ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರ ಆಶೀರ್ವಾದ ಪಡೆದ ಉಸ್ತುವಾರಿ ಸಚಿವರು

ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಮೈಸೂರಲ್ಲಿ ಯಶಸ್ವಿಯಾಗಿ ನಡೆಯಲಿ: ಶ್ರೀಗಳ ಆಶಯ

ಮೈಸೂರು, ಜ.9(ಪಿಎಂ)- ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಸಂಬಂಧ ನಡೆಯಲಿರುವ `ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ ಮೈಸೂರು ಜಿಲ್ಲೆಯಲ್ಲಿಯೂ ಯಶಸ್ವಿ ಯಾಗಿ ನಡೆಯಲಿದೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಲ್ಲಿ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ ಆಶಯ ವ್ಯಕ್ತಪಡಿಸಿದರು.

ಮೈಸೂರಿನ ಸರಸ್ವತಿಪುರಂನ ಕೃಷ್ಣಧಾಮ ದಲ್ಲಿ ವ್ಯಾಸ್ತವ್ಯ ಹೂಡಿರುವ ಸ್ವಾಮೀಜಿ ಯವರನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ಮಾಡಿ, ಆಶೀರ್ವಾದ ಪಡೆದರು. ಸಚಿ ವರೂ ಸೇರಿದಂತೆ ಅವರ ಜೊತೆಯಲ್ಲಿ ಆಗ ಮಿಸಿದ್ದ ಶಾಸಕ ಎಲ್.ನಾಗೇಂದ್ರ ಹಾಗೂ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಸ್ವಾಮೀಜಿಯವರಿಗೆ ಹಾರ ಸಮರ್ಪಿಸಿ, ಆಶೀರ್ವಾದ ಪಡೆದರು.

ಇದೇ ವೇಳೆ ಮೈಸೂರಿನಲ್ಲಿ `ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ ಯಶಸ್ವಿಯಾಗಿ ನಡೆಯಬೇಕೆಂದು ಸಚಿ ವರು, ಶಾಸಕರು ಹಾಗೂ ಮುಡಾ ಅಧ್ಯಕ್ಷ ರಲ್ಲಿ ಸ್ವಾಮೀಜಿ ತಮ್ಮ ಆಶಯ ವ್ಯಕ್ತಪಡಿಸಿ ದರು. ಮೈಸೂರು ಜಿಲ್ಲೆಯಲ್ಲಿಯೂ ಅಭಿ ಯಾನ ಅಚ್ಚುಕಟ್ಟಾಗಿ ನಡೆಯಲಿದೆ ಎಂದು ಸ್ವಾಮೀಜಿಯವರಲ್ಲಿ ಎಲ್.ನಾಗೇಂದ್ರ ತಿಳಿಸಿ ದರು. ಅಲ್ಲದೆ, ಮಹಾನಗರ ಪಾಲಿಕೆ 231 ಯುಜಿಡಿ ಕಾರ್ಮಿಕರನ್ನು ಖಾಯಂ ಗೊಳಿಸ ಬೇಕೆಂದು ಹಾಗೂ ಮೈಸೂರು ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ಕೊಳಚೆ ನಿರ್ಮೂ ಲನಾ ಮಂಡಳಿ ವತಿಯಿಂದ ನಿರ್ಮಿಸಿ ಕೊಟ್ಟಿರುವ ಮನೆಗಳಿಗೆ ಖಾತೆ ಕಲ್ಪಿಸಿಕೊಡ ಬೇಕೆಂದು ಶ್ರೀಚಾಮುಂಡೇಶ್ವರಿ ಗೆಳೆಯರ ಪ್ರಗತಿಪರ ಸೇವಾ ಪ್ರತಿಷ್ಠಾನದಿಂದ ಶ್ರೀ ಗಳಿಗೆ ಸಲ್ಲಿಸಲಾಗಿದ್ದ ಮನವಿಯನ್ನು ಶ್ರೀಗಳು ಸಚಿವರಿಗೆ ನೀಡಿ, ಪರಿಶೀಲಿಸಿ, ಸಮಸ್ಯೆ ಬಗೆಹರಿಸುವಂತೆ ಕೇಳಿದರು.