ಮೈಸೂರು ಅರಮನೆಯ ಮೊಂಬತ್ತಿ ದೀಪಗುಚ್ಛ ಆನ್‍ಲೈನ್ ಹರಾಜು?

ಮೈಸೂರು,ಜ.27- ಮೈಸೂರು ಅರ ಮನೆಯ ಮುದ್ರೆ ಹೊಂದಿರುವ `ಮೊಂಬತ್ತಿ ದೀಪಗುಚ್ಛ’ ಇದೀಗ ಆನ್‍ಲೈನ್ ಹರಾ ಜಿಗೆ ಒಳಗಾಗಲಿದೆ. ಬುಧವಾರ (ಜ.27) ತೆರೆದುಕೊಂಡಿರುವ ಈ ಅಂತರ್ಜಾಲ ಮಾರಾಟ ಗುರುವಾರವೂ (ಜ.28) ಮುಂದು ವರಿಯಲಿದೆ. ಹೆಸರಾಂತ ಹರಾಜು ಸಂಸ್ಥೆ ಯಾದ `ಂsಣಚಿ ಉuಡಿu’ ಈ ಹರಾಜು ಪ್ರಕ್ರಿಯೆ ನಡೆಸಿದೆ. `ಭವ್ಯವಾದ ಸಂಗ್ರಹ’ ಗಳ ಗುಂಪಿಗೆ ಸೇರಿದ ಈ `ಮೊಂಬತ್ತಿ ದೀಪಗುಚ್ಛ’ವು ಹರಳಿನಿಂದ ರೂಪಿಸಿದ ಮಿನರೆಟ್ ಡೋಮ್ ಪಿನಾಕಲ್ ವಿನ್ಯಾಸ ಹೊಂದಿದೆ. ಗೋಡೆಗಳ ಬಣ್ಣಗಳಿಗೆ ತಕ್ಕ ದಾಗಿ ಹೊಂದಿಕೆಯಾಗಬಲ್ಲ ರೀತಿಯಲ್ಲಿ ರುವ ಈ ದೀಪಗುಚ್ಛವು `ಮೈಸೂರು ಅರ ಮನೆ’ಯ ಮುದ್ರೆಯನ್ನು ಒಳಗೊಂಡಿದೆ.

19-20ನೇ ಶತಮಾನದಲ್ಲಿ ತಯಾ ರಾದ, ಅತೀ ಜಾಗ್ರತೆಯಿಂದ ವಿನ್ಯಾಸಗೊಳಿ ಸಿದ ಈ ದೀಪಗುಚ್ಛವು ಒಳಾಂಗಣ ವಿನ್ಯಾ ಸದ ಅಂದವನ್ನು ದುಪ್ಟಟ್ಟುಗೊಳಿಸು ವಂತಿದೆ. ಈಗ ಅಸ್ಟಗುರು ಸಂಸ್ಥೆಯು ಇಂಥ 50 ದೀಪಗುಚ್ಛಗಳನ್ನು ಹರಾಜಿಗಿಟ್ಟಿದೆ.

19ನೇ ಶತಮಾನದ ಈ ದೀಪಗುಚ್ಛ 10 ಕೊಕ್ಕೆಗಳನ್ನು ಹೊಂದಿದ್ದು, ಪ್ರತಿ ಯೊಂದರಲ್ಲಿಯೂ ವಿದ್ಯುತ್ ಬಲ್ಬ್ ಅಳ ವಡಿಕೆಗೆ ಅವಕಾಶವಿದೆ. ಇದರಲ್ಲಿರುವ ಪ್ರತಿಯೊಂದು ಡಿಸ್ಕ್ ಭರ್ಜಿ ಆಕಾರದ 10 ಜೋಡಣೆಗಳನ್ನು ಮತ್ತು ತಲಾ ಒಂದು ಸಣ್ಣ ಹೂವಿನ ಮೊಗ್ಗಿನ ವಿನ್ಯಾಸವನ್ನು ಒಳಗೊಂಡಿದೆ. 208.3 x 86.4 x 86.4 ಸೆಂ.ಮೀ. ಗಾತ್ರದಲ್ಲಿದೆ. ಬ್ರಿಟನ್ ಮೂಲದ ಈ ಅಪರೂಪದ ದೀಪಗುಚ್ಛ ಬರ್ಮಿಂಗ್ ಹ್ಯಾಮ್‍ನ `ಎಫ್ ಅಂಡ್ ಸಿ ಒಸ್ಲೇರ್’ ಕಂಪನಿಯಲ್ಲಿ ತಯಾರಾದುದಾಗಿದೆ. ಬಲು ಆಕರ್ಷಕವಾದ ಈ ದೀಪಗುಚ್ಛಗಳಲ್ಲಿ ಪ್ರತಿಯೊಂದಕ್ಕೂ 25ರಿಂದ 30 ಲಕ್ಷ ರೂ.ವರೆಗೂ ಬೆಲೆಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ತಪ್ಪಾಗಿ ನಮೂದಿಸಲಾಗಿದೆ: ಪ್ರಮೋದಾದೇವಿ ಆಕ್ಷೇಪ
ಮೈಸೂರು: ಅಷ್ಟಗುರು ಸಂಸ್ಥೆಯು `ಭವ್ಯವಾದ ಸಂಗ್ರಹ’ಗಳ ಗುಂಪಿನಲ್ಲಿ ಆನ್‍ಲೈನ್ ಹರಾಜಿಗಿಟ್ಟಿರುವ ದೀಪಗುಚ್ಛವನ್ನು ಮೈಸೂರು ಅರಮನೆಗೆ ಸಂಬಂಧಿಸಿರುವುದು ಎಂದು ನಮೂದಿಸಿರುವುದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಪರೂಪದ ಈ ದೀಪಗುಚ್ಛವು `ಭವ್ಯವಾದ ಸಂಗ್ರಹ’ಗಳ ಗುಂಪಿ ನಲ್ಲಿ ಲಾಟ್ ನಂ. 32ರಲ್ಲಿ ಆನ್‍ಲೈನ್ ಹರಾಜಿನಲ್ಲಿ ತಪ್ಪಾಗಿ ನಮೂದಿತವಾಗಿದೆ ಎಂದಿದ್ದಾರೆ. ಈ ಸಂಬಂಧ ಅಷ್ಟಗುರು ಹರಾಜು ಸಂಸ್ಥೆಯ ಸಿಇಒ ತುಷಾರ್ ಸೇಥಿ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ನಿಮ್ಮ ಈ ಬೇಜವಾಬ್ದಾರಿಯುತ ನಡವಳಿಕೆ ಯನ್ನು ಸಾಧ್ಯವಿರುವ ಎಲ್ಲಾ ರೀತಿಯಲ್ಲಿಯೂ ಖಂಡಿಸುತ್ತೇನೆ ಎಂದಿದ್ದಾರೆ.

ನೀವು ಜ.27-28ರಂದು ಲಾಟ್ ನಂ. 32ರಲ್ಲಿ ಆನ್‍ಲೈನ್ ಹರಾಜಿಗಿಟ್ಟಿರುವ ಈ ಷಾಂಡಿಲಿಯರ್ (ಅಲಂಕಾರಿಕ ತೂಗುದೀಪ)ಗಳು ಮೈಸೂರು ಅರಮನೆ ಮೂಲದ್ದು ಎಂದು ಉಲ್ಲೇಖಿಸಿರುವುದು ದೊಡ್ಡ ಪ್ರಮಾದವಾಗಿದೆ. ನಿಮ್ಮ ಈ ನಡೆಯಿಂದಾಗಿ ನಮಗೆ, ನಮ್ಮ ಬಂಧು-ಮಿತ್ರರಿಗೆಲ್ಲಾ ಬಹಳ ಮುಜುಗರವಾಗಿದೆ. ನೀವು ಬೇಕಿದ್ದರೆ ನಮಗೆ ದೂರವಾಣಿ ಕರೆ ಮಾಡಿ ಈ ವಿಚಾರವಾಗಿ ನಿಮಗಿರುವ ಗೊಂದಲವನ್ನು ಪರಿಹರಿಸಿಕೊಳ್ಳಬಹುದಿತ್ತು. ನಿಮ್ಮ ಈ ಕೃತ್ಯದಿಂದಾಗಿ ಕೆಲ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ವಿಶೇಷ ವರದಿ ಪ್ರಕಟವಾಗಿವೆ. ಆ ವರದಿಗಳನ್ನು ಓದಿದ ಕೆಲವರು ಅನುಮಾನಗೊಂಡು ನಮಗೆ ಕರೆ ಮಾಡಿ ಪ್ರಶ್ನಿಸಿದ್ದಾರೆ. ಇದೆಲ್ಲವೂ ಕೂಡ ನಮಗೆ ಬೇಸರ ಉಂಟು ಮಾಡಿದೆ. ಇದೇ ವಿಚಾರವನ್ನು ಪತ್ರಿಕೆಗಳಿಗೆ ಸ್ಪಷ್ಟಪಡಿಸಲು ಅವರನ್ನು ಸಂಪರ್ಕಿಸುವ ಯತ್ನದಲ್ಲಿ ದ್ದೇನೆ ಎಂದೂ ಪತ್ರದಲ್ಲಿ ಬರೆದಿದ್ದಾರೆ. ಇದೆಲ್ಲದರ ಬಳಿಕ ನೀವು ಮತ್ತು ರಕ್ಷಾಂಡ ಹುಸೇನ್ ಅವರು ಮೈಕೆಲ್ ಲುಡ್‍ಗ್ರೋವ್ ಅವರ ಜತೆ ನಿನ್ನೆ ನಡೆಸಿದ ದೂರವಾಣಿ ಸಂಭಾಷಣೆ, ಅದಾದ ಬಳಿಕ ಲೋಪ ಸರಿಪಡಿಸಿರುವುದು `ಬಹಳ ವಿಳಂಬಿತ ಹಾಗೂ ಅತ್ಯಂತ ಅಲ್ಪ ಕ್ರಿಯೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