ಪ್ರಮೋದಾದೇವಿ ಒಡೆಯರ್ ಬಳಿ ಶಾಸಕ ನಾಗೇಂದ್ರ ಚರ್ಚೆ

ಮೈಸೂರು, ಮೇ ೧೩ (ಆರ್‌ಕೆ)- ಮೈಸೂರಿನ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಪಾರಂಪರಿಕ ಕಟ್ಟಡಗಳ ಪುನರ್ ನಿರ್ಮಾಣ ಕುರಿತಂತೆ ಶಾಸಕ ಎಲ್. ನಾಗೇಂದ್ರ ಅವರು ಇಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಅರ ಮನೆಯ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು.

ಈ ಎರಡೂ ಕಟ್ಟಡಗಳ ಜೀರ್ಣೋದ್ಧಾರ, ಅಭಿವೃದ್ಧಿ, ದುರಸ್ತಿ ಇಲ್ಲವೇ ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡುವ ಸಂಬAಧ ಈಗಾಗಲೇ ಟಾಸ್ಕ್ಫೋರ್ಸ್ ಸಮಿತಿ, ಪಾರಂಪರಿಕ ತಜ್ಞರ ಸಮಿತಿ, ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದಾಗಲೇ ಎರಡೂ ಕಟ್ಟಡಗಳ ಕೆಲ ಭಾಗ ಕುಸಿದಿದ್ದು, ಉಳಿದ ಭಾಗವೂ ಶಿಥಿಲಗೊಂಡಿರುವುದರಿAದ ನೆಲಸಮಗೊಳಿಸಿ ಯಥಾವತ್ತಾಗಿ ಹೊಸದಾಗಿ ನಿರ್ಮಿಸುವಂತೆ ಮೈಸೂರು ನಗರಪಾಲಿಕೆ ಕೌನ್ಸಿಲ್ ಸಭೆ ನಿರ್ಣಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕರು ವಿವರಿಸಿದರು.
ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತ ಜೆ.ಲಕ್ಷಿö್ಮÃಕಾಂತರೆಡ್ಡಿ ಅವರು ಪ್ರಮೋದಾದೇವಿ ಒಡೆಯರ್ ಅವರಿಗೆ ಸಂಪೂರ್ಣ ಮಾಹಿತಿ ನೀಡಿ ದಾಖಲಾತಿ ಗಳೊಂದಿಗೆ ಕಟ್ಟಡಗಳ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು. ನಂತರ ಪ್ರತಿಕ್ರಿಯಿಸಿದ ಪ್ರಮೋದಾದೇವಿ ಒಡೆಯರ್, ನುರಿತ ಪಾರಂಪರಿಕ ತಜ್ಞರೊಂದಿಗೆ ಚರ್ಚಿಸಿ, ೧೫ ದಿನದೊಳಗೆ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು. ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪಾಲಿಕೆ ವಲಯ ಕಚೇರಿ -೬ರ ವಲಯಾಧಿಕಾರಿ ಮಂಜುನಾಥ್, ಇಂಜಿನಿಯರ್, ಕವಿತಾ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.