ಸಿಎಂ, ಡಿಸಿಎಂ ಗೈರಿಗೆ ಶಾಸಕ ತನ್ವೀರ್ ಅಸಮಾಧಾನ

ಮೈಸೂರು:  ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು ಹಾಜರಾಗಿರುವುದಕ್ಕೆ ಶಾಸಕ ತನ್ವೀರ್ ಸೇಠ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ವೈದ್ಯರ ಸಲಹೆಯಂತೆ ವಿಶ್ರಾಂತಿ ನೆಪದಲ್ಲಿ ಮುಖ್ಯ ಮಂತ್ರಿಗಳು ಗೈರಾದರೆ, ವಿದೇಶ ಪ್ರಯಾಣ ಕಾರಣ ಹೇಳಿ ಉಪ ಮುಖ್ಯಮಂತ್ರಿಗಳು ತಪ್ಪಿಸಿ ಕೊಂಡಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಅಪಮಾನವಾಗಿದೆ ಎಂದರು.

ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿರುವುದು ಸತ್ಯ. ಆದರೆ ತಾವು ಎಲ್ಲಿ ಉಳಿದುಕೊಂಡಿದ್ದೀರೋ ಅಲ್ಲಿಯೇ ತಾಲೂಕು ಕೇಂದ್ರದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಬಹುದಿತ್ತು ಎಂದು ಅಸಮಾಧಾನ ಹೊರ ಹಾಕಿದರು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಲಾರಂಭಿಸಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ವಿದೆ. ಸಮ್ಮಿಶ್ರ ಸರ್ಕಾರ ಬೇರೆಯವರ ಜಯಂತಿ ಆಚರಿಸಲು ತೋರಿದ ಉತ್ಸಾಹ ವನ್ನು ಟಿಪ್ಪು ಜಯಂತಿಗೆ ತೋರದೆ ತಮ್ಮ ಸಮುದಾಯದ ಜನರಿಗೆ ಅಪಮಾನ ಮಾಡ ಲಾಗಿದೆ ಎಂದ ಅವರು, ನಾವೇನೂ ಟಿಪ್ಪು ಜಯಂತಿ ಮಾಡಿ ಎಂದು ಕೇಳಿರಲಿಲ್ಲ. ನಾವೇ ಹಲವು ವರ್ಷಗಳಿಂದ ಆಚರಿಸಿ ಕೊಂಡು ಬಂದಿದ್ದೇವೆ ಎಂದರು.

ಪೊಲೀಸ್ ಸರ್ಪಗಾವಲಿನಲ್ಲಿ, ಮೆರವಣಿಗೆ, ಸಭೆ, ಸಮಾರಂಭಗಳನ್ನು ನಿರ್ಬಂಧಿಸಿ ಕಾರ್ಯಕ್ರಮವನ್ನು ಆಚರಿಸುವುದು ಬೇಡ. ನಾವೇ ಟಿಪ್ಪು ಜಯಂತಿ ಆಚರಿಸಿಕೊಳ್ಳುತ್ತೇವೆ ಎಂದು ತನ್ವೀರ್ ಸೇಠ್ ನುಡಿದರು.

ಸಮರ್ಥಿಸಿಕೊಂಡ ಜಿಟಿಡಿ: ಚುನಾವಣಾ ವೇಳೆ ತೀವ್ರವಾಗಿ ಬಳಲಿರುವುದರಿಂದ ಕಡ್ಡಾಯ ವಾಗಿ ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಬೇಕು ಎಂದು ವೈದ್ಯರು ಸಲಹೆ ನೀಡಿರುವ ಕಾರಣ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಸಿಎಂ ಗೈರು ಹಾಜರಿಯನ್ನು ಸಮರ್ಥಿಸಿಕೊಂಡರು.

ಟಿಪ್ಪು ಜಯಂತಿ ವಿಜೃಂಭಣೆಯಿಂದ ಆಚ ರಿಸಬೇಕು, ಎಲ್ಲಾ ಸಚಿವರು ಪಾಲ್ಗೊಳ್ಳಬೇ ಕೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿ ಜಯಂತಿಗೆ ಶುಭಾಶಯ ಕೋರಿದ್ದಾರೆ ಎಂದು ಸಚಿವರು ತಿಳಿಸಿದರು.

ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸ ಲಾತಿ ನೀಡಿದ್ದರು. ಮುಂದಿನ ಜನ್ಮದಲ್ಲಿ ಹುಟ್ಟಿ ದರೆ ತಾವು ಅಲ್ಪಸಂಖ್ಯಾತರಾಗಿ ಹುಟ್ಟಬೇ ಕೆಂದು ಹೇಳುವ ಮೂಲಕ ಅವರು ಜನಪರ ಕಾಳಜಿಯನ್ನು ತೋರಿದ್ದಾರೆ ಎಂದು ಜಿ.ಟಿ.ದೇವೇಗೌಡರು ನುಡಿದರು.