ಕುರುಬ ಸಮುದಾಯದ ಎಸ್‍ಟಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಿದ್ದರಾಮಯ್ಯ ಮನವೊಲಿಸುವ ತೆವಲು ನಮಗೇನಿಲ್ಲ

ಸಚಿವ ಕೆ.ಎಸ್.ಈಶ್ವರಪ್ಪ ಕಿಡಿನುಡಿ
ಮೈಸೂರು, ಡಿ.29(ಎಂಟಿವೈ)- ಕುರುಬ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ದಲ್ಲಿ ಪಾಲ್ಗೊಳ್ಳುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸುವ ತೆವಲು ನನಗಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ಮೈಸೂರಲ್ಲಿ ಮಂಗಳ ವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯದ ಎಸ್‍ಟಿ ಮೀಸಲಾತಿ ಹೋರಾಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳದಿರುವ ಸಂಬಂಧ ಪ್ರತಿಕ್ರಿಯಿ ಸಿದ ಅವರು, ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಿದ್ದರಾಮಯ್ಯ ಅವರನ್ನೇನೂ ಮನವೊಲಿಸಬೇಕಾದ ಅಗತ್ಯವಿಲ್ಲ. ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಅಪೇಕ್ಷೆ ಇದ್ದವರು ಹೋರಾಟಕ್ಕೆ ಬಂದೇ ಬರುತ್ತಾರೆ. ರಾಜ್ಯದಲ್ಲಿ ಸಮುದಾಯದ ಕೋಟ್ಯಾಂತರ ಜನ ಇದ್ದಾರೆ. ಅವರನ್ನೆಲ್ಲಾ ಮನವೊಲಿಸೋಕೆ ಆಗುತ್ತಾ. ಸಮುದಾಯದ ಮೇಲೆ ಯಾರಿಗೆ ನಂಬಿಕೆ ಆಸಕ್ತಿ ಇದೆಯೋ ಅವ ರೆಲ್ಲಾ ಬರ್ತಾರೆ. ನಮ್ಮ ಹಿಂದೆ ಸಮುದಾಯದ ಸ್ವಾಮೀಜಿಗಳಿದ್ದಾರೆ. ಈ ಹೋರಾಟದಲ್ಲಿ ನಮಗೆ ಯಶಸ್ಸು ದೊರಕುತ್ತದೆ ಎಂಬ ನಂಬಿಕೆ ಇದೆ ಎಂದರು.

ನಾವು ರಾಜ್ಯದಾದ್ಯಂತ ನಡೆಸುತ್ತಿರುವುದು ಹೋರಾಟವಲ್ಲ, ಜನಜಾಗೃತಿ ಕಾರ್ಯ ಕ್ರಮ. ಸ್ವಾತಂತ್ರ್ಯ ಪೂರ್ವದಿಂದ ಕುರುಬರು ಒಂದುಗೂಡಿಲ್ಲ. ಈ ಹಿನ್ನೆಲೆಯಲ್ಲಿ ವಿವಿಧೆಡೆ ಚದುರಿ ಹೋಗಿರುವ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಸಭೆ ನಡೆಸುತ್ತಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲೇ ಕುರುಬರು ಎಸ್‍ಟಿಗೆ ಸೇರಿದ್ದಾರೆ ಎಂಬ ದಾಖಲೆಗಳಿವೆ ಎನ್ನುತ್ತಾರೆ. ಎಸ್‍ಟಿಗೆ ಸೇರಿಸಲು ರಾಮಕೃಷ್ಣ ಹೆಗಡೆ, ದೇವರಾಜ ಅರಸು ಅವರ ಸಹಕಾರ ಕೇಳಿದ್ದೆವು. ಆದರೆ ಆಗದು ಸಾಧ್ಯವಾಗಲಿಲ್ಲ. ಈಗಲಾದರೂ ಸಮುದಾಯವನ್ನು ಎಸ್‍ಟಿಗೆ ಸೇರಿಸಿ ಅಂತ ಹೋರಾಡುತ್ತಿದ್ದೇವೆ. ಮಠಾಧೀ ಶರ ವಿರೋಧವಿಲ್ಲ, ಮಠಾಧೀಶರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಕುರುಬ ಸಮುದಾಯ ಇಬ್ಭಾಗ ಆಗುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿ ಗುರುತಿಸಿ ಕೊಂಡಿರುವ ನಾಯಕರು, ಮುಖಂಡರು ಸಹ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿ ದ್ದಾರೆ. ಪಕ್ಷಾತೀತವಾದ ಜಾಗೃತಿ ಕಾರ್ಯಕ್ರಮ ಇದು ಎಂದು ಸ್ಪಷ್ಟಪಡಿಸಿದರು.