ಮೈಸೂರು ಸಂಚಾರ ಪೊಲೀಸರ ಅವೈಜ್ಞಾನಿಕ ವಾಹನ ತಪಾಸಣೆ; ಆರೋಪ ಸಂಚಾರ ಸುರಕ್ಷತೆ ಬದಲು ವಾಹನ ಸವಾರರ ಜೀವಕ್ಕೆ ಸಂಚಕಾರ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆರೋಪ

ಮೈಸೂರು: ಮೈಸೂರು ನಗರದಲ್ಲಿ ಪೊಲೀಸರು ಅವೈಜ್ಞಾನಿಕ ವಾಗಿ ವಾಹನ ತಪಾಸಣೆ ನಡೆಸುತ್ತಿದ್ದು, ಸುಗಮ ರಸ್ತೆ ಸಂಚಾರ ಹಾಗೂ ಸಾರ್ವಜ ನಿಕರ ಸುರಕ್ಷತೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂದು ಮಾಜಿ ಮೇಯರ್ ಸಂದೇಶ್‍ಸ್ವಾಮಿ ಮನವಿ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮೈಸೂರು ನಗರದಲ್ಲಿ 18ನೇ ಶತಮಾನದ ಮಾದರಿಯಲ್ಲೇ ವಾಹನ ತಪಾಸಣೆ ನಡೆಸಲಾಗುತ್ತಿದೆ. ದೇಶದ ಯಾವುದೇ ನಗರದಲ್ಲಿ ಈ ರೀತಿ ರಸ್ತೆಯಲ್ಲಿ ನಿಂತು, ವಾಹನ ಸವಾರರನ್ನು ಅಟ್ಟಾಡಿಸಿ, ಹಿಡಿದು ದಂಡ ವಿಧಿಸುವ ವ್ಯವಸ್ಥೆಯಿಲ್ಲ. ಪರಿ ಣಾಮ ಸುಗಮ ಸಂಚಾರದ ಮಾತಿರಲಿ, ಸಾರ್ವಜನಿಕರು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಲಕ್ಷ ಲಕ್ಷ ಪ್ರಕರಣ: ನಗರದಲ್ಲಿ 2013 ರಿಂದ 2018ರ ಜುಲೈವರೆಗೆ ಸಂಚಾರ ನಿಯಮ ಉಲ್ಲಂಘನೆಯಡಿ 34 ಲಕ್ಷ ಪ್ರಕರಣ ದಾಖಲಿಸಿದ್ದು, 23 ಲಕ್ಷ ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಶೇ.90ರಷ್ಟು ಪ್ರಕರಣಗಳು ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿ ಆಧಾರದಲ್ಲಿ ದಾಖಲಿಸಲಾಗಿದೆ. ದಂಡ ಪಾವತಿಸು ವಂತೆ ನೋಟೀಸ್ ಕಳುಹಿಸುವುದಕ್ಕೇ 85 ಲಕ್ಷ ರೂ. ವ್ಯಯಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದವರನ್ನು ಗುರುತಿಸಿ, ಎಚ್ಚರಿಸಲು ಅತ್ಯಾಧುನಿಕ ವ್ಯವಸ್ಥೆಯಿದೆ. ಈ ನಿಟ್ಟಿನಲ್ಲೇ ಕ್ಷೇತ್ರ ಸಂಚಾರ ಉಲ್ಲಂಘನೆ ವರದಿ(ಎಫ್‍ಟಿವಿಆರ್) ಯೋಜನೆಯಡಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ವೇಗಮಿತಿ ಉಲ್ಲಂಘಿ ಸಿದ ವಾಹನಗಳ ಪತ್ತೆಗೆ 30 ಲಕ್ಷ ರೂ. ಮೌಲ್ಯದ 4 ಇಂಟರ್‍ಸೆಪ್ಟರ್ ವಾಹನ ಗಳನ್ನು ಖರೀದಿಸಲಾಗಿದೆ. ಆದರೂ ಅವೈಜ್ಞಾನಿಕವಾಗಿ ವಾಹನ ತಪಾಸಣೆ ನಡೆಸಲಾಗುತ್ತಿದೆ ಎಂದು ದೂರಿದರು.

ಆದಾಯದ ಏಜೆನ್ಸಿಯಾಗಬಾರದು: ಸಾರ್ವ ಜನಿಕ ಸೇವೆಯ ಪೊಲೀಸ್ ಇಲಾಖೆ ಎಂದೂ ಹಣ ಸಂಪಾದನೆಯ ಏಜೆನ್ಸಿಯಾಗಬಾರದು. ರಸ್ತೆ ಹಾಗೂ ಫುಟ್‍ಪಾತ್ ಸುಸ್ಥಿತಿ, ಸುಗಮ ರಸ್ತೆ ಸಂಚಾರ ಹಾಗೂ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸುವುದು ಪೊಲೀಸರ ಪ್ರಮುಖ ಕರ್ತವ್ಯ. ವಾಹನ ತಪಾಸಣೆ ಅಗತ್ಯ. ಆದರೆ ರಸ್ತೆಯಲ್ಲಿ ನಿಂತು ಸಂಚಾರಕ್ಕೆ ಅಡ್ಡಿಯಾಗುವಂತೆ, ಅಪ ಘಾತಗಳಿಗೆ ಆಸ್ಪದ ನೀಡುವಂತೆ ಕಾರ್ಯಾ ಚರಣೆ ನಡೆಸಬಾರದು. ಪಾರ್ಕಿಂಗ್ ಸ್ಥಳ ಗಳಲ್ಲಿ ವಾಹನ ತಪಾಸಣೆ ಮಾಡಿ, ದಂಡ ವಿಧಿಸಲಿ. ಇದರಿಂದ ರಸ್ತೆ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ. ಹಾಗಾಗಿ ನಗರ ಪೊಲೀಸ್ ಆಯುಕ್ತರು ಇನ್ನಿತರ ಹಿರಿಯ ಅಧಿಕಾರಿಗಳು ರಸ್ತೆಗಿಳಿದು ಪರಿಶೀಲನೆ ನಡೆಸಿ, ವ್ಯವಸ್ಥೆಯಲ್ಲಿ ಬದ ಲಾವಣೆ ತರಬೇಕೆಂದು ಆಗ್ರಹಿಸಿದರು.

ನಗರದಲ್ಲಿ ವರ್ಷಕ್ಕೆ ಸುಮಾರು 750 ಅಪಘಾತಗಳು ಸಂಭವಿಸುತ್ತಿದ್ದು, 150-200 ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಸುಗಮ ಸಂಚಾರ ವ್ಯವಸ್ಥೆಯಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದರ ನಡುವೆ ಮಹಿಳೆಯರು, ವಿದ್ಯಾರ್ಥಿಗಳ ದ್ವಿಚಕ್ರ ವಾಹನಗಳನ್ನು ತಡೆದು ಕೆಲ ಪೊಲೀಸರು, ಹೋಂಗಾರ್ಡ್‍ಗಳು ಅನುಚಿತವಾಗಿ ವರ್ತಿಸುತ್ತಾರೆ. ಯಾವುದೇ ತರಬೇತಿ ಯಿರದ ಕೆಲ ಹೋಂಗಾರ್ಡ್‍ಗಳು ಕೆಟ್ಟ ಪದಗಳನ್ನು ಬಳಸಿ, ಮೈಕ್‍ನಲ್ಲಿ ಅನೌನ್ಸ್ ಮಾಡುತ್ತಾರೆ. ಕಲ್ಯಾಣಗಿರಿಯಲ್ಲಿ ಮಹಿಳೆ ಯೊಬ್ಬರ ಸ್ಕೂಟರ್ ತಡೆದು, ತಪಾಸಣೆ ನಡೆಸಿದ ಪೊಲೀಸರು, 16 ಕೇಸ್‍ಗಳಿವೆ ಸ್ಥಳದಲ್ಲೇ ದಂಡ ಪಾವತಿಸಬೇಕೆಂದರು. ಅವರು ವಿಧಿಯಿಲ್ಲದೆ, ಪುತ್ರಿಯನ್ನು ಅಲ್ಲಿಯೇ ಬಿಟ್ಟು, ಮನೆಗೆ ಹೋಗಿ ಹಣ ತಂದು ಕಟ್ಟಿದರು. ನಂತರ ರಶೀತಿ ಕೇಳಿದರೆ ನೆಟ್‍ವರ್ಕ್ ಸಮಸ್ಯೆಯ ಸಬೂಬು ಹೇಳಿ ದರು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅವೈಜ್ಞಾನಿಕ ತಪಾಸಣೆಗೆ ಇದೊಂದು ಉದಾಹರಣೆ. ಇದರಿಂದ ದ್ವಿಚಕ್ರ ವಾಹನಗಳಲ್ಲಿ, ಆಟೋ ಗಳಲ್ಲಿ ಸಂಚರಿಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆಯಾ ಗುತ್ತಿದೆ. ಇದನ್ನು ಪೊಲೀಸ್ ಆಯುಕ್ತರು ಗಂಭೀರವಾಗಿ ಪರಿಗಣಿಸಿ, ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ಸಂದೇಶ್ ಸ್ವಾಮಿ ಮನವಿ ಮಾಡಿದರು.