ತೆರಿಗೆ ವಸೂಲಿ ನೆಪದಲ್ಲಿ ಮೈಸೂರು ಪಾಲಿಕೆಯ ಗೂಂಡಾ ವರ್ತನೆ ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟ ಗಂಭೀರ ಆರೋಪ

Mysuru City Corporation

ತೆರಿಗೆ ವಿಷಯದಲ್ಲಿ ಬರೀ ಸುಳ್ಳು ಮಾಹಿತಿ ನಾವೂ ಬ್ಯಾನರ್ ಹಿಡಿದು ನಿಮ್ಮ ಅಭಿವೃದ್ಧಿ ಪ್ರಶ್ನಿಸಬೇಕಾಗುತ್ತದೆ ಎಚ್ಚರ ಉದ್ಯಮಿಗಳಿಗೆ ನಿರಂತರ ಕಿರುಕುಳ

ಮೈಸೂರು, ನ.೧೨(ಎಂಟಿವೈ)- ತೆರಿಗೆ ವಸೂಲಿ ನೆಪದಲ್ಲಿ ಕಲ್ಯಾಣ ಮಂಟಪ, ಹೋಟೆಲ್‌ಗಳ ಮುಂದೆ ಮೈಸೂರು ಮಹಾನಗರ ಪಾಲಿಕೆ ಬ್ಯಾನರ್ ಅಳವಡಿಸಿರುವ ಪ್ರಕ್ರಿಯೆ ಗೂಂಡಾ ವರ್ತನೆಯಂತಿದೆ ಎಂದು ಆಪಾದಿಸಿದ ಮೈಸೂರು ಸಂಘ -ಸಂಸ್ಥೆಗಳ ಒಕ್ಕೂಟ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ಉದ್ಯಮಿಗಳ ವಿರುದ್ಧ ಮಾಡುತ್ತಿರುವ ಅಪ ಪ್ರಚಾರ ನಿಲ್ಲಿಸುವಂತೆ ಒತ್ತಾ ಯಿಸಿದ್ದಾರೆ. ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಫೆಡರೇಷನ್ ಆಫ್ ಮೈಸೂರು ಪೆಟ್ರೋಲಿಯಂ ಟ್ರೇರ‍್ಸ್ ಗೌರವಾಧ್ಯಕ್ಷ ಎಸ್.ಕೆ.ದಿನೇಶ್, ಚಲನಚಿತ್ರ ಮಂದಿರಗಳ ಮಾಲೀಕರ ಸಂಘದ ಅಧ್ಯಕ್ಷ ರಾಜಾರಾಮ್ ಹಾಗೂ ಇನ್ನಿತರರು ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿಯನ್ನು ಉಗ್ರವಾಗಿ ಖಂಡಿಸಿದರು.

