ಮುದ್ದುಬೀರನಹುಂಡಿ ಗ್ರಾಮ ಸೀಲ್‍ಡೌನ್

ತಿ.ನರಸೀಪುರ, ಮೇ 5(ಎಸ್‍ಕೆ)- ತಾಲೂಕಿ ನಲ್ಲಿ ಕೊರೊನಾ ಸೋಂಕು ಹೆಚ್ಚು ತ್ತಿದ್ದು, ಪುರಸಭಾ ವ್ಯಾಪ್ತಿಯ ಮುದ್ದುಬೀರನಹುಂಡಿ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿ, ಸೀಲ್‍ಡೌನ್ ಮಾಡಲಾಗಿದೆ.

ಇತ್ತೀಚಿಗೆ ತಾಲೂಕಿನಲ್ಲಿ ಪ್ರತಿದಿನ 100 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಜನರಿಗೆ ಎಷ್ಟೇ ಜಾಗೃತಿ ಮೂಡಿಸುವ ಪ್ರಯತ್ನ ನಡೆದರೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸು ತ್ತಿದೆ. ತಾಲೂಕಿನ ಹಲವಾರು ಗ್ರಾಮ ಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗು ತ್ತಿದ್ದು. ಸೋಂಕಿತರಿಗೆ ನಿಗದಿತ ಸಮಯ ದಲ್ಲಿ ಅಗತ್ಯ ಚಿಕಿತ್ಸೆ ದೊರಕಿಸಲು ತಾಲೂಕು ಆರೋಗ್ಯ ಹೆಣಗಾಡುವಂತಾ ಗಿದೆ. ಈಗಾಗಲೇ ಪುರಸಭಾ ವ್ಯಾಪ್ತಿಯ ತ್ರಿವೇಣಿ ನಗರ ಹಾಗೂ ಆಲಗೂಡು ಗ್ರಾಮದಲ್ಲಿ ಸೀಲ್‍ಡೌನ್ ಮಾಡಲಾಗಿತ್ತು. ಜನರು ಸ್ವಯಂ ಪ್ರೇರಿತಾಗಿ ಜಾಗೃತರಾಗದಿದ್ದರೆ ಬಹಳ ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಕೂಡ್ಲೂರು ಕೋವಿಡ್ ಕೇಂದ್ರ ಅವ್ಯವಸ್ಥೆ: ಕೋವಿಡ್ ಸೋಂಕಿತರಿಗೆಂದು ಸ್ಥಾಪಿಸಿರುವ ಕೂಡ್ಲೂರು ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇಂದ್ರದಲ್ಲಿ ರೋಗಿಗಳಿಗೆ ಆಹಾರ ಪೂರೈಕೆ ಸರಿಯಲ್ಲ. ಬಿಸಿ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ರೋಗಿಗಳು ಹಾಗೂ ಅವರ ಸಂಬಂಧಿಕರು ಆರೋಪಿಸಿದ್ದಾರೆ.

ಈಗಾಗಲೇ ಶಾಸಕ ಎಂ.ಅಶ್ವಿನ್ ಕುಮಾರ್ ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸೂಕ್ತ ಸೌಲಭ್ಯ ನೀಡುವಂತೆ ಸೂಚಿಸಿ ದ್ದರೂ ಸಹ ತಾಲೂಕು ಆಡಳಿತ ಬೇಜವಾ ಬ್ದಾರಿಯಾಗಿ ವರ್ತಿಸುತ್ತಾ ಸೋಂಕಿತರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಮಂಗಳ ವಾರ ಕೂಡ ರೋಗಿಗಳು, ಸಂಬಂಧಿಕರು ಅವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.