ಕುಂಬಾರಕೊಪ್ಪಲು ಸ್ಮಶಾನ ಅಭಿವೃದ್ಧಿಗೆ ಸಂಸದ, ಶಾಸಕರ ಚಾಲನೆ

ಮೈಸೂರು,ಜ.13(ಆರ್‍ಕೆಬಿ)- ಮೈಸೂರು ನಗರಪಾಲಿಕೆ 4ನೇ ವಾರ್ಡ್ ಹೆಬ್ಬಾಳು, ಲೋಕನಾಯಕನಗರದ ಕುಂಬಾರಕೊಪ್ಪಲು ಸ್ಮಶಾನವನ್ನು 1.50 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುರು ವಾರ ಗುದ್ದಲಿಪೂಜೆ ನೆರವೇರಿಸಲಾಯಿತು.

ಸ್ಮಶಾನದಲ್ಲಿ ಶವ ಸಂಸ್ಕಾರಕ್ಕಾಗಿ ಹೈವೋ ಲ್ಟೇಜ್ ಎಲೆಕ್ಟ್ರಿಕಲ್ ಬರ್ನಿಂಗ್ ಮೆಷಿನ್, ಎಲೆಕ್ಟ್ರಿಕಲ್ ಆಪರೇಟಿಂಗ್ ಸಾಮಗ್ರಿಗಳು, ಬರ್ನಿಂಗ್ ಮೆಷಿನ್ ಕಟ್ಟಡದ ಸಿವಿಲ್ ಕಾಮ ಗಾರಿ, ಸ್ಮಶಾನ ಆವರಣಕ್ಕೆ ಹೈಮಾಸ್ಟ್ ದೀಪಗಳು, ಸ್ಮಶಾನದ ಆವರಣದಲ್ಲಿ ಸಿವಿಲ್ ಕಾಮಗಾರಿ, ಓವರ್‍ಹೆಡ್ ಟ್ಯಾಂಕ್, ಕೊಳವೆ ಬಾವಿ ಮತ್ತು ನೀರಿನ ನಲ್ಲಿಗಳು, ಎಲೆಕ್ಟ್ರಿಕಲ್ ಟ್ರಾನ್ಸ್‍ಫಾರ್ಮರ್, ಡೀಸೆಲ್ ಜನರೇಟರ್ ಇನ್ನಿತರೆ ಕಾಮಗಾರಿಗಳಿಗೆ ಸಂಸದ ಪ್ರತಾಪ್‍ಸಿಂಹ ಸಮ್ಮುಖದಲ್ಲಿ ಶಾಸಕ ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ ಸಮ್ಮುಖದಲ್ಲಿ ಗುದ್ದಲಿಪೂಜೆ ನೆರವೇರಿತು.

ಈ ವೇಳೆ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಒಂಟಿಕೊಪ್ಪಲು, ಕನ್ನೇಗೌಡನ ಕೊಪ್ಪಲು, ಮೇಟಗಳ್ಳಿ, ಪಡುವಾರಹಳ್ಳಿ ಹೀಗೆ ಹಲವು ಗ್ರಾಮಗಳಿವೆ. ತಾವು ಶಾಸಕ ರಾದ ಬಳಿಕ ಈ ಗ್ರಾಮಗಳಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ಈ ಗ್ರಾಮಗಳ ಜನರು ತಮ್ಮ ಜಮೀನುಗಳನ್ನು ನೀಡಿದ್ದರ ಪರಿಣಾಮ ನಗರ ವಿಸ್ತಾರವಾಯಿತು. ಹಲ ವಾರು ಬಡಾವಣೆಗಳು ನಿರ್ಮಾಣವಾದವು. ಈ ಎಲ್ಲಾ ಗ್ರಾಮಗಳ ಜನತೆಯನ್ನು ನಾವಿಂದ ಅಭಿನಂದಿಸಬೇಕಿದೆ ಎಂದರು.
ಹಿಂದಿನ ದಿನಗಳಲ್ಲಿ ಸ್ಮಶಾನಗಳು ಕಸದ ರಾಶಿಯ ತೊಟ್ಟಿಗಳಾಗಿದ್ದವು. ಆದರೆ ಇತ್ತೀ ಚೆಗೆ ಸ್ಮಶಾನಗಳು ಉದ್ಯಾನವನಗಳಾಗಿ ಅಭಿ ವೃದ್ಧಿ ಹೊಂದುತ್ತಿವೆ ಎಂದು ಹೇಳಿದರು.

