ಮೈಸೂರು ಮಾಂಸ ಪ್ರಿಯರು ಭಾನುವಾರ ಶ್ರೀರಂಗಪಟ್ಟಣಕ್ಕೆ ಲಗ್ಗೆ

ಶ್ರೀರಂಗಪಟ್ಟಣ, ಮೇ 30- ಮೈಸೂರಿನಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಡಳಿತ ಸಂಪೂರ್ಣ ಲಾಕ್‍ಡೌನ್ ಮಾಡಿದ ಹಿನ್ನಲೆಯಲ್ಲಿ ಮಾಂಸ ಪ್ರಿಯರು ಪಕ್ಕದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಡಿ ಭಾಗವಾದ ಮೊಗರಹಳ್ಳಿ (ಮಂಟಿ), ಪಂಪ್‍ಹೌಸ್ ಸರ್ಕಲ್, ಬೆಳಗೊಳ, ಪೇಪರ್ ಮಿಲ್ ಸರ್ಕಲ್ ಹಾಗೂ ಕೆಆರ್‍ಎಸ್ ಭಾಗಗಳಲ್ಲಿ ಮೈಸೂ ರಿನ ಮಾಂಸ ಪ್ರಿಯರು ಸಾಮಾಜಿಕ ಅಂತರವನ್ನು ಮರೆತು ಅವರಿಗೆ ಇಷ್ಟವಿದ್ದ ಮೀನು, ಮಾಂಸ, ಹಾಗೂ ಕೋಳಿ ಮಾಂಸವನ್ನು ಖರೀದಿಸುವಲ್ಲಿ ತಲ್ಲೀನರಾಗಿದ್ದರು. ಶ್ರೀರಂಗಪಟ್ಟಣ ತಾಲೂಕಿಗೆ ಮೈಸೂರಿನಿಂದ ಗಡಿದಾಟಲು ಹಲವು ದಾರಿ ಗಳಿದ್ದು ಇದರಲ್ಲಿ ಮೊಗರಹಳ್ಳಿ(ಮಂಟಿ), ಇಂಫೋಸಿಸ್ ಹಾಗೂ ಹೂಟಗಳ್ಳಿ ಬೆಮೆಲ್ ಮಾರ್ಗವಾಗಿ ತಾಲೂಕಿಗೆ ಮೈಸೂರಿಗರು ಬಂದು ಹೋಗ ಬಹುದಾಗಿದೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗದ ಕಾರಣ ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಲಾಕ್‍ಡೌನ್ ಘೋಷಿ ಸಿದೆ. ಸೋಮವಾರ ಹಾಗೂ ಗುರುವಾರ ಮಾತ್ರ ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಕಲಿಸಿದ್ದು, ಇದು ಮೈಸೂರಿನ ಮಾಂಸ ಪ್ರಿಯರಿಗೆ ಕಹಿಯಾಗಿ ಪರಿಣಮಿಸಿದೆ ಕಾರಣ ಬಹುತೇಖ ಮಾಂಸ ಪ್ರಿಯರು ಅದರಲ್ಲೂ ಬಹುತೇಖ ಹಿಂದುಗಳು ಸೋಮವಾರ ಹಾಗೂ ಗುರುವಾರ ಸಸ್ಯಹಾರಿಗಳಾಗಿರುತ್ತಾರೆ.

ಈ ಎಲ್ಲಾ ಕಾರಣಗಳೂ ಇಂದು ಭಾನುವಾರ ಮೈಸೂರಿನ ಮಾಂಸ ಪ್ರಿಯರು ಅಧಿಕ ಸಂಖ್ಯೆಯಲ್ಲಿ ಮಾಂಸ ಹಾಗೂ ಮೀನು ಖರೀದಿಸಲು ಶ್ರೀರಂಗಪಟ್ಟಣದ ಹಲವು ಹಳ್ಳಿಗಳಿಗೆ ಲಗ್ಗೆ ಇಡಲು ಕಾರಣವಾಯಿತು. ಇದರಿಂದ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹೋಬಳಿಯ ಅನೇಕ ಗ್ರಾಮಗಳ ಮಾಂಸದಂಗಡಿಗಳಲ್ಲಿ ಜನ ತುಂಬಿ ತುಳುಕುತಿದ್ದರು.

ರಸ್ತೆಯಲ್ಲಿ ಮೀನು ಮಾರಾಟ ಬಲು ಜೋರು: ಅಂಗಡಿಗಳಲ್ಲಿ ಮಟನ್ ಹಾಗೂ ಚಿಕನ್ ಖರೀದಿ ಒಂದೆಡೆ ಭರದಿಂದ ಸಾಗಿದರೆ ಮತ್ತೋಂದೆಡೆ ತಾಲೂಕಿನ ಪಂಪ್ ಹೌಸ್ ಹಾಗೂ ಬೆಳಗೊಳ ಗ್ರಾಮಗಳ ನಡುವೆ ಆಟೋಗಳಲ್ಲಿಯೇ ರಸ್ತೆ ಬದಿಯಲ್ಲಿ ಮೀನುಮಾರಾಟ ಜೋರಾಗಿತ್ತು ಒಂದು ಮೀನಿನ ಆಟೋ ಬಳಿ ಸುಮಾರು 20ಕ್ಕೂ ಹೆಚ್ಚು ಜನ ಮೀನು ಖರೀದಿಗೆ ಮುಗಿ ಬಿದ್ದರು ಇದರಲ್ಲಿ ಸಾಮಾಜಿಕ ಅಂತರವಿರಲ್ಲಿ ಬಹುತೇಖ ಮಾಂಸ ಪ್ರಿಯರು ಸರಿಯಾಗಿ ಮಾಸ್ಕ್ ಅನ್ನು ಧರಿಸಿರಲಿಲ್ಲ.

