ಅಂಚೆ ನೌಕರರ ಬೇಡಿಕೆ ಈಡೇರಿಸಲು ಒತ್ತಾಯಿಸುವೆ: ಸಂಸದ

ಚಾಮರಾಜನಗರ:  ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳ ಈಡೇ ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಸಂಸದ ಆರ್.ಧ್ರ್ರುವನಾರಾಯಣ್ ಭರವಸೆ ನೀಡಿದರು.

ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿಯ ಆವರಣದಲ್ಲಿ ಶ್ರೀಕಮಲೇಶಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಶನಿವಾರ ಅವರು ಭೇಟಿ ನೀಡಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ಜೂ. 5 ರಂದು ದೆಹಲಿಯಲ್ಲಿ ಅಂಚೆ ಇಲಾಖೆಯ ಸಚಿವರು ಹಾಗೂ ಅಧಿ ಕಾರಿಗಳನ್ನು ಭೇಟಿ ಮಾಡಿ ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಒಂದು ವೇಳೆ ಜೂ. 5ರಂದು ಅಂಚೆ ಇಲಾಖೆ ಸಚಿವರು ಸಿಗದಿದ್ದರೆ ಅಧಿವೇಶನದಲ್ಲಿ ಶೂನ್ಯವೇಳೆಯಲ್ಲಿ ತಕ್ಷಣವೇ ಗ್ರಾಮೀಣ ಅಂಚೆ ನೌಕರರ ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಲಾಗುವುದು. ಗ್ರಾಮೀಣ ಅಂಚೆ ನೌಕರರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಈ ವೇಳೆ ಮಾಜಿ ಶಾಸಕ ಎಸ್.ಬಾಲರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿ ಕುಮಾರ್, ಮಾಜಿ ಅಧ್ಯಕ್ಷ ಆಲ್ದೂರು ರಾಜಶೇಖರ್ ಹಾಜರಿದ್ದರು.

ಮುಂದುವರಿದ ಮುಷ್ಕರ: ಗ್ರಾಮೀಣ ಅಂಚೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, 6ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಲ್ಲಿ ವಿಭಾಗೀಯ ಕಾರ್ಯದರ್ಶಿ ಎಂ.ಡಿ.ಶಿವಣ್ಣ, ಮಹೇಶ್‍ಪಾಳ್ಯ, ಎನ್‍ಯುಜಿಡಿಎಸ್ ಕಾರ್ಯದರ್ಶಿ ಮಾದೇಶ್ ಮಂಚಾಪುರ, ಬಿ.ಶೇಖಣ್ಣ, ಶಾಂತೇಶ್, ಮಾಳಿಗಯ್ಯ, ರಾಘವೇಂದ್ರ, ರಾಜರಾಂ, ಮಹದೇವಯ್ಯ, ವಿಭಾಗೀಯ ಸಂಘಟನೆಯ ಸಂಯೋಜಕ ರೇವಣ್ಣಸಿದ್ದಪ್ಪ, ಮಾದೇಶ್, ಪ್ರಕಾಶ್, ಚಂದ್ರು, ಅಂತೋಣ ಕುಮಾರ್, ಮುರಳಿ, ಶರವಣನ್, ರಂಗಸ್ವಾಮಿ, ಮಹದೇವ ಸ್ವಾಮಿ, ರಾಜೇಂದ್ರ, ನಿಜಲಿಂಗಮೂರ್ತಿ, ಮಲ್ಲಿಕಾರ್ಜನ ಪಾಲ್ಗೊಂಡಿದ್ದರು.