ಹಜ್ ಭವನಕ್ಕೆ ‘ಟಿಪ್ಪು ಸುಲ್ತಾನ್ ಹಜ್‍ಘರ್’ ಎಂದು ನಾಮಕರಣಕ್ಕೆ ಸಚಿವ ಜಮೀರ್ ಚಿಂತನೆ

ಬೆಂಗಳೂರು: ನಗರದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹಜ್‍ಘರ್ ಎಂಬ ನಾಮಕರಣ ಸಂಬಂಧ ಕಾಂಗ್ರೆಸ್‍ನ ಹಿರಿಯ ರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಜ್ ಭವನಕ್ಕೆ ಟಿಪ್ಪುಸುಲ್ತಾನ್ ಘರ್ ಹೆಸರಿಡಲು ಮುಸ್ಲಿಂ ಸಮುದಾಯದ ಮುಖಂಡರು ಸಲಹೆ ಮಾಡಿದ್ದಾರೆ. ಪಕ್ಷದ ಹಿರಿಯ ರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ಜೊತೆ ಚರ್ಚಿಸಿ ನಿರ್ಧ ರಿಸಲಾಗುವುದು. ಟಿಪ್ಪು ಜಯಂತಿ ಆಚರಣೆ ವಿಚಾರವೇ ಬೇರೆ, ಈ ವಿಚಾರವೇ ಬೇರೆ, ಇಂತಹ ವಿಚಾರಗಳಲ್ಲಿ ನಾನೊ ಬ್ಬನೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕಳೆದ ಹಜ್ ಯಾತ್ರೆ ಸಂದರ್ಭದಲ್ಲೇ ಹಜ್ ಭವನಕ್ಕೆ ನೂತನ ಹೆಸರು ವಿಚಾರ ಪ್ರಸ್ತಾಪವಾಗಿತ್ತು ಎಂದರು.