ತುಳಸಿದಾಸ್ ಆಸ್ಪತ್ರೆಗೆ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಕೊಡುಗೆ

ಮೈಸೂರು, ಮೇ 27(ಎಂಟಿವೈ)- ಕೊರೊನಾ ಸೋಂಕಿತರು ದಾಖಲಾಗಿ ರುವ ಮೈಸೂರಿನ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಾದ ವಿವಿಧ ಪರಿಕರಗಳನ್ನು ನೀಡು ತ್ತಿರುವ `ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್’(ಎಂಎಲ್‍ಎಫ್‍ಸಿಟಿ) ಇಂದು ಜೆಎಲ್‍ಬಿ ರಸ್ತೆಯ ತುಳಸಿದಾಸ್ ಹೆರಿಗೆ ಆಸ್ಪತ್ರೆಗೆ ರೋಗಿಗಳ ಹಾಸಿಗೆ ಪಕ್ಕ ಇಡುವ 15 ಮಿನಿ ಟೇಬಲ್‍ಗಳನ್ನು ನೀಡಿದೆ.

ಟ್ರಸ್ಟ್ ಸದಸ್ಯರು ಗುರುವಾರ ತುಳಸಿ ದಾಸ್ ಆಸ್ಪತ್ರೆಗೆ ತೆರಳಿ 45 ಸಾವಿರ ರೂ. ಮೌಲ್ಯದ ಮಿನಿ ಟೇಬಲ್‍ಗಳನ್ನು ಕೋವಿಡ್ ಆಸ್ಪತ್ರೆ ಬೆಡ್ ಮ್ಯಾನೇಜ್‍ಮೆಂಟ್ ಉಸ್ತು ವಾರಿಯಾದ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಅವರಿಗೆ ಹಸ್ತಾಂತರಿಸಿದರು.

ಬಳಿಕ ಹೆಚ್.ವಿ.ರಾಜೀವ್ ಮಾತನಾಡಿ, ಕೊರೊನಾ ಹಾವಳಿಯ ಕಷ್ಟಕರ ಸನ್ನಿವೇಶ ದಲ್ಲಿ ಸೋಂಕಿತರು ಹಾಗೂ ಸಂತ್ರಸ್ತರಿಗೆ ನೆರವಾಗಲು ಹಲವು ಸಂಘ-ಸಂಸ್ಥೆಗಳು ಮುಂದೆ ಬಂದಿವೆ. ಆಸ್ಪತ್ರೆಗಳಿಗೆ ಮೆಡಿಕಲ್ ಕಿಟ್, ಔಷಧಿ, ಚಿಕಿತ್ಸಾ ಉಪಕರಣಗಳ ಕೊಡುಗೆ ನೀಡುತ್ತಿವೆ. ಸೋಂಕಿತರ ಸ್ಥಿತಿ ಗಂಭೀರವಾದಾಗ ತುರ್ತಾಗಿ ಆಮ್ಲಜನಕ ನೀಡಬೇಕಾಗುತ್ತದೆ. ಅದನ್ನರಿತು ಕೆಲ ಸಂಸ್ಥೆ ಗಳು ಆಕ್ಸಿಜನ್ ಕಾನ್ಸನ್ಟ್ರೇಟರ್‍ಗಳನ್ನು ನೀಡಿ ಉದಾರತೆ ತೋರಿವೆ. ಉಳ್ಳವರು ಆಕ್ಸಿಜನ್ ಕಾನ್ಸನ್ಟ್ರೇಟರ್ ಸೇರಿದಂತೆ ಚಿಕಿತ್ಸೆಗೆ ಅಗತ್ಯ ವಾದ ಉಪಕರಣಗಳನ್ನು ನೀಡುವ ಮೂಲಕ ಸೋಂಕಿತರ ಜೀವ ಉಳಿಸಲು ಕೈಜೋಡಿಸ ಬೇಕು ಎಂದು ಮನವಿ ಮಾಡಿದರು.

ಎಂಎಲ್‍ಎಫ್‍ಸಿಟಿ ಅಧ್ಯಕ್ಷೆ ಶುಭಾ ಅರಸ್ ಮಾತನಾಡಿ, ಕೊರೊನಾ ಕಷ್ಟ ಕಾಲದಲ್ಲಿ ಟ್ರಸ್ಟ್‍ನಿಂದ ಸಾಧ್ಯವಾದಷ್ಟು ನೆರವು ನೀಡಲಾಗುತ್ತಿದೆ. ಸಂತ್ರಸ್ಥರಿಗೆ ಫುಡ್‍ಕಿಟ್, ಮಾಸ್ಕ್ ನೀಡುತ್ತಿದ್ದೇವೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಾದ ಪರಿಕರಗಳ ಪಟ್ಟಿ ತರಿಸಿಕೊಂಡು, ಜಿಲ್ಲಾಸ್ಪತ್ರೆಗೆ ರೆಫ್ರಿಜ ರೇಟರ್, ಇತರೆ ಆಸ್ಪತ್ರೆಗಳಿಗೆ ಗೋಡೆ ಗಡಿಯಾರ ನೀಡಿದ್ದೇವೆ. ಅನಿವಾಸಿ ಭಾರತೀಯರು ನಮ್ಮ ಟ್ರಸ್ಟ್ ಸದಸ್ಯರು. ಅವರ ಕುಟುಂಬ ದವರು ನೀಡಿದ ಆರ್ಥಿಕ ನೆರವಿನಿಂದ ಸದ್ಯ 40 ಸಾವಿರ ರೂ. ಮೌಲ್ಯದ 15 ಮಿನಿ ಟೇಬಲ್‍ಗಳನ್ನು ತುಳಸಿದಾಸ್ ಹೆರಿಗೆ ಆಸ್ಪತ್ರೆಗೆ ನೀಡಿದ್ದೇವೆ. ಮುಂದೆ ಮತ್ತಷ್ಟು ಪೀಠೋ ಪಕರಣ, ಇತರೆ ಉಪಕರಣ ನೀಡಲು ಉದ್ದೇ ಶಿಸಲಾಗಿದೆ ಎಂದರು. ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಸದಸ್ಯರಾದ ಮೀನಾಕ್ಷಿ, ಪದ್ಮಾ ಮಹೇಶ್ ಮತ್ತಿತರಿದ್ದರು.

View Comments (1)

  • ರೋಗಿಗಳು ಗೋಡೆ ಗಡಿಯಾರ ತಗೊಂಡು ಏನು ಮಾಡ್ತಾರೆ? ಯಮ ಬರೋದಕ್ಕೆ ನಿರೀಕ್ಷೆ ಮಾಡ್ತಾ ಕುಳಿತುಕೊಳ್ಳ ಬೇಕು ಅಷ್ಟೆ.