ಕೆ.ಆರ್.ಕ್ಷೇತ್ರದಲ್ಲಿ ಅ.6ರವರೆಗೆ `ಮೋದಿ ಯುಗ್ ಉತ್ಸವ್’ ವೈವಿಧ್ಯಮಯ ಕಾರ್ಯಕ್ರಮ

ಮೈಸೂರು,ಸೆ.18(ಎಂಟಿವೈ)-ಮೈಸೂರಿನ ಕೆ.ಆರ್.ವಿಧಾನ ಸಭಾ ಕ್ಷೇತ್ರದಲ್ಲಿ `ಮೋದಿ ಯುಗ್ ಉತ್ಸವ’ ಕಾರ್ಯಕ್ರಮದ ಅಂಗ ವಾಗಿ ಸೆ.17ರಿಂದ ಅ.6ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳು ವುದರೊಂದಿಗೆ ಕ್ಷೇತ್ರದ ಜನರಲ್ಲಿ ವರ್ಷವಿಡೀ ಸಕಾರಾತ್ಮಕ ಬೆಳವಣಿಗೆ ಬೆಳೆಸÀಲು ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅ.6ಕ್ಕೆ 20 ವರ್ಷಗಳಾಗುತ್ತಿದೆ. ಇದರ ಸಂಭ್ರಮಾಚರಣೆಗಾಗಿ ಈಗಾಗಲೇ 20 ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅ.1ರಿಂದ 6ರವರೆಗೆ ಅಧಿಕಾರಿಗಳೊಂದಿಗೆ ಕ್ಷೇತ್ರದ ಎಲ್ಲಾ ಮನೆ ಬಾಗಿಲಿಗೆ ತೆರಳಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡ ಲಾಗುತ್ತದೆ. ಅದಕ್ಕಾಗಿ 19 ತಂಡಗಳನ್ನು ರಚಿಸಲಾಗಿದ್ದು, ಸೆ.19 ರಿಂದ ಈ ತಂಡದ ಸದಸ್ಯರು ಕಾರ್ಯೋನ್ಮುಖರಾಗಲಿದ್ದಾರೆ. ಕೆ.ಆರ್. ಕ್ಷೇತ್ರದಲ್ಲಿ 81 ಸಾವಿರ ಮನೆಗಳಿದ್ದು, 71 ಸಾವಿರ ಮಂದಿಗೆ ವಿವಿಧ ಯೋಜನೆಯ ಸೌಲಭ್ಯ ಕಲ್ಪಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಅಲ್ಲದೆ, ಮೈಸೂರು ಮಹಾನಗರದ ಪರಿಸರದ ದೃಷ್ಟಿಯಿಂದ ಜಲಮಾಲಿನ್ಯ, ವಾಯುಮಾಲಿನ್ಯ ತಡೆಗಟ್ಟಲು ಪೂರಕವಾದ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ವರ್ಷವಿಡೀ ಕಾರ್ಯಕ್ರಮಕ್ಕೆ ಸಜ್ಜು: ಪ್ರಧಾನಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವರ್ಷವಿಡೀ ಆರೋಗ್ಯ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಆರೋಗ್ಯ ತಪಾಸಣೆ ಮಾಡಿಸಲು ಕ್ಷೇತ್ರದ ಜನತೆಗೆ ಆರೋಗ್ಯ ಕಾರ್ಡ್ ವಿತರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಾಂಸ್ಕøತಿಕ ಕಾರ್ಯಕ್ರಮ: ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿರುವ ಶಾಸಕರ ಕಚೇರಿ ಮುಂಭಾಗವಿರುವ ಉದ್ಯಾನವನದಲ್ಲಿ ಸೆ.17ರಿಂದ ಅ.5ರವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6ರಿಂದ ರಾತ್ರಿ 9ರವರೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ದಿನ 20 ಕಲಾ ವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಗುಜರಾತ್‍ನಿಂದ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಲಿವೆ. ಅಲ್ಲದೆ ದೇಸೀಯ ತಿನಿಸುಗಳ ಪರಿಚಯವನ್ನೂ ಮಾಡಿಕೊಡಲಿದೆ. ಮುಖ್ಯವಾಗಿ ಈ ಕಾರ್ಯ ಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಮಾಡಿ ಕೊಡಲಾಗಿದೆ. ನಂತರ ಸೆ.25ರಂದು ಸಂಜೆ 6ರಿಂದ 9ರ ಗಂಟೆವರೆಗೆ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನೆರವೇರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಡಿವೇಲು, ಯಶಸ್, ನಗರ ಪಾಲಿಕೆ ಸದಸ್ಯ ವನೀಶ್ ಇದ್ದರು.