ಸಂಸದ ಪ್ರತಾಪ್‍ಸಿಂಹ ಮಾತನಾಡಿ, ಕಳೆದ ವರ್ಷ ಕೋವಿಡ್‍ನಿಂದ 1003 ಮಂದಿ ಮೃತಪಟ್ಟರು. ಆಗಲೇ ಸ್ಮಶಾನಗಳ ಮಹತ್ವ ಎಷ್ಟೆಂಬುದು ತಿಳಿಯಿತು. ಮೃತ ಪಟ್ಟವರ ಅಂತಿಮ ದರ್ಶನ, ನಮನ ಸಲ್ಲಿಸಲು ಸುಸಜ್ಜಿತ ಸ್ಮಶಾನ ಇರಬೇಕೆಂ ಬುದು ಗೊತ್ತಾಯಿತು. ಹಾಗಾಗಿ ಈ ಭಾಗದ ಪಾಲಿಕೆ ಸದಸ್ಯ ಪೈಲ್ವಾನ್ ಶ್ರೀನಿವಾಸ್ 1.50 ಕೋಟಿ ರೂ.ಗಳ ಅನುದಾನ ತಂದು ಇಂದು ಸ್ಮಶಾನ ಅಭಿವೃದ್ಧಿ ಕಾರ್ಯ ಕೈಗೊಂಡಿ ದ್ದಾರೆ. ಇಷ್ಟೊಂದು ಹಣ ತರುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಪೈ.ಶ್ರೀನಿ ವಾಸ್ ಸಾಧಿಸಿದ್ದಾರೆ ಎಂದು ಶ್ಲಾಘಿಸಿದರು.

ಮೇಯರ್ ಸುನಂದಾ ಪಾಲನೇತ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ನಗರಪಾಲಿಕೆ ಸದಸ್ಯರಾದ ಪೈ.ಶ್ರೀನಿವಾಸ್, ಅಯೂಬ್‍ಖಾನ್, ಪ್ರೇಮಾ ಶಂಕರೇಗೌಡ, ರಮೇಶ್, ಸತ್ಯರಾಜ್, ಹರ್ಷದುಲ್ಲಾ, ಉಷಾ ಕುಮಾರ್, ಲಕ್ಷ್ಮಿ ಶಿವಣ್ಣ, ಪುಷ್ಪಲತಾ ಜಗ ನ್ನಾಥ್, ಎಂ.ಯು.ಸುಬ್ಬಯ್ಯ, ರಮೇಶ್ ರಮಣಿ, ಆಶಾ ನಾಗಭೂಷಣ್ ಸಿಂಗ್, ಪಾಲಿಕೆ ಮಾಜಿ ಸದಸ್ಯ ಜಯರಾಮ್, ಶಿವಣ್ಣ, ಪಾಲಿಕೆ ಆಯುಕ್ತ ಡಾ.ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ಜಿಲ್ಲಾ ಮ್ಯಾಕ್ಸಿ ಕ್ಯಾಬ್ ಅಸೋಸಿ ಯೇಷನ್ ಅಧ್ಯಕ್ಷ ಎ.ಸಿ.ರವಿ, ರಾಜ್ಯ ಒಕ್ಕಲಿ ಗರ ಸಂಘದ ಸಿ.ಜಿ.ಗಂಗಾಧರ್, ಕುಂಬಾರ ಕೊಪ್ಪಲು ಅಭ್ಯುದಯ ಸಂಘದ ಉಪಾ ಧ್ಯಕ್ಷ ರಾಮಕೃಷ್ಣೇಗೌಡ, ಯ.ಚಿಕ್ಕಣ್ಣ, ಯ. ಅಪ್ಪಾಜಿಗೌಡ, ಪಾಲಿಕೆ ಅಧೀಕ್ಷಕ ಇಂಜಿನಿ ಯರ್ ಮಹೇಶ್, ಕಾರ್ಯಪಾಲಕ ಇಂಜಿನಿ ಯರ್ ಸಿಂಧು, ಅಭಿವೃದ್ದಿ ಅಧಿಕಾರಿ ಮನುಗೌಡ ಇನ್ನಿತರರು ಉಪಸ್ಥಿತರಿದ್ದರು.