ್ವೈತ ಸಿದ್ಧಾಂತದ ಪ್ರತಿಪಾದಕ ಭಗವದ್ ಶ್ರೀರಾಮಾನುಜಾಚಾರ್ಯರ 1004ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ `ಆಧುನಿಕ ಭಾರತದಲ್ಲಿ ಶ್ರೀರಾಮಾನುಜರು’ ಸ್ಮರಣಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ `ಶ್ರೀರಾಮಾನುಜ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮೈಸೂರಿನ ಶ್ರೀರಾಂಪುರ ಎಸ್‍ಬಿಎಂ ಕಾಲೋನಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವ ಸ್ಥಾನದ ಶ್ರೀಶಂಕರ ಪ್ರಾರ್ಥನಾ ಮಂದಿರ ದಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆ ಮತ್ತು ವಿವೇಕಾನಂದನಗರ ಬ್ರಾಹ್ಮಣ ಮಹಾಸಭಾದ ಜಂಟಿ ಆಶ್ರಯದಲ್ಲಿ ಏರ್ಪ ಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಯತಿರಾಜ್ ಸಂಪತ್‍ಕುಮಾರ್ (ಧಾರ್ಮಿಕ ಕ್ಷೇತ್ರ), ಕೆ.ರಘುರಾಂ ವಾಜಪೇಯಿ (ಸಹ ಕಾರಿ), ಮುರಳಿ (ಶಿಕ್ಷಣ), ರಾಜಾರಾಂ (ಸಾಮಾ ಜಿಕ), ಭಾರ್ಗವಿ ಹೆಮ್ಮಿಗೆ (ಪತ್ರಿಕಾರಂಗ) ಹಾಗೂ ಜಿ.ಹರ್ಷವರ್ಧನ (ಧಾರ್ಮಿಕ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀರಾಮಾನುಜಾಚಾರ್ಯರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಮಾರಂಭ ಉದ್ಘಾಟಿಸಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಭಾರತದಲ್ಲಿ ಸಹಸ್ರ ವರ್ಷದ ಹಿಂದೆಯೇ ಶ್ರೀರಾಮಾನುಜರು ಸಮಾ ನತೆ ಪ್ರತಿಪಾದಿಸಿದ್ದರು. ದೇವಸ್ಥಾನ, ಗುಡಿ ಗೋಪುರದೊಳಗೆ ಎಲ್ಲಾ ಜಾತಿ-ಪಂಗಡದವ ರಿಗೂ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು. ಇವತ್ತಿಗೂ ತಮಿಳುನಾಡಿನ ಶ್ರೀರಂಗಂನಲ್ಲಿ ಶ್ರೀರಾಮಾನುಜರ ದೇಹವನ್ನು ಸಂರಕ್ಷಿಸಿ ಇಡಲಾಗಿದೆ ಎಂದು ಸ್ಮರಿಸಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ರಾಮಾ ನುಜರು ಎಲ್ಲಾ ಜನಾಂಗಕ್ಕೂ ಒಳಿತಾಗಲಿ ಎಂದು ಜಪಿಸುವಂತೆ ಕರೆ ನೀಡಿದ್ದರು. ಶ್ರೀರಾಮಾನುಜರು ಜನಿಸಿ ಸಾವಿರ ವರ್ಷ ಗಳಾಗಿದ್ದು, ಸರ್ಕಾರದ ವತಿಯಿಂದ ಅವರ ಸಹಸ್ರ ವರ್ಷದ ಜನ್ಮೋತ್ಸವ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಯುವ ಮುಖಂಡ ಎನ್.ಎಂ. ನವೀನ್‍ಕುಮಾರ್ ಮಾತನಾಡಿ, ರಾಮಾ ನುಜ ರಸ್ತೆಯಲ್ಲಿ ಶ್ರೀರಾಮಾನುಜರ ಪ್ರತಿಮೆ ಸ್ಥಾಪಿಸುವುದಾಗಿ ಕಳೆದ 4 ವರ್ಷಗಳ ಹಿಂದೆಯೇ ಜನಪ್ರತಿನಿಧಿಗಳು ಭರವಸೆ ನೀಡಿ ದ್ದರು. ಆದರೆ ಇನ್ನೂ ಅದು ಕಾರ್ಯಗತ ವಾಗಿಲ್ಲ. ಸ್ಥಳೀಯ ಆಡಳಿತದಿಂದ ಇದನ್ನು ಮಾಡಲಾಗದಿದ್ದರೆ ಸಮುದಾಯವೇ ಮಾಡಲು ಸಿದ್ಧವಿದೆ ಎಂದು ತಿಳಿಸಿದರು.

ಮೇಲುಕೋಟೆಯ ವೆಂಗಿಪುರ ಮಠದ ಇಳೈಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿಸಿ ದ್ದರು. ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಎಂ.ಆರ್.ಬಾಲಕೃಷ್ಣ, ವಿವೇಕಾ ನಂದನಗರ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಯರಾಂ, ಕಾರ್ಯದರ್ಶಿ ಎ.ನಿರಂಜನ್, ಸಹ ಕಾರ್ಯದರ್ಶಿ ಮಂಜುನಾಥ್, ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯ ದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ, ವಿನಯ್ ಕಣಗಾಲ್, ಮುಖಂಡರಾದ ನರಸಿಂಹಪ್ರಸಾದ್, ರಾಕೇಶ್ ಭಟ್, ಚಕ್ರಪಾಣಿ, ಟಿ.ಎಸ್.ಅರುಣ್, ಯೋಗ ಮುರಳಿ, ಸುಚೀಂದ್ರ, ವಿಕಾಸ್ ಶಾಸ್ತ್ರಿ, ಅಜಯಶಾಸ್ತ್ರ, ಮಧುಸೂದನ್ ಮತ್ತಿತರರು ಹಾಜರಿದ್ದರು.