ಕೊರೊನಾ ಜಾಗೃತಿ ವಾಹನಕ್ಕೆ ಶಾಸಕ ರಾಮದಾಸ್ ಚಾಲನೆ

ಮೈಸೂರು, ಆ.25 (ಎಂಟಿವೈ)- ಕೊರೊನಾ ವೈರಸ್ ಸೋಂಕಿನಿಂದ ಪಾರಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಕೇಂದ್ರದ ಜನಸಂಪರ್ಕ ಕಾರ್ಯಾ ಲಯ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಆಯೋಜಿಸಿದ್ದ ಪ್ರಚಾರ ವಾಹನಕ್ಕೆ ಶಾಸಕ ಎಸ್.ಎ.ರಾಮ ದಾಸ್ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ತಮ್ಮ ಕಚೇರಿ ಮುಂಭಾಗ ಮಂಗಳವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿನಿಂದ ಪಾರಾಗುವ ಬಗೆ ಹೇಗೆಂದು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾ ಲಯ, ನಿಮ್ಹಾನ್ಸ್, ವಾರ್ತಾ ಮತ್ತು ಪ್ರಸಾರ ಇಲಾಖೆ ನೇತೃತ್ವ ದಲ್ಲಿ ದೇಶಾದ್ಯಂತ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಸಂಚರಿಸಿ ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ ನೀಡಲಾಗಿದೆ ಎಂದರು.

ನಾನು ಸುರಕ್ಷಿತವಾಗಿದ್ದರೆ, ನಾವು ಸುರಕ್ಷಿತ. ನಾವೆಲ್ಲರೂ ಸುರಕ್ಷಿತರಾಗಿದ್ದರೆ ದೇಶ ಸುರಕ್ಷಿತ ಎಂಬ ಸಂದೇಶ ಭಿತ್ತರಿಸ ಲಾಗಿದೆ. ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವುದು, ಕೈ ಸ್ವಚ್ಛಗೊಳಿಸುವುದು, ರೋಗನಿರೋಧಕ ಶಕ್ತಿ ವೃದ್ಧಿಸಲು ಏನೇನು ಮಾಡಬೇಕು, ಹಿರಿಯರ ಆರೋಗ್ಯದ ಕಾಳಜಿ ಹೇಗೆ ವಹಿಸಬೇಕು ಎನ್ನುವ ವಿಷಯಗಳ ಆಡಿಯೋ ಜಾಗೃತಿಗೆ ಕ್ರಮ ಕೈಗೊಳ್ಳಲಾಗಿದೆ. ಇದು ಒಂದೆರಡು ದಿನಕ್ಕೆ ಸೀಮಿತವಾಗದು ಎಂದರು. ನವೆಂಬರ್‍ವರೆಗೂ ಪಡಿತರ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಕ್ಷೀಣ ಗೊಳ್ಳುವ ವಿಶ್ವಾಸವಿದೆ. ಸಾವಿನ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಕ್ಷೇತ್ರ ಜನಸಂಪರ್ಕ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ ಮತ್ತಿತರರಿದ್ದರು.