ಶಾಸಕ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ ನೀಡುವಂತೆ ಆಗ್ರಹ

ಚಾಮರಾಜನಗರ, ಆ.12- ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ದಲಿತ ಸಂಘಟನೆಗಳ ಒಕ್ಕೂ ಟದ ವತಿಯಿಂದ ಪ್ರತಿಭಟನೆ ನಡೆಯಿತು.

ನಗರ ಶ್ರೀಚಾಮರಾಜೇಶ್ವರ ದೇವಸ್ಥಾ ನದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಶಾಸಕ ಎನ್.ಮಹೇಶ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ ಮಾತನಾಡಿ, ಶಾಸಕ ಎನ್.ಮಹೇಶ್ 20 ವರ್ಷಗಳಿಂದ ಅಂಬೇಡ್ಕರ್ ವಿಚಾರಧಾರೆಗಳನ್ನು ದುರುಪಯೋಗಪಡಿಸಿ ಕೊಂಡು ದ್ರೋಹ ಮಾಡಿದ್ದಾರೆ. ಶಾಸಕ ಎನ್.ಮಹೇಶ್ ಅವರನ್ನು ನಂಬಿ ರಾಜ್ಯಾ ದ್ಯಂತ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ವನ್ನು ಮೊಟಕುಗೊಳಿಸಿದ್ದಾರೆ. ತುಂಬಾ ಜನ ಸರ್ಕಾರಿ ನೌಕರಿ ಸಿಕ್ಕಿದರೂ ಕೂಡ ನೌಕರರಿಗೆ ಹೋಗದೆ ಬಹುಜನ ಚಳವಳಿ ಗೋಸ್ಕರ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅದರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ತಮ್ಮಿಂದ ಎಲ್ಲವನ್ನು ಬಳಸಿ ಕೊಂಡು ಬಿಎಸ್ಪಿ ಯಿಂದ ಶಾಸಕರಾಗಿ ರುವ ಎನ್.ಮಹೇಶ್ ತಮ್ಮ ಅಧಿಕಾರದ ದಾಹಕ್ಕೆ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಆರೋಪಿಸಿದರು.

ದಲಿತ ಮತ್ತು ಪ್ರಗತಿಪರ ಸಂಘಟನೆ ಗಳ ಒಕ್ಕೂಟ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿದರು. ಪ್ರತಿಭಟನೆಯಲ್ಲಿ ಮಹಾ ನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದೈತ್ಯರಾಜ್, ಉಪಾಧ್ಯಕ್ಷ ವಕೀಲ ಪ್ರಸನ್ನ ಕುಮಾರ್, ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಡಿಎಸ್‍ಎಸ್ ಪಿ. ಸಂಘಸೇನ, ವೇದಿಕೆ ತಾಲೂಕು ಅಧ್ಯಕ್ಷ ಕೇಶವ ನಾಯಕ, ಜಿಲ್ಲಾ ಕಾರ್ಯದರ್ಶಿ ರವಿನಾಯಕ, ಜಿಲ್ಲಾ ಖಜಾಂಜಿ ಮಂಜು ನಾಯಕ, ಮುಖಂಡರಾದ ಜಿ.ಎಂ.ಗಾಡ್ಕರ್, ಮಹೇಶ್‍ಗೌಡ, ಎಸ್.ಪಿ.ಮಹೇಶ್, ಎಸ್‍ಡಿ ಪಿಐ ಜಿಲ್ಲಾಧ್ಯಕ್ಷ ಖಲೀಲ್‍ಉಲ್ಲಾ, ಉಪಾಧ್ಯಕ್ಷ ಸಿ.ಎಸ್.ಸೈಯದ್‍ಆರೀಫ್, ಸದಸ್ಯ ಎಂ. ಮಹೇಶ್, ರಾಜಶೇಖರ್, ಡಿ.ಎನ್.ಉಷಾ, ಸ್ತ್ರೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.