ನವೀಕೃತ `ಮೈಸೂರು ರೈಲ್ವೆ ಮ್ಯೂಸಿಯಂ’ ಇಂದು ಪುನಾರಂಭ

ಮೈಸೂರು, ಮಾ.13(ಆರ್‍ಕೆಬಿ)- ಭಾರ ತೀಯ ರೈಲ್ವೆ ಇತಿಹಾಸವನ್ನು ಸಾರುವ ಮೈಸೂರಿನ ರೈಲ್ವೆ ಮ್ಯೂಸಿಯಂ ಕಾಮ ಗಾರಿ ಪೂರ್ಣಗೊಂಡಿದ್ದು, ಸಾರ್ವಜನಿ ಕರ ವೀಕ್ಷಣೆಗೆ ಶನಿವಾರ ಮುಕ್ತಗೊಳ್ಳುತ್ತಿದೆ.

ಕೆಆರ್‍ಎಸ್ ರಸ್ತೆಯ ಸಿಎಫ್‍ಟಿಆರ್‍ಐ ಮುಖ್ಯ ದ್ವಾರದೆದುರು ಇರುವ ಈ ಮ್ಯೂಸಿಯಂ ಹೊಸ ಆಕರ್ಷಣೆಗಳೊಂ ದಿಗೆ ಪುನಾರಂಭಗೊಳ್ಳುತ್ತಿದ್ದು, ಮಾ.14ರ ಬೆಳಿಗ್ಗೆ 10.30ಕ್ಕೆ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್‍ಕುಮಾರ್ ಸಿಂಗ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಎಜಿಎಂ ಪ್ರಶಾಂತ್‍ಕುಮಾರ್ ಮಿಶ್ರ, ಡಿಆರ್‍ಎಂ ಅಪರ್ಣಾ ಗರ್ಗ್, ಹಿರಿಯ ಅಧಿ ಕಾರಿ ಸುಜಾತಾ ಸಿಂಗ್ ಉಪಸ್ಥಿತರಿರುವರು.

150 ವರ್ಷ ಹಳೆಯ, ರೈಲ್ವೆ ಕಾರ್ಯಾ ಚರಣೆಗೆ ಸಂಬಂಧಿಸಿದ ಅಪರೂಪದ ವಸ್ತುಗಳ ದೊಡ್ಡ ಸಂಗ್ರಹವೇ ಈ ರೈಲು ಮ್ಯೂಸಿಯಂನಲ್ಲಿದೆ. ನವೀಕರಣ ಹಿನ್ನೆಲೆಯಲ್ಲಿ 2019ರ ಮಾರ್ಚ್‍ನಿಂದ ನವೀಕರಣ ಕಾರ್ಯಕ್ಕಾಗಿ ಮ್ಯೂಸಿಯಂ ಮುಚ್ಚಲ್ಪಟ್ಟಿತ್ತು.

ಪ್ರವಾಸೋದ್ಯಮ ಉತ್ತೇಜಿಸಲು ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ದೇಶದ ಅತ್ಯಂತ ಹಳೆಯ ರೈಲ್ವೆ ಮ್ಯೂಸಿಯಂ ಅನ್ನು ಇನ್ನಷ್ಟು ಸುಂದರ ಗೊಳಿಸಿದೆ. ಇಡೀ ದೇಶದ ರೈಲ್ವೆ ಇಲಾಖೆಯ ಪಯಣದ ಹಾದಿ ಯನ್ನು ಈ ಮ್ಯೂಸಿಯಂ ನೆನಪಿಸಿಕೊಡಲಿದೆ.

ರೈಲ್ವೆ ಮಾರ್ಗದ ನಿರ್ಮಾಣ, ಸುಂದರ ಪ್ರವೇಶ ದ್ವಾರ, ಕೆಫಿಟೇರಿಯಾ, ಆಡಿಯೋ -ವೀಡಿಯೋ ದೃಶ್ಯ ಕೇಂದ್ರ, ಮಕ್ಕಳ ಆಟದ ಉದ್ಯಾನವನ್ನು ಮ್ಯೂಸಿಯಂ ಒಳಗೊಂಡಿದೆ.

ಆರಂಭದ ದಿನಗಳ ಉಗಿಬಂಡಿಗಳು (ಐಔಅಔ ಒಔಖಿIಗಿS), ವಿಶೇಷ ಉದ್ದೇ ಶದ ವಾಹನಗಳು, ವ್ಯಾಗನ್, ದೂರ ಸಂಪರ್ಕ ಉಪಕರಣ ಮತ್ತಿತರ ಹಳೆ ಕಾಲದ ವಸ್ತುಗಳು ವೀಕ್ಷಣೆಗೆ ಸಿಗಲಿವೆ.

ಏನೇನಿದೆ?: ಮೈಸೂರಿನ ರಾಜ ಒಡೆ ಯರ್ ಅವರಿಗೆ ಸೇರಿದ ಮೊದಲ ತಲೆ ಮಾರಿನ ಉಗಿ ಲೋಕೋಮೋಟಿವ್ ಮತ್ತು ರೈಲುಗಾಡಿಗಳು, ಮಹಾರಾಣಿಯರ ವಿಶೇಷ ಬೋಗಿ, ಹಳೆಯ ಸಿಗ್ನಲ್ ದೀಪ ಗಳು, ಟಿಕೆಟಿಂಗ್ ಯಂತ್ರಗಳು ಹೊಸ ರಂಗು ಪಡೆದು ಕಂಗೊಳಿಸುತ್ತಿವೆ. ಬ್ಯಾಟರಿ ಯಲ್ಲಿ ಚಲಿಸುವ ಮಿನಿ ಟಾಯ್ ರೈಲೂ ಇಲ್ಲಿದೆ. ಹಳೆಯ ಕಾಲದ ರೈಲು ಇಂಜಿನ್ ಗಳು, ಬೋಗಿಗಳು, ಕ್ರೇನ್, ಸ್ಟೀಮ್ ಪಂಪ್, 1910-20ರಲ್ಲಿ ಬಳಸಲಾಗುತ್ತಿದ್ದ ಡಬಲ್ ವೈರ್ ಕೇಸ್ ಪ್ಲೇಟ್‍ಗಳು, 1927ರ ನ್ಯಾರೋ ಗೇಜ್ ಕೋಚ್‍ಗಳು, ಜಾಯ್ ರೈಡ್, ಖಿISಅಔ ನಿರ್ಮಿತ ಹಳೆಯ ಸ್ಟೀಮ್ ಇಂಜಿನ್ ಮ್ಯೂಸಿಯಂನಲ್ಲಿವೆ. ರೈಲ್ವೆ ಮ್ಯೂಸಿಯಂಗೆ ಭೇಟಿ ನೀಡಿದ ಪ್ರವಾಸಿಗರು ವಾಪಸಾಗುವಾಗ ನೆನಪು ಗಳನ್ನು ಕೊಂಡೊಯ್ಯುವ ರೀತಿಯಲ್ಲಿ ಮ್ಯೂಸಿಯಂ ರೂಪುಗೊಂಡಿದೆ.