ಕೊರೊನಾ ನಿಯಂತ್ರಣದಲ್ಲಿ ಮೈಸೂರು ದೇಶಕ್ಕೇ `ಮಾದರಿ’

ಮೈಸೂರು, ಮೇ 22(ಆರ್‍ಕೆಬಿ)- ಕೊರೊನಾ ನಿಯಂತ್ರಿಸುವಲ್ಲಿ ಮೈಸೂರು ಜಿಲ್ಲಾಡಳಿತದ ಕಾರ್ಯವೈಖರಿ ಇಡೀ ದೇಶಕ್ಕೇ ಮಾದರಿ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದರು.

ಆಯುಷ್ ಇಲಾಖೆ ಸಹಯೋಗದಲ್ಲಿ ಶಾಸಕ ಎಸ್.ಎ.ರಾಮದಾಸ್ ಶುಕ್ರವಾರ ಕುವೆಂಪು ನಗರದ ಸಾಮ್ರಾಟ್ ಕಲ್ಯಾಣ ಭವನದಲ್ಲಿ ಆಯೋಜಿಸಿದ್ದ ಚ್ಯವನ್ ಪ್ರಾಶ್, ಕಷಾಯ ಪುಡಿ, ಪ್ರಾಣಾಯಾಮ ಮತ್ತು ಅಗ್ನಿಹೋತ್ರದ ಕರಪತ್ರ ಒಳಗೊಂಡ `ಆರೋಗ್ಯ ಕಿಟ್’ ಅನ್ನು ಕೆಆರ್ ಕ್ಷೇತ್ರದ ನಾಗರಿಕರಿಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು, ಜಿಲ್ಲೆ ಯಲ್ಲಿ ಕೊರೊನಾ ಹರಡುವಿಕೆ ಪೂರ್ಣ ನಿಯಂತ್ರಣದಲ್ಲಿದೆ. ಮೈಸೂರು ಜಿಲ್ಲೆ ಇಡೀ ದೇಶಕ್ಕೆ ಮಾದರಿ. ಇದಕ್ಕೆ ಕಾರಣರಾದ ಜಿಲ್ಲಾ ಧಿಕಾರಿ ಮತ್ತು ತಂಡಕ್ಕೆ ಅಭಿನಂದನೆ. ಮೈಸೂರಿನ ಜನರೂ ಜಿಲ್ಲಾಡಳಿತಕ್ಕೆ ಉತ್ತಮ ರೀತಿ ಸಹಕರಿಸಿದ್ದಾರೆ ಎಂದು ಶ್ಲಾಘಿಸಿದರು.

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಕೋವಿಡ್ -19 ತಡೆಗಾಗಿ ನಿರಂತರ ಶ್ರಮಿಸುತ್ತಿವೆ. ಅಲ್ಲದೇ ಆರ್ಥಿಕ ಪುನಶ್ಚೇತನಕ್ಕಾಗಿ ಹಲವು ಕಾರ್ಯಕ್ರಮ ಹಾಕಿಕೊಂಡಿವೆ. ದುಡಿಯುವ ವರ್ಗ, ರೈತ ಕುಟುಂಬಗಳಿಗೆ ಸಹಕಾರ ಇಲಾಖೆ ಆರ್ಥಿಕ ನೆರವು ನೀಡುತ್ತಿದೆ. ಕೊರೊನಾ ಬಂದ ನಂತರ ಜನಜೀವನ ಶೈಲಿ, ಚಿಂತನೆಯಲ್ಲ್ಲಿ ಬದಲಾವಣೆ ಯಾಗಿದೆ. ನಮ್ಮ ಜೀವನ ಶೈಲಿ, ಔಷಧ ಪದ್ಧತಿ ಎಲ್ಲವೂ ವಿಶ್ವದ ಗಮನ ಸೆಳೆದಿವೆ. ಜಗತ್ತು ಭಾರತ ದತ್ತ ನೋಡುತ್ತಿದೆ. ರಾಮದಾಸ್ ಕ್ಷೇತ್ರದ ಜನರಿಗೆ ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ನೀಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಗೃಹ ಇಲಾಖೆ ರಾಜ್ಯದಲ್ಲಿ ಶಿಸ್ತು ಬದ್ಧವಾಗಿ ಕೆಲಸ ನಿರ್ವಹಿಸಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕೊರೊನಾ ನಿಯಂ ತ್ರಣದಲ್ಲಿ ಉತ್ತಮ ಕೆಲಸ ಮಾಡಿವೆ. ಲಾಕ್ ಡೌನ್ ಸಂದರ್ಭ ರಾಮದಾಸ್ ಕಾರ್ಮಿಕರಿಗೆ, ನಿರಾಶ್ರಿತರಿಗೆ ದಿನಸಿ, ಔಷಧಿ ಉಚಿತವಾಗಿ ಹಂಚಿದ್ದಾರೆ. ಅವರ ನೇತೃತ್ವದಲ್ಲಿ ನಡೆಯುತ್ತಿ ರುವ ಆಹಾರ ತಯಾರಿಕಾ ಸ್ಥಳ ಒಂದು ಕೈಗಾರಿಕೆಯಂತೆ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು. ಪ್ರಾಸ್ತಾವಿಕ ನುಡಿಗಳಾಡಿದ ಶಾಸಕ ಎಸ್.ಎ.ರಾಮದಾಸ್, ರೋಗ ನಿರೋ ಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳಿರುವ ಆರೋಗ್ಯ ಕಿಟ್‍ಗಳನ್ನು ನಮ್ಮ ತಂಡದ ಸದಸ್ಯರು ಕೆಆರ್ ಕ್ಷೇತ್ರದ 80 ಸಾವಿರ ಮನೆಗಳಿಗೆ ತಲುಪಿ ಸಲಿದ್ದಾರೆ ಎಂದರು. ಇದಕ್ಕೂ ಮುನ್ನ ಗೃಹ ಸಚಿವ ಬಸವರಾಜು ಬೊಮ್ಮಾಯಿ ಕಲ್ಯಾಣ ಭವನ ಆವರಣದಲ್ಲಿ ಗೋಪೂಜೆ ನೆರವೇರಿಸಿ ದರು. ಮೇಯರ್ ತಸ್ನೀಂ, ಪಾಲಿಕೆ ಸದಸ್ಯ ರಾದ ಬಿ.ವಿ.ಮಂಜುನಾಥ್, ಶಿವಕುಮಾರ್, ಸುನಂದಾ ಪಾಲನೇತ್ರ, ಛಾಯಾದೇವಿ, ರೂಪಾ, ಶಾರದಮ್ಮ, ಗೀತಾ ಯೋಗಾನಂದ, ಪದ್ಮಾ, ಸೌಮ್ಯ ಉಮೇಶ್, ಶಾಂತಮ್ಮ ವಡಿ ವೇಲು, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಡಿಸಿಪಿ ಪ್ರಕಾಶ್‍ಗೌಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಕೃಷ್ಣರಾಜ ಕ್ಷೇತ್ರ ಅಧ್ಯಕ್ಷ ವಡಿವೇಲು ಇದ್ದರು.