ರಘುಲಾಲ್ ಅಂಡ್ ಕಂಪನಿಯಿಂದ ಮೊಬೈಲ್ ಆ್ಯಪ್ ಮೂಲಕ ಔಷಧಿ ಖರೀದಿಸುವ ಅವಕಾಶ

ಆರ್ಡರ್ ಮಾಡಿದರೆ ಮನೆ ಬಾಗಿಲಿಗೇ ಸೇವೆ

ಮೈಸೂರು, ಜು. 7- ಮೈಸೂರಿನ ಪ್ರತಿಷ್ಠಿತ ಔಷಧಿ ಕಂಪನಿ ರಘುಲಾಲ್ ಅಂಡ್ ಕಂಪನಿಯು ಗೂಗಲ್ ಪ್ಲೇ ಸ್ಟೋರ್‍ನಲ್ಲಿ ತನ್ನ ಆ್ಯಪ್‍ಗೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಿದ್ದು, ಗ್ರಾಹಕರು ಈ ಮೊಬೈಲ್ ಆ್ಯಪ್ ಮೂಲಕ ತಮಗೆ ಅಗತ್ಯವಿರುವ ಔಷಧಿಯನ್ನು ಸುಲಭವಾಗಿ ಆರ್ಡರ್ ಮಾಡಿ ಪಡೆಯ ಬಹುದಾಗಿದೆ. ಪ್ರತಿಯೊಬ್ಬರೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಂಡು ಔಷಧಿಗೆ ಆರ್ಡರ್ ಮಾಡಿದಲ್ಲಿ ತಮ್ಮ ಮನೆ ಬಾಗಿಲಿಗೇ ಔಷಧಿ ಬಂದು ತಲುಪುತ್ತದೆ. ಔಷಧಿಯನ್ನು ಓವರ್ ದಿ ಕೌಂಟರ್‍ನಲ್ಲಿ ಖರೀದಿಸುವುದರ ಜೊತೆಗೆ ವೈದ್ಯರು ನೀಡಿದ ವಿವರಗಳನ್ನು ನೀಡುವ ಮೂಲಕ ಔಷಧಿಗೆ ಆರ್ಡರ್ ಕೂಡ ಮಾಡಬಹುದು.

ರಘುಲಾಲ್ ಅಂಡ್ ಕಂಪನಿಯ ಈ ಮೊಬೈಲ್ ಆ್ಯಪ್ ಅನ್ನು ಔಷಧಿಗಳ ಶೋಧನೆ ಮತ್ತು ಆಯ್ಕೆಗಾಗಿ ಮಾತ್ರ ಬಳಸಲು ಸೂಚಿಸಲಾಗಿದೆ. ಔಷಧಿಯನ್ನು ಡೆಲಿವರಿ ಮಾಡುವ ವಿಳಾಸ, ಕ್ಯಾಷ್ ಆನ್ ಡೆಲಿವರಿ ಆಪ್ಷನ್ ಕೂಡ ಇರುತ್ತದೆ. ಅಲ್ಲದೆ ಯಾರಿಗೆ, ಯಾವಾಗ ಔಷಧಿ ಬೇಕಾಗುತ್ತದೆ ಎಂಬುದನ್ನು ತಿಳಿಸಿದಲ್ಲಿ ಮನೆ ಬಾಗಿಲಿಗೇ ಡೆಲಿವರಿ ಮಾಡಲಾಗುತ್ತದೆ. ಪಿಕಪ್ ಸ್ಲಾಟ್‍ಗಳಲ್ಲಿ ಆಯ್ಕೆ ಯೊಂದಿಗೆ ಸ್ಟೋರ್ ಪಿಕಪ್ ಆಯ್ಕೆಯನ್ನು ಪಡೆಯಬಹುದು. ಅಲ್ಲದೆ ಈ ಆ್ಯಪ್ ಮೂಲಕ ನಿಮ್ಮ ಸ್ಥಳವನ್ನು ಆಧರಿಸಿ ಸ್ವಯಂಚಾಲಿತವಾಗಿ ಹತ್ತಿರದ ರಘುಲಾಲ್ ಸ್ಟೋರ್ ಆಯ್ಕೆಯೂ ಇದೆ. ಒಮ್ಮೆ ಆರ್ಡರ್ ಮಾಡಿದರೆ, ಗ್ರಾಹಕರಿಗೆ ಎಸ್‍ಎಂಎಸ್/ಇ-ಮೇಲ್ ಮೂಲಕ ಆರ್ಡರ್ ವಿವರ ಲಭ್ಯವಾಗುತ್ತದೆ