ಮೈಸೂರು,ಜೂ.25(ಆರ್‍ಕೆಬಿ)- ಚಾಮ ರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಪಾಲಿಕೆಯ 18ನೇ ವಾರ್ಡ್‍ನಲ್ಲಿ 14ನೇ ಹಣಕಾಸು ಅನುದಾನದಡಿ 40 ಲಕ್ಷ ರೂ. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮ ಗಾರಿಗೆ ಗುರುವಾರ ಚಾಲನೆ ನೀಡಿದರು.
ಮೇದರಕೇರಿ-ಯಾದವ ಗಿರಿ ಬಳಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರು, ಕಾಮಗಾರಿಯಲ್ಲಿ ಗುಣ ಮಟ್ಟ ಕಾಯ್ದುಕೊಳ್ಳು ವಂತೆ ಅಧಿಕಾರಿಗಳಿಗೆ ಸೂಚಿಸಿ ದರು. ಈ ಸಂದರ್ಭ ಬಿಜೆಪಿ ಚಾಮರಾಜ ಕ್ಷೇತ್ರ ಘಟಕ ಅಧ್ಯಕ್ಷ ಸೋಮ ಶೇಖರರಾಜು, ಉಪಾಧ್ಯಕ್ಷ ಕುಮಾರ ಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್, ರಮೇಶ್, ಮಹಿಳಾ ಮೋರ್ಚಾ ಕ್ಷೇತ್ರ ಅಧ್ಯಕ್ಷೆ ತನುಜಾ ಮಹೇಶ್, ದಿನೇಶ್ ಗೌಡ, ಚಿಕ್ಕವೆಂಕಟು ಇನ್ನಿತರÀರು ಉಪಸ್ಥಿತರಿದ್ದರು.