ಮಾಂಸದ ಅಂಗಡಿಗಳು ಸೋಲ್ಡ್ ಹೌಟ್: ಮೈಸೂರಿನಿಂದ ಒಮ್ಮೆಲೆ ಅಧಿಕ ಸಂಖ್ಯೆಯಲ್ಲಿ ಮಾಂಸ ಪ್ರಿಯರು ಹಾಗೂ ಸ್ಥಳೀಯ ಮಾಂಸ ಪ್ರಿಯರು ಖರೀದಿಗೆ ಮುಂದಾದ ಹಿನ್ನೆಲೆಯಲ್ಲಿ ಈ ಭಾಗದ ಬಹುತೇಖ ಮಾಂಸದ ಅಂಗಡಿಗಳು ಒಂದೆರಡು ಗಂಟೆಗಳ ಲ್ಲಿಯೇ ಅವರ ಮಾಂಸ ಸೋಲ್ಡ್ ಹೌಟ್ ಆದ ಘಟನೆ ಇಂದು ನಡೆಯಿತು. ಆದರೆ ಬೆಳಗಿನ 10 ಗಂಟೆಯವರೆಗೂ ಮಾಂಸ ಸಿಗುತ್ತದೆ ಎಂದು ತಡವಾಗಿ ಮಾಂಸದ ಅಂಗಡಿಗಳಿಗೆ ಬಂದ ಸ್ಥಳೀಯ ಮಾಂಸ ಪ್ರಿಯರಿಗೆ ಬಾರಿ ನಿರಾಸೆ ಕಾದಿತ್ತು.

ತಹಸೀಲ್ದಾರ್ ಎಂ.ವಿ ರೂಪ: ಮಂಡ್ಯ ಜಿಲ್ಲೆಯಲ್ಲಿ ಮೇ29ರವರೆಗೂ ಸೋಮವಾರ ಹಾಗೂ ಗುರುವಾರ ಮಾತ್ರ ದಿನ ನಿತ್ಯದ ಬಳಕೆಗೆ ಜಿಲ್ಲಾಡಳಿತದ ಆದೇಶದ ಮೇರೆಗೆ ಅವಕಾಶ ವಿತ್ತು ಆದರೆ ಇಂದು ಯಾವುದೇ ಅಧಿಕೃತ ಆದೇಶ ಬಾರದ ಕಾರಣ ಜನ ದಿನ ನಿತ್ಯದ ಬಳಕೆಗೆ ಮುಗಿಬಿದ್ದಿದ್ದಾರೆ ಹಾಗೆಯೇ ಮೈಸೂರಿನ ಮಾಂಸ ಪ್ರಿಯರೂ ತಾಲೂಕಿಗೆ ಬಂದಿರಬಹುದು. ನಾನು ತಕ್ಷಣ ಸ್ಥಳಕ್ಕೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಹಾಗೂ ಸ್ಥಳೀಯ ಟಾಸ್ ಫೋರ್ಸ್ ಟೀಮ್ ಅನ್ನು ಕಳುಹಿಸಿ ಅಂಗಡಿಗಳನ್ನು ಬಂದ್ ಮಾಡಿಸಿ ಜನರನ್ನು ನಿಯಂತ್ರಿಸಲು ಹೇಳಿದ್ದೇನೆ ಎಂದು `ಮೈಸೂರು ಮಿತ್ರ’ಕ್ಕೆ ಪ್ರತಿಕ್ರಿಯಿಸಿದರು.

ಕೆ.ಆರ್‍ಎಸ್ ಪಿಡಿಓ ರಫಿಕ್: ಕೆಆರ್‍ಎಸ್‍ನ ಸಂತೆಗೆ 100 ವರ್ಷಗಳ ಇತಿಹಾಸವಿದ್ದು, ಇಲ್ಲಿಗೆ ಭಾನುವಾರ ಜನ ಸೇರುತ್ತಾರೆ ಎಂದು ನಮಗೆ ಮೋದಲೇ ತಿಳಿದು ಜನರನ್ನು ನಿಯಂತ್ರಿಸುವ ಹಿನ್ನೆಲೆ ಕಳೆದ ಭಾನುವಾರ ನಾವೇ ಕೆಆರ್‍ಎಸ್ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಯಂ ಲಾಕ್‍ಡೌನ್ ವಿಧಿಸಿದ್ದೆವು. ಆದರೆ ಇದನ್ನು ಕೆಲ ಸ್ಥಳೀಯರು ವಿರೋಧಿಸಿ ಸರ್ಕಾರವೇ ಅವಕಾಶ ಕೊಟ್ಟರೂ ಸ್ಥಳೀಯ ಅಧಿಕಾರಿಗಳು ನಮಗೆ ದಿನನಿತ್ಯದ ಬಳಕೆಯ ವಸ್ತುಗಳನ್ನು ಖರೀದಿಸಲು ಬಿಡುತ್ತಿಲ್ಲ ಎಂದು ನಮ್ಮ ಮೇಲಧಿಕಾರಿಗಳಿಗೆ ನಮ್ಮ ವಿರುದ್ಧ ದೂರು ನೀಡಿದ್ದರು. ಆದ್ದರಿಂದ ಈ ಭಾನುವಾರ ನಾವು ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ. ಅದರ ಪರಿಣಾಮವೇ ನೂರಾರು ಜನ ಇಂದು ಕೆಆರ್‍ಎಸ್ ಗ್ರಾಪಂ ವ್ಯಾಪ್ತಿಯಲ್ಲಿ ಜಮಾವಣೆಗೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.