ನಾವು ಬ್ಯಾನರ್ ಹಿಡಿದು ಬರಬೇಕಾಗುತ್ತದೆ: ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ೭೫ ಸಂಘಟನೆಗಳು ಸೇರಿ ಮೈಸೂರು
ಸಂಘ ಸಂಸ್ಥೆಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಈ ೭೫ ಸಂಸ್ಥೆಗಳು ಮೈಸೂರು ನಗರದ ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ವ್ಯಾಪಾರ, ವಹಿವಾಟು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಒಕ್ಕೂಟದ ವತಿಯಿಂದ ತೆರಿಗೆ ಪರಿಷ್ಕರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತೆರಿಗೆ ಪ್ರಮಾಣದಲ್ಲಿ ಕಡಿತ ಮಾಡಬಹುದೆಂಬ ನಿರೀಕ್ಷೆಯಲ್ಲಿ ಕಳೆದ ಒಂದು ವರ್ಷದಿಂದ ಕೆಲವರು ತೆರಿಗೆ ಕಟ್ಟಿರಲಿಲ್ಲ. ಆದರೆ, ಪಾಲಿಕೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸಂಘಟನೆಗಳ ಮುಖ್ಯಸ್ಥರಿಗೆ ಸೇರಿದ ಕಲ್ಯಾಣ ಮಂಟಪ ಹಾಗೂ ಹೋಟೆಲ್‌ಗಳ ಮುಂದೆ ಬ್ಯಾನರ್ ಹಾಕಿ, ಅಪಮಾನ ಮಾಡುವುದರೊಂದಿಗೆ ಉದ್ಯಮಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ಮೈಸೂರು ಮಹಾನಗರಪಾಲಿಕೆಯ ವರ್ತನೆ ಗೂಂಡಾಗಳAತೆ ಇದೆ. ತೆರಿಗೆದಾರರನ್ನು ಅವಮಾನಿಸುವ ಗುರಿ ಪಾಲಿಕೆಯದ್ದಾಗಿದೆ. ಕಳೆದ ೧೦ ವರ್ಷದಿಂದ ತೆರಿಗೆ ಪಾವತಿಸಿದ ಆಸ್ತಿಯ ಮುಂಭಾಗ ಬ್ಯಾನರ್ ಅಳವಡಿಸುತ್ತೇವೆ ಎಂದು ಹೇಳಿಕೆ ನೀಡಿ ಜನರಲ್ಲಿ ಉದ್ಯಮಿಗಳ ವಿರುದ್ಧ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಕೇವಲ ಒಂದು ವರ್ಷ ತೆರಿಗೆ ಪಾವತಿಸದವರ ಆಸ್ತಿಯ ಮುಂದೆ ಬ್ಯಾನರ್ ಹಾಕಲಾಗಿದೆ. ಆಸ್ತಿ ತೆರಿಗೆ ಹಾಗೂ ಉದ್ದಿಮೆ ರಹದಾರಿಗೆ ಸಂಬAಧಿಸಿದAತೆ ಮೈಸೂರಿನ ಉದ್ಯಮಿಗಳಿಗೆ ಹಲವು ಗೊಂದಲಗಳಿವೆ. ಇದನ್ನು ನಗರಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದ್ದು, ಉದ್ಯಮಿಗಳೊಂದಿಗೆ ಸಭೆ ಮಾಡುವುದಾಗಿ ತಿಳಿಸಿದ್ದರು. ಅದಕ್ಕೂ ಮುನ್ನವೇ ಪಾಲಿಕೆ ಈ ರೀತಿ ಕ್ರಮ ಕೈಗೊಂಡು ಉದ್ಯಮಿಗಳಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ವಿಷಾದಿಸಿದರು. ತೆರಿಗೆ ಶುಲ್ಕ, ಉದ್ದಿಮೆ ರಹದಾರಿ ಶುಲ್ಕ ಪಾವತಿಸದಿದ್ದರೆ ನೋಟಿಸ್ ಕೊಡಬೇಕು. ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಬ್ಯಾನರ್ ಹಾಕುವುದು ಖಂಡನೀಯ. ೧೦- ೧೫ ವರ್ಷಗಳಿಂದ ಯಾರು ತೆರಿಗೆ ಪಾವತಿಸಿಲ್ಲವೋ ಅಂತಹವರನ್ನು ಕರೆತರಲಿ. ತಕ್ಷಣದಲ್ಲಿ ನಾವೇ ವಸೂಲಿ ಮಾಡಿಸಿಕೊಡುತ್ತೇವೆ. ಅದನ್ನು ಬಿಟ್ಟು ಅನುಚಿತ ವರ್ತನೆ ತೋರುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದರು.

ಪಾಲಿಕೆ ಮುಂದೆ ಬರಬೇಕಾಗುತ್ತದೆ: ಈಗ ಉದ್ಯಮಿಗಳ ವಿರುದ್ಧ ಬ್ಯಾನರ್ ಸಮರ ಸಾರಿರುವ ಪಾಲಿಕೆ ಇನ್ನಾದರೂ ತನ್ನ ವರ್ತನೆಯನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಉದ್ಯಮಿಗಳು ಕೂಡ ಬ್ಯಾನರ್ ಹಿಡಿದುಕೊಂಡು ಪಾಲಿಕೆ ಕಚೇರಿ ಮುಂದೆ ಬರಬೇಕಾಗುತ್ತದೆ. ತೆರಿಗೆ ಕಟ್ಟಿಸಿಕೊಂಡ ನೀವು ಮಾಡಿರುವ ಅಭಿವೃದ್ಧಿ ಏನು?, ನೀವು ನಡೆಸಿದ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಹಿತಿ ಕೇಳಬೇಕಾಗುತ್ತದೆ. ಯಾವ ರಸ್ತೆ ಅಭಿವೃದ್ಧಿಪಡಿಸಿದ್ದೀರಾ ಎಂದು ಬ್ಯಾನರ್ ಹಿಡಿದುಕೊಂಡು ಕೇಳಬೇಕಾಗುತ್ತದೆ. ಇದೇ ವರ್ತನೆ ಮುಂದುವರಿದರೆ ಎಲ್ಲ ಸಮಸ್ಯೆಗಳೊಂದಿಗೆ ೭೫ ಸಂಘ ಸಂಸ್ಥೆಯ ಸದಸ್ಯರು ಒಟ್ಟಾಗಿ ಪಾಲಿಕೆ ಮುಂಭಾಗದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಆಗ ಪಾಲಿಕೆ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

೭೫ ಕೋಟಿ ರೂ. ಜಿಎಸ್‌ಟಿ: ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಆಸ್ತಿಯನ್ನು ವಸತಿ ಹಾಗೂ ವಾಣ ಜ್ಯ ಎಂಬ ಎರಡು ಗುಂಪಾಗಿ ಮಾತ್ರ ವಿಂಗಡಿಸಲಾಗಿದೆ. ಆದರೆ ಮೈಸೂರಿನಲ್ಲಿ ಮಾತ್ರ ೨೦೦೨-೨೦೨೧ರವರೆಗೂ ವಾಣ ಜ್ಯ ಆಸ್ತಿಗಳನ್ನು ಕಮರ್ಷಿಯಲ್ ಹಾಗೂ ಸೂಪರ್ ಕಮರ್ಷಿಯಲ್ ಎಂದು ವಿಂಗಡಿಸಲಾಗಿದೆ. ಸೂಪರ್ ಕಮರ್ಷಿಯಲ್ ಉದ್ಯಮಗಳಿಂದ ಹೆಚ್ಚು ತೆರಿಗೆ ಸಂಗ್ರಹಿಸಲಾಗುತ್ತಿದ್ದು, ಇದರಿಂದಾಗಿ ತೆರಿಗೆ ಪ್ರಮಾಣವೇ ಉದ್ಯಮಿಗಳಿಗೆ ಹೊರೆಯಾಗುತ್ತಿದೆ. ಇದನ್ನು ಮನಗಂಡು ಚಿತ್ರಮಂದಿರ, ಹೋಟೆಲ್ ಹಾಗೂ ಕಲ್ಯಾಣ ಮಂಟಪಗಳನ್ನು ಸಾಮಾನ್ಯ ವಾಣ ಜ್ಯ ಆಸ್ತಿಗಳಾಗಿ ಪರಿಗಣ ಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಮನವಿ ಸ್ವೀಕರಿಸಿದ್ದ ಅಂದಿನ ಆಯುಕ್ತರಾಗಿದ್ದ ಶಿಲ್ಪಾನಾಗ್ ತೆರಿಗೆ ವಿಧಾನದಲ್ಲಿ ಅನುಸರಿಸುತ್ತಿರುವ ತಾರತಮ್ಯ ನೀತಿಯನ್ನು ಸರಿಪಡಿಸುವ ಭರವಸೆ ನೀಡಿದ್ದರು. ಸೂಪರ್ ಕಮರ್ಷಿಯಲ್ ವಿಭಾಗದ ಬದಲು ಕಮರ್ಷಿಯಲ್-ಬಿ ವಿಭಾಗವನ್ನು ಅಸ್ತಿತ್ವಕ್ಕೆ ತಂದರು. ಆದರೂ ತೆರಿಗೆ ದರ ಮಾತ್ರ ಕಡಿಮೆಯಾಗಿಲ್ಲ ಎಂದರು. ಸಿಆರ್ ಇಲ್ಲದ ಕಟ್ಟಡಗಳ ಮಾಲೀಕರು ಈಗಾಗಲೇ ದುಪ್ಪಟ್ಟು ತೆರಿಗೆ ಪಾವತಿಸುತ್ತಿದ್ದಾರೆ. ಜೊತೆಗೆ ಸಿಆರ್ ಇಲ್ಲದ ಕಟ್ಟಡಗಳ ಉದ್ದಿಮೆ ರಹದಾರಿ ನವೀಕರಣ ಶುಲ್ಕವನ್ನೂ ದುಪ್ಪಟ್ಟುಗೊಳಿಸಿರುವುದರಿಂದ ನಮ್ಮ ಮೇಲೆ ಹೊರೆ ಹೆಚ್ಚಾಗಿದೆ. ರಹದಾರಿ ನವೀಕರಣಕ್ಕೆ ಶೇ.೧೫ರಷ್ಟು ದಂಡ, ಶೇ.೧೮ರಷ್ಟು ಬಡ್ಡಿ ವಿಧಿಸುವ ಕ್ರಮವನ್ನು ಸ್ಥಗಿತಗೊಳಿಸಬೇಕು. ಅಲ್ಲದೆ ಎಸಿ, ಜನರೇಟರ್‌ಗಳಿಗೆ ನಾವು ವಿದ್ಯುತ್ ಶುಲ್ಕ ಪಾವತಿಸುತ್ತಿದ್ದರೂ ಪಾಲಿಕೆಯು ಅದಕ್ಕೆ ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ವರ್ಷದ ಬಾಕಿಯಷ್ಟೇ ಇದೆ: ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್ ಮಾತನಾಡಿ, ತೆರಿಗೆ ಮರುಪರಿಶೀಲಿಸುವಂತೆ ಮನವಿ ಸಲ್ಲಿಸಿರುವುದರಿಂದ ಎಲ್ಲಾ ಕಲ್ಯಾಣ ಮಂಟಪಗಳ ಮಾಲೀಕರು ತೆರಿಗೆ ಕಡಿಮೆ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಕಳೆದ ಎರಡು ವರ್ಷದಿಂದ ಕಲ್ಯಾಣ ಮಂಟಪಗಳಲ್ಲಿ ಅದ್ಧೂರಿ ವಿವಾಹ ನಡೆದಿಲ್ಲ. ಕೆಲವು ಕಟ್ಟುಪಾಡುಗಳಿಂದಾಗಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುತ್ತಿಲ್ಲ. ಇದರಿಂದ ಆದಾಯವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಕಾರಣದಿಂದಷ್ಟೇ ಒಂದು ವರ್ಷದಿಂದ ತೆರಿಗೆ ಪಾವತಿಸಿರಲಿಲ್ಲ. ಆದರೆ ೧೦ ವರ್ಷದಿಂದ ಪಾವತಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.