ನವಾಜ