ಮೈಸೂರಿಂದ ಇತರ ರಾಜ್ಯಗಳಿಗೆ ಹೋಗಲು 18 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

ಮೈಸೂರು, ಮೇ 17- ಮೈಸೂರಿನಲ್ಲಿ ವಿವಿಧ ವೃತ್ತಿ ಹಾಗೂ ಕಟ್ಟಡ ಕಾರ್ಮಿಕ ಕಾಯಕದಲ್ಲಿ ತೊಡಗಿದ್ದ ವಿವಿಧ ರಾಜ್ಯ ಗಳ ಸುಮಾರು 18 ಸಾವಿರಕ್ಕೂ ಹೆಚ್ಚು ಮಂದಿ ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಬಿಹಾರ ಮತ್ತು ಉತ್ತರಪ್ರದೇಶದ ಕಾರ್ಮಿಕರೇ ಹೆಚ್ಚಾಗಿರುವುದು ಗಮನಾರ್ಹವಾಗಿದೆ.

ಕರ್ನಾಟಕದ ಸಾಂಸ್ಕøತಿಕ ರಾಜಧಾನಿ ಎಂದೇ ಹೆಸರು ಗಳಿಸಿರುವ ಹಾಗೂ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯದ ಎರಡನೇ ನಗರವಾಗಿರುವ ಮೈಸೂ ರಿನಲ್ಲಿ ಜೀವನ ರೂಪಿಸಿಕೊಳ್ಳಲು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಲಾಕ್‍ಡೌನ್‍ನಿಂದ ಅತಂತ್ರರಾಗಿದ್ದರು. ಈ ಹಿನ್ನೆಲೆಯಲ್ಲಿ ಊಟಕ್ಕೂ ತೊಂದರೆಯಾಗಿ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದ ಹೊರ ರಾಜ್ಯದ ಕಾರ್ಮಿಕರು ತವರು ಸೇರಲು ಹಾತೊರೆಯು ತ್ತಿದ್ದರು. ಕೊರೊನಾ ಒಂದೆಡೆಯಿಂದ ಮತ್ತೊಂ ದೆಡೆಗೆ ಹರಡುವ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಜನ ಸಂಚಾರಕ್ಕೆ ಕಡಿ ವಾಣ ಹಾಕಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಅತಂತ್ರ ಸ್ಥಿತಿಗೆ ಸಿಲುಕಿದ್ದರು. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯದಿಂದ ರಾಜ್ಯಕ್ಕೆ ವಲಸೆ ಕಾರ್ಮಿಕರನ್ನು ತವರೂರಿಗೆ ಕಳುಹಿಸಲು ಕ್ರಮ ಕೈಗೊ ಳ್ಳಲು ಎಲ್ಲಾ ರಾಜ್ಯಗಳು ಮುಂದಾಗಿದ್ದವು. ಅದರಂತೆ ಕಾರ್ಮಿಕರ ಮಾಹಿತಿ ಕಲೆ ಹಾಕಲು ಸೇವಾ ಸಿಂಧು ವೆಬ್‍ಸೈಟ್ ಆರಂಭಿಸಲಾಗಿತ್ತು.

15 ಸಾವಿರಕ್ಕೂ ಹೆಚ್ಚು ನೋಂದಣಿ: ಮೈಸೂರು ಜಿಲ್ಲೆಯಲ್ಲಿ ಸುಮಾರು 18 ಸಾವಿ ರಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರು ಸೇವಾ ಸಿಂಧು ವೆಬ್‍ಸೈಟ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೇ 5ರಿಂದ 13ರವರೆಗೆ 35 ರಾಜ್ಯಗಳ 15,068ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಹೆಸರು ನೋಂದಾಯಿಸಿ ಕೊಂಡಿದ್ದರು. ಅವರಲ್ಲಿ ಉತ್ತರಪ್ರದೇಶದ 3,000, ಬಿಹಾರದ 2508,ಪಶ್ಚಿಮ ಬಂಗಾಳದ 1376, ಕೇರಳದ 1221, ರಾಜಾಸ್ತಾನದ 1150, ತಮಿಳುನಾಡಿನ 772, ಒರಿಸ್ಸಾದ 548, ಮಹಾರಾಷ್ಟ್ರದ 408, ಜಾರ್ಖಂಡ್‍ನ 476, ತೆಲಂಗಾಣದ 244, ಆಂಧ್ರಪ್ರದೇಶದ 568, ಮಧ್ಯಪ್ರದೇಶದ 199, ಉತ್ತರಾಖಂಡ್‍ನ 139, ಅಸ್ಸಾಂನ 113, ಗುಜರಾತ್‍ನ 108, ಮಣಿಪುರದ 116, ಅಂಡಮಾನ್ ನಿಕೋಬಾರ್‍ನ 2, ಅರುಣಾಚಲ ಪ್ರದೇಶದ 60, ಚಂಡೀಘಡದ 2, ಛತ್ತೀಸ್‍ಘಡದ 29, ದಾದ್ರದ 1, ಡಾಮನ್‍ನ 1, ದೆಹಲಿಯ 45, ಗೋವಾ 16, ಹರಿಯಾಣ 38, ಹಿಮಾಚಲಪ್ರದೇಶ 16, ಜಮ್ಮು ಮತ್ತು ಕಾಶ್ಮೀರ 55, ಮೇಘಾಲಯ 21, ವಿಜೋರಾಂ 19, ನಾಗಾಲ್ಯಾಂಡ್ 29, ಪುದುಚೇರಿ 12, ಪಂಜಾಬ್ 7, ರಾಜಾಸ್ತಾನ್ 3, ತ್ರಿಪುರ 28 ಮಂದಿ ಒಳಗೊಂಡಿದ್ದಾರೆ.

ಅರ್ಜಿ ಸಲ್ಲಿಸಿದ 15 ಸಾವಿರಕ್ಕೂ ಹೆಚ್ಚು ಹೊರ ರಾಜ್ಯಕ್ಕೆ ತೆರಳುವವರಲ್ಲಿ ಆಂಧ್ರಪ್ರದೇ ಶದ 277, ಬಿಹಾರದ 4, ದೆಹಲಿಯ 1, ಗುಜರಾತ್‍ನ 96, ಹಿಮಾಚಲಪ್ರದೇಶ 12, ಕೇರಳಾದ 692, ಮಧ್ಯಪ್ರದೇಶ 3, ಮಹಾರಾಷ್ಟ್ರದ 222, ಒರಿಸ್ಸಾದ 16, ಪುದುಚೇರಿ 5, ರಾಜಾ ಸ್ತಾನದ 296, ತಮಿಳುನಾಡಿನ 595, ತೆಲಂಗಾಣದ 107, ಉತ್ತರಪ್ರದೇಶದ 2946 ಸೇರಿದಂತೆ 5272 ಮಂದಿಯನ್ನು ಅವರವರ ರಾಜ್ಯಕ್ಕೆ ಕಳುಹಿಸಿಕೊಡಲು ಆಯಾ ರಾಜ್ಯಗಳು ಒಪ್ಪಿಗೆ ಸೂಚಿಸಿದ ಮೇರೆಗೆ ತವರಿಗೆ ಕಳುಹಿಸಲಾಗಿದೆ. ರಾಜಾಸ್ತಾನದ ಒಬ್ಬರ ಅರ್ಜಿ ತಿರಸ್ಕøತಗೊಂಡಿದೆ. ಇನ್ನೂ 9,796 ಮಂದಿ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಲು ಒಪ್ಪಿಗೆ ಪಡೆಯುವ ಸಮಾಲೋಚನೆಯಲ್ಲಿ ಜಿಲ್ಲಾಡಳಿತ ತೊಡಗಿದೆ. ಮೇ 13ರವರೆಗೆ ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ 15,068 ಮಂದಿ ಹೊರ ರಾಜ್ಯದವರು ಹೆಸರು ನೋಂದಾ ಯಿಸಿಕೊಂಡಿದ್ದರು. ಮೇ 17ರವರೆಗೆ ಇನ್ನಷ್ಟು ಮಂದಿ ಹೆಸರು ನೋಂದಾಯಿಸಿಕೊಂಡಿ ರುವುದರಿಂದ ಹೊರ ರಾಜ್ಯದವರ ಸಂಖ್ಯೆ 20 ಸಾವಿರ ಗಡಿ ಮುಟ್ಟುವ ಸಾಧ್ಯತೆ ಇದೆ.

ಎಂ.ಟಿ.ಯೋಗೇಶ್ ಕುಮಾರ್