ಮೈವಿವಿ ತತ್ವಶಾಸ್ತ್ರ ವಿಭಾಗ ಶತಮಾನೋತ್ಸವ; ಬೀಳ್ಕೊಡುಗೆ, ಸಂಸ್ಮರಣ ಸಂಚಿಕೆ ಬಿಡುಗಡೆ

ಮೈಸೂರು, ಮಾ.30(ಎಂಕೆ)- ಬಹಳ ಕಡಿಮೆ ಮಾತಿನ ಪೆÇ್ರ.ಎಸ್.ವೆಂಕಟೇಶ್ ಕರ್ತವ್ಯನಿಷ್ಠರು. ಅವರ ಮಾರ್ಗದರ್ಶನದಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿ.ಹೆಚ್‍ಡಿ ಪಡೆದಿದ್ದಾರೆ ಎಂದು ನಿವೃತ್ತ ಪೆÇ್ರ.ವಿ. ಎನ್.ಶೇಷಗಿರಿರಾವ್ ಪ್ರಶಂಸಿಸಿದರು.

ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂ ಗಣದಲ್ಲಿ ಮಂಗಳವಾರ ಮೈವಿವಿ ತತ್ವಶಾಸ್ತ್ರ ಅಧ್ಯಯನ ವಿಭಾಗದಿಂದ ಆಯೋಜಿಸ ಲಾಗಿದ್ದ ಅಭಿನಂದನೆ ಮತ್ತು ತತ್ವಶಾಸ್ತ್ರ ವಿಭಾಗದ ಶತಮಾನೋತ್ಸವ ಸಂಸ್ಮರಣ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ಭೂಗೋಳಶಾಸ್ತ್ರ ವಿಭಾಗ ಮುಖ್ಯಸ್ಥ ಪೆÇ್ರ.ಶ್ರೀನಿವಾಸ್, ಪ್ರೊ.ವೆಂಕಟೇಶ್ ಅವರ ಗುಣಗಾನ ಮಾಡಿದರು. ಕುಲಸಚಿವ ಪ್ರೊ.ಆರ್.ಶಿವಪ್ಪ, ತತ್ವಶಾಸ್ತ್ರ ಅಧ್ಯಯನ ವಿಭಾಗದ ಶತಮಾನೋತ್ಸವ ಸಂಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಶ್ರೀರಾಮಕೃಷ್ಣ ವಿದ್ಯಾಶಾಲೆ ಯುಕ್ತೇಶಾ ನಂದ ಸ್ವಾಮೀಜಿ ಹಾಗೂ ನಳಂದ ಬೌದ್ಧ ವಿವಿ ಕಾರ್ಯದರ್ಶಿ ಭಂತೆ ಬೋಧಿದತ್ತ ಆತ್ಮೀಯವಾಗಿ ಅಭಿನಂದಿಸಿದರು. ಕುವೆಂಪು ಕನ್ನಡ ಅಧ್ಯಯನ ವಿಭಾಗÀ ನಿರ್ದೇಶಕ ಪೆÇ್ರ.ಎಂ.ಜಿ.ಮಂಜುನಾಥ್, ಸಂದರ್ಶಕ ಪ್ರಾಧ್ಯಾಪಕ ಪೆÇ್ರ.ಕೆ. ಅನಂತ ರಾಮು, ನಿವೃತ್ತ ಪ್ರಾಂಶುಪಾಲ ಪೆÇ್ರ.ಎಂ. ರುದ್ರಯ್ಯ, ಸಹಾಯಕ ಪ್ರಾಧ್ಯಾಪಕ ಎಂ. ಡ್ಯಾನಿಯಲ್ ಮತ್ತಿತರರು ಉಪಸ್ಥಿತರಿದ್ದರು.