ಕೇಂದ್ರ, ರಾಜ್ಯ ಸರ್ಕಾರದ ಉದ್ಯೋಗ ಯೋಜನೆಗಳ  ಬಳಸಿಕೊಳ್ಳಲು ಶಾಸಕ ಎಲ್.ನಾಗೇಂದ್ರ ಕರೆ

ಮೈಸೂರು: ನಿರು ದ್ಯೋಗ ನಿವಾರಣೆಗಾಗಿ ಅನೇಕ ಯೋಜನೆ ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿವೆ. ಎಲ್ಲಾ ವರ್ಗದಲ್ಲೂ ಈ ಯೋಜನೆಗಳನ್ನು ಸದ್ಬಳÀಕೆ ಮಾಡಿಕೊಳ್ಳು ವವರ ಸಂಖ್ಯೆ ಹೆಚ್ಚಾಗಬೇಕು ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು.

ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂ ಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟಜಾತಿ ಮತ್ತು ಪಂಗಡದ ಉದ್ಯಮಿದಾರರ ಸಂಘದ ಆಶ್ರಯದಲ್ಲಿ ನಡೆದ 2013-18ನೇ ಹಣಕಾಸು ಯೋಜನೆ ಅಡಿ `ನೂತನ ಜವಳಿ ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆ ಫಲಾನುಭವಿಗಳಿಗೆ ಒಂದು ದಿನದ ಉದ್ಯಮ ಶೀಲತಾ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ’ ಉದ್ಘಾಟಿಸಿ, ಅವರು ಮಾತನಾಡಿದರು.

ಸರ್ಕಾರದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಹಾಗಾಗಿ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ನೀಡುವ ತರಬೇತಿ ಕಾರ್ಯಕ್ರಮಗಳಲ್ಲಿ ಯುವಕರು ಪಾಲ್ಗೊಂಡು ಇದರ ಸದ್ಬಳಕೆ ಮಾಡಿಕೊಳ್ಳ ಬೇಕು. ಈ ಯೋಜನೆಗೆ ಕೆನರಾ ಬ್ಯಾಂಕ್, ಲೀಡ್ ಬ್ಯಾಂಕ್ ಹಾಗೂ ಇತರೆ ಕರ್ನಾ ಟಕ ಹಣಕಾಸು ಸಂಸ್ಥೆಗಳು, ಉದ್ಯೋಗ ನಿವಾರಣೆಗೆ ಬೇಕಾದ ಪೂರಕ ಯೋಜನೆ ಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಿವೆ. ಅಲ್ಲದೆ, ಆಯ್ಕೆಯಾದ ಫಲಾನು ಭವಿಗಳಿಗೆ ಈ ಬ್ಯಾಂಕ್‍ಗಳಿಂದ ಶೇ.15 ರಿಂದ 40ರಷ್ಟು ಸಬ್ಸಿಡಿ ದೊರೆಯಲಿದೆ. ನಿರುದ್ಯೋಗಿಗಳು ಇದನ್ನು ಬಂಡವಾಳ ಮಾಡಿಕೊಂಡು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಬೆಂಗಳೂರು ಕೈಮಗ್ಗ ಮತ್ತು ಜವಳಿ ಇಲಾ ಖೆಯ ದಕ್ಷಿಣ ವಲಯದ ಜಂಟಿ ನಿರ್ದೇಶಕ ಎ.ಸುರೇಶ್‍ಕುಮಾರ್ ಮಾತನಾಡಿ, ಜವಳಿ ಇಲಾಖೆ ಕೈಗಾರಿಕೆ ಮಾತ್ರವಲ್ಲದೆ, ವಿವಿಧ ಚಟುವಟಿಕೆಗಳನ್ನು ರೂಪಿಸುವ ಸಂಸ್ಥೆಯಾ ಗಿದೆ. ನಮ್ಮ ಇಲಾಖೆಯಿಂದ 25 ಲಕ್ಷದಿಂದ 2 ಕೋಟಿವರೆಗೂ ಸ್ವಯಂ ಉದ್ಯೋಗದಡಿ ಕೈಗಾರಿಕೆ ಸ್ಥಾಪಿಸುವವರಿಗೂ ಅನುದಾನ ಲಭ್ಯವಿದ್ದು, ಇಲ್ಲಿಯವರೆಗೂ 50ಕ್ಕೂ ಹೆಚ್ಚು ಉದ್ದಿಮೆದಾರರು ಈ ಸೌಲಭ್ಯವನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಜವಳಿ ಉದ್ಯಮದಲ್ಲಿ ಅನುಭವ, ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ ನಮ್ಮ ಇಲಾಖೆಯಿಂದ ಶೇ.90ರಷ್ಟು ಪ್ರೋತ್ಸಾಹ ಧನ ಲಭ್ಯವಿದೆ. ಬಂಡವಾಳ ಆಧಾರಿತ ಹೂಡಿಕೆ ಸಹಾಯಧನ ಶೇ.15ರಷ್ಟು ಇಲಾಖೆಯಿಂದ ನೀಡುತ್ತಿದ್ದು, ಬಡ್ಡಿ, ಪ್ರವೇಶ ತೆರಿಗೆ ಮರು ಪಾವತಿ, ಮುದ್ರಾಂಕ ಶುಲ್ಕು ಮರುಪಾವತಿ, ಜವಳಿ ಪಾರ್ಕ್, ವಿದ್ಯುತ್ ರಿಯಾಯತಿ, ಕಾಮನ್ ಇಟಿಪಿ, ಮೆಗಾ ಪ್ರಾಜೆಕ್ಟ್‍ಗಳ ಸಹಾಯಧನ ಗಳು ಲಭ್ಯವಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಇದರ ಸದುಪ ಯೋಗ ಪಡೆದುಕೊಳ್ಳವಂತೆ ಸಲಹೆ ನೀಡಿದರು. ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಡಿ.ಕೆ. ಲಿಂಗರಾಜು, ಸಿಡಾಕ್ ಜಂಟಿ ನಿರ್ದೇ ಶಕ ಮಂಜುನಾಥಸ್ವಾಮಿ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸ್, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿ ದಾರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಶಂಕರ ಪಾಲ್ಗೊಂಡಿದ್ದರು.