ಸಂಕಷ್ಟದಲ್ಲಿ ಸಂಪನ್ಮೂಲ ಸಂಗ್ರಹ ಸೂತ್ರ: ನಾನಾ ಅಳತೆಯ 300 ನಿವೇಶನ ಹರಾಜಿಗೆ ಮುಡಾ ನಿರ್ಧಾರ

ಮೈಸೂರು, ಆ.1(ಎಸ್‍ಬಿಡಿ)- ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ)ವು ಆನ್‍ಲೈನ್ ಮೂಲಕ ನಿವೇಶನ ಮಾರಾಟಕ್ಕೆ ಮುಂದಾಗಿದ್ದು, ಸಾರ್ವಜನಿಕ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಹಿಂದೆ ಬೆರಳೆಣಿಕೆಯಷ್ಟು ನಿವೇಶನಗಳನ್ನು ಹೀಗೆ ಆನ್‍ಲೈನ್ ಮೂಲಕ ಮಾರಾಟ ಪ್ರಕ್ರಿಯೆ ನಡೆಸಿ ದ್ದರೂ ಯಶಸ್ವಿಯಾಗಿರಲಿಲ್ಲ. ಆದರೆ ಈಗ ಬರೋ ಬ್ಬರಿ 300 ನಿವೇಶನಗಳನ್ನು ಆನ್‍ಲೈನ್ ಮೂಲಕ ವ್ಯವಸ್ಥಿತವಾಗಿ ಮಾರಾಟ ಮಾಡುವ ಪ್ರಯತ್ನ ನಡೆಸ ಲಾಗುತ್ತಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಪ ನ್ಮೂಲ ಕ್ರೂಢೀಕರಣಕ್ಕೆ ಆನ್‍ಲೈನ್ ಮೊರೆ ಹೋಗಿ ರುವುದು ಸೂಕ್ತ ಹಾಗೂ ಸುರಕ್ಷಿತ ಕ್ರಮವಾಗಿದೆ. ಸ್ಥಳೀ ಯರು ಮಾತ್ರವಲ್ಲದೆ ವಿದೇಶಗಳಲ್ಲಿರುವ ಭಾರತೀಯ ರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಮುಡಾ ಪ್ರಯತ್ನ ಯಶಸ್ವಿಯಾಗುವುದರ ಜೊತೆಗೆ ಉತ್ತಮ ಆದಾಯ ದೊರಕುವ ವಿಶ್ವಾಸವೂ ಮೂಡಿದೆ.

ಆ.13ರಿಂದ ಹರಾಜು: ಈಗಾಗಲೇ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಮುಡಾ ವೆಬ್‍ಸೈಟ್‍ನ ಇ-ಪೆÇ್ರೀಕ್ಯೂರ್‍ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಐಸಿಐ ಸಿಐ ಬ್ಯಾಂಕ್‍ನಲ್ಲಿ 1,500 ರೂ. ಮೊತ್ತದ ಡಿಡಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ನಿವೇಶನದ ನಿಗದಿತ ಮೂಲ ಬೆಲೆ ಒಂದು ಕೋಟಿ ರೂ.ಗಳಿದ್ದರೆ 1 ಲಕ್ಷ ರೂ. ಹಾಗೂ ಅದಕ್ಕೂ ಹೆಚ್ಚಿನ ಬೆಲೆ ಇದ್ದರೆ 3 ಲಕ್ಷ ರೂ.ಗಳ ಇಎಂಡಿ ಪಾವತಿಸ ಬೇಕು. ಆ.13ರಿಂದ 20ರವರೆಗೆ ನಿವೇಶನಗಳ ಹರಾಜು ಜರುಗಲಿದೆ. ಆನ್‍ಲೈನ್‍ನಲ್ಲಿ ನೋಂದಣಿ ಸಾಧ್ಯವಾಗ ದವರು ನೇರವಾಗಿ ಮುಡಾ ಕಚೇರಿಯನ್ನು ಸಂಪ ರ್ಕಿಸಿ, ಇಲ್ಲಿನ ‘ಹೆಲ್ಪ್ ಡೆಸ್ಕ್’ನಲ್ಲಿ ಸಹಾಯ ಪಡೆಯ ಬಹುದು. ನಿಗದಿತ ಡಿಡಿ ತೆಗೆದುಕೊಂಡು ಹೋದರೆ ಮುಡಾ ಸಿಬ್ಬಂದಿಯೇ ಅರ್ಜಿ ಭರ್ತಿ ಮಾಡಿ ಆನ್ ಲೈನ್‍ನಲ್ಲಿ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.

ವಂಚನೆಗೆ ಅವಕಾಶವಿಲ್ಲ: ಮುಡಾದಲ್ಲಿ ನೇರವಾಗಿ ಹೋದರೆ ಯಾವುದೇ ಕೆಲಸವಾಗುವುದಿಲ್ಲ ಎಂಬ ಭಾವನೆ ಜನರಲ್ಲಿದೆ. ಎಲ್ಲಾ ಹಂತಗಳಲ್ಲೂ ಮಧ್ಯವರ್ತಿ ಗಳದ್ದೇ ಕಾರುಬಾರು ಎಂಬ ದೂರುಗಳೂ ಕೇಳಿ ಬಂದಿವೆ. ಆದರೆ ಆನ್‍ಲೈನ್ ಮೂಲಕ ನಿವೇಶನ ಮಾರಾಟ ಮಾಡುತ್ತಿರುವುದರಿಂದ ಮಧ್ಯವರ್ತಿಗಳ ಸಹಾಯ ಅಗತ್ಯವಿಲ್ಲ. ಅಲ್ಲದೆ ಯಾವುದೇ ರೀತಿ ಯಲ್ಲಿ ವಂಚನೆಗೂ ಅವಕಾಶವಾಗದಂತೆ ವ್ಯವ ಹರಿಸಬಹುದು. ಆನ್‍ಲೈನ್ ಮೂಲಕ ನಡೆಯುವ ನಿವೇಶನ ಹರಾಜು ಪ್ರಕ್ರಿಯೆಯಲ್ಲಿ ಯಾರಾದರೂ ಪಾಲ್ಗೊಳ್ಳಬಹುದು.

ಬಿಡ್ ಯಾವಾಗ?: ಎಷ್ಟು ವಿಸ್ತೀರ್ಣದ ರಸ್ತೆಯಲ್ಲಿ, ಯಾವ ದಿಕ್ಕಿಗೆ ಎಷ್ಟು ಅಳತೆ ನಿವೇಶನವಿದೆ, ಅದರೆ ನಿಗದಿತ ಬೆಲೆ ಎಷ್ಟು? ಹೀಗೆ ಎಲ್ಲವನ್ನೂ ವಿಂಗಡಿಸಿ ರುವುದರಿಂದ ಕೊಳ್ಳುವವರಿಗೆ ಸ್ಪಷ್ಟ ಮಾಹಿತಿ ಲಭ್ಯ ವಾಗಲಿದೆ. ಮೊದಲ 75 ನಿವೇಶನಕ್ಕೆ ಆ.13ರವರೆಗೆ, 76ರಿಂದ 150 ನಿವೇಶನಕ್ಕೆ ಆ.16, 151ರಿಂದ 225 ರವರೆಗೆ ಆ.17 ಹಾಗೂ 226ರಿಂದ 300ನೇ ನಿವೇ ಶನದವರೆಗೆ ಆ.18ರವರೆಗೆ ನೋಂದಣಿ ಮಾಡಿ ಕೊಳ್ಳಲು ಅವಕಾಶವಿದೆ. ನೋಂದಣಿ ಕಡೇ ದಿನಾಂಕ ದಿಂದ 2 ದಿನದಲ್ಲಿ ಆಯಾ ನಿವೇಶನಗಳ ಬಿಡ್ ನಡೆಯಲಿದೆ. ನಿವೇಶನ ಖರೀದಿಸಿದ 72 ಗಂಟೆ ಗಳಲ್ಲಿ ಶೇ.25ರಷ್ಟು ಮೊತ್ತವನ್ನು ಮುಡಾಗೆ ಪಾವತಿ ಸಬೇಕು. ಉಳಿದ ಹಣವನ್ನು ಸಂದಾಯ ಮಾಡಲು 45 ದಿನ ಕಾಲಾವಕಾಶ ಇರುತ್ತದೆ. ಹೆಚ್ಚುವರಿಯಾಗಿ 45 ದಿನಗಳ ಕಾಲಾವಕಾಶವೂ ಇರಲಿದ್ದು ನಿಗದಿತ ಬಡ್ಡಿಯೊಂದಿಗೆ ಪಾವತಿ ಮಾಡಬೇಕಾಗುತ್ತದೆ. ಹಣ ಕಾಸು ಪ್ರಕ್ರಿಯೆ ಮುಗಿದ ತಕ್ಷಣ ಖರೀದಿದಾರರ ಹೆಸರಿಗೆ ದಾಖಲೆ ವರ್ಗಾವಣೆಯಾಗಲಿದೆ. 10 ವರ್ಷ ನಿವೇಶನವನ್ನು ಮಾರಾಟ ಮಾಡುವಂತಿಲ್ಲ ಎಂಬ ನಿಯಮ ಈ ಪ್ರಕ್ರಿಯೆಯಲ್ಲಿ ಅನ್ವಯಿಸು ವುದಿಲ್ಲ. ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಅವರ ಈ ಕ್ರಮದಿಂದ ಮುಡಾ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೆಚ್ಚಿದ ಬೇಡಿಕೆ: ಮುಡಾ ನಿವೇಶನಗಳಿಗೆ ಎಂದೂ ಬೇಡಿಕೆ ಇದ್ದೇ ಇದೆ. ಆದರೆ ಪ್ರಮುಖ ನಗರಗಳ ನಡುವಿನ ಸಂಪರ್ಕ ಉನ್ನತೀಕರಣದಿಂದ ಮೈಸೂರಿ ನಲ್ಲಿ ನಿವೇಶನಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಿದೆ. ಮೈಸೂರು-ಬೆಂಗಳೂರು ನಡುವೆ ದಶಪಥ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿದೆ. ಬುಲೆಟ್ ರೈಲು ಮಾರ್ಗ ಚಿಂತನೆಯಿದೆ. ವಿಮಾನಯಾನ ಸಂಪರ್ಕ ಉತ್ತಮ ವಾಗಿದೆ. ಕೈಗಾರಿಕಾ ಅಭಿವೃದ್ಧಿಗೂ ಪ್ರೋತ್ಸಾಹ ದೊರಕುತ್ತಿದೆ. ಹಾಗಾಗಿ ಸಹಜವಾಗಿ ನಿವೇಶನಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಬಹುದು. ಮುಂದಿನ ದಿನಗಳಲ್ಲಿ ಬೆಲೆ ದುಪ್ಪಟ್ಟಾಗಬಹುದು. ಹಾಗಾಗಿ ಇದೊಂದು ಸುವರ್ಣಾವಕಾಶ ಎಂದು ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಅಭಿಪ್ರಾಯಿಸಿದ್ದಾರೆ.