ಡಿಎಫ್‌ಓ ಚಕ್ರಪಾಣ ವರ್ಗಾವಣೆಗೆ ಎಂಎಲ್‌ಸಿ ವೀಣಾ ಅಚ್ಚಯ್ಯ ಆಗ್ರಹ

ಮಡಿಕೇರಿ, ಮಾ.೨೯- ಕೊಡಗಿನ ಡಿಎಫ್‌ಓ ಚಕ್ರಪಾಣ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸರ್ಕಾರವನ್ನು ಆಗ್ರಹಿಸಿದರು.

ಸದನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವನ್ಯ ಪ್ರಾಣ – ಮಾನವ ಸಂಘರ್ಷ ಮಿತಿ ಮೀರಿದ್ದು, ಸರ್ಕಾರ ಕೊಡಗಿನ ಜನರ ನೆರವಿಗೆ ಬರಬೇಕು ಎಂದ ಅವರು, ವಿರಾಜ ಪೇಟೆ ರುದ್ರಗುಪ್ಪೆ ಗ್ರಾಮದಲ್ಲಿ ಹುಲಿ ದಾಳಿಯಿಂದ ಕಾರ್ಮಿಕ ಮೃತ ಪಟ್ಟಿದ್ದಾನೆ. ಆದರೆ, ಅಲ್ಲಿನ ಡಿಎಫ್‌ಓ ಚಕ್ರಪಾಣ ಅವರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆ ಅಧಿಕಾರಿಯನ್ನು ಜಿಲ್ಲೆಗೆ ಯಾರು ಕರೆ ತಂದರೋ ಗೊತ್ತಿಲ್ಲ. ಅವರಿಗೆ ಜನರಿಗಿಂತ ಕಾಡು ಪ್ರಾಣ ಗಳ ಮೇಲೆ ಪ್ರೀತಿ ಜಾಸ್ತಿಯಾಗಿದೆ. ತಕ್ಷಣವೇ ಡಿಎಫ್‌ಓ ಚಕ್ರಪಾಣ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸರ್ಕಾರ ನೆರವಿಗೆ ಬರದಿದ್ದಲ್ಲಿ ಮುಂದೊAದು ದಿನ ಪರಿಹಾರ ಪಡೆಯಲು ಕೂಡ ಕೊಡಗಿನಲ್ಲಿ ಜನರೇ ಇಲ್ಲದಂ ತಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅರಣ್ಯ ಸಚಿವರ ಪರವಾಗಿ ಸದನದಲ್ಲಿ ಮಾತನಾಡಿದ ಸಚಿವ ಕೋಟಾ ಶ್ರೀನಿ ವಾಸ ಪೂಜಾರಿ, ಈಗಾಗಲೇ ಅರಣ್ಯ ಸಚಿವರು ಶಾಸಕರ ಸಹಿತ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗಿಗೆ ಭೇಟಿ ನೀಡುವುದಾಗಿ ಹೇಳಿದ್ದರು. ಆದರೆ, ಇದರ ಮಧ್ಯೆ ಹುಲಿ ದಾಳಿ ನಡೆದಿದೆ ಎಂದು ಮಾಹಿತಿ ನೀಡಿದರು. ಅರಣ್ಯ ಅಧಿಕಾರಿ ಚಕ್ರಪಾಣ ವಿರುದ್ಧ ದೂರುಗಳು ಬಂದಿವೆ. ಆ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಅರಣ್ಯ ಸಚಿವರಿಗೆ ತಿಳಿಸುತ್ತೇನೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಸದನದಲ್ಲಿ ಹೇಳಿದರು.