ಮೈಸೂರಲ್ಲಿ ಒಂದೇ ದಿನ 455 ಮಂದಿಗೆ ಕೊರೊನಾ ಸೋಂಕು

7 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ 5,985 ಜನರಿಗೆ ಜಾಡ್ಯ

ಮೈಸೂರು, ಆ.9(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ದಾಖಲೆಯ 455 ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಭಾನುವಾರ 5,985 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಮೈಸೂರಿನಲ್ಲಿ 7,311 ಹಾಗೂ ರಾಜ್ಯದಲ್ಲಿ 1,78,087ಕ್ಕೆ ಏರಿಕೆಯಾಗಿದೆ. ಒಂದೇ ದಿನ ಮೈಸೂರಿನಲ್ಲಿ 461 ಮಂದಿ ಸೇರಿ ರಾಜ್ಯ ದಲ್ಲಿ 4,670 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರಿನಲ್ಲಿ ಭಾನುವಾರ ದಾಖಲೆ ಸಂಖ್ಯೆಯ ಪ್ರಕರಣ ವರದಿ ಯಾಗಿದ್ದರೂ, ಡಿಸ್ಚಾರ್ಜ್ ಆದವರ ಸಂಖ್ಯೆ ಅದಕ್ಕಿಂತ ಹೆಚ್ಚಿರುವುದು ಸಮಾ ಧಾನಕರ ವಿಷಯವಾಗಿದೆ.

ನೂರಕ್ಕೂ ಹೆಚ್ಚು ಸಾವು: ಮೈಸೂರಲ್ಲಿ 33 ವರ್ಷದ ಯುವಕ ಸೇರಿ 12 ಮಂದಿ ಒಳಗೊಂಡಂತೆ ರಾಜ್ಯದಲ್ಲಿ 107 ಸೋಂಕಿತರು ಸಾವನ್ನ ಪ್ಪಿದ್ದಾರೆ. ಆ.6ರಂದು 50 ವರ್ಷದ ಮಹಿಳೆ, 53 ಹಾಗೂ 76 ವರ್ಷದ ವೃದ್ಧರು, ಆ.7ರಂದು 55 ಹಾಗೂ 74 ವರ್ಷದ ಮಹಿಳೆಯರು, 57, 65 ಹಾಗೂ 55 ವರ್ಷದ ಇಬ್ಬರು ವ್ಯಕ್ತಿಗಳು, ಆ.8ರಂದು 33 ಹಾಗೂ 65 ವರ್ಷದ ವ್ಯಕ್ತಿಗಳು ಹಾಗೂ 65 ವರ್ಷದ ವೃದ್ಧೆ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ ಮೈಸೂರಿನಲ್ಲಿ 235 ಸೇರಿ ರಾಜ್ಯದಲ್ಲಿ 3,198ಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣ: ಮೈಸೂರು ಜಿಲ್ಲೆಯ ಒಟ್ಟು 3,868 ಸಕ್ರಿಯ ಪ್ರಕರಣಗಳಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 242, ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್ಸ್‍ಗಳಲ್ಲಿ 67, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 724, ಖಾಸಗಿ ಆಸ್ಪತ್ರೆಗಳಲ್ಲಿ 210, ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳಲ್ಲಿ 70 ಹಾಗೂ ಹೋಂ ಐಸೋಲೇಷನ್‍ನಲ್ಲಿ 2,555 ಸೋಂಕಿತರು ಶುಶ್ರೂಷೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 80,973ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ವಿವರ: ಮೈಸೂರಲ್ಲಿ 455, ಬೆಂಗಳೂರು 1948, ಬಳ್ಳಾರಿ 380, ಉಡುಪಿ 282, ಬೆಳಗಾವಿ 235, ರಾಯಚೂರು 202, ಧಾರವಾಡ 196, ಕಲಬುರಗಿ 194, ಹಾಸನ 168, ದಾವಣಗೆರೆ 158, ಬಾಗಲಕೋಟೆ 149, ಶಿವಮೊಗ್ಗ 149, ದಕ್ಷಿಣಕನ್ನಡ 132, ವಿಜಯಪುರ 129, ಗದಗ 114, ಚಿಕ್ಕಮಗಳೂರು 113, ಕೊಪ್ಪಳ 106, ಚಿತ್ರದುರ್ಗ 98, ಬೆಂಗಳೂರು ಗ್ರಾ 95, ಯಾದಗಿರಿ 91, ಕೋಲಾರ 87, ಹಾವೇರಿ 80, ತುಮಕೂರು 78, ಬೀದರ್ 70, ಮಂಡ್ಯ 63, ಉತ್ತರಕನ್ನಡ 59, ಚಿಕ್ಕಬಳ್ಳಾಪುರ 47, ಚಾಮರಾಜನಗರ 47, ರಾಮನಗರ 38 ಹಾಗೂ ಕೊಡಗು ಜಿಲ್ಲೆಯಲ್ಲಿ 22 ಹೊಸ ಪ್ರಕರಣ ದಾಖಲಾಗಿವೆ. ಮೈಸೂರು, ಬೆಂಗಳೂರು ಸೇರಿದಂತೆ 17 ಜಿಲ್ಲೆಗಳಲ್ಲಿ ಭಾನುವಾರ ನೂರಕ್ಕೂ ಹೆಚ್ಚು ಪ್ರಕರಣ ವರದಿಯಾಗಿವೆ.

ಟೆಸ್ಟಿಂಗ್ ಸಂಖ್ಯೆ ಹೆಚ್ಚಳ: ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸಲಾಗಿದ್ದು, ಭಾನುವಾರ 2,172 ಜನರನ್ನು ಪರೀಕ್ಷಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಖಾಸಗಿ ಆಸ್ಪತ್ರೆ ಸೇರಿದಂತೆ ಒಟ್ಟು 54,939 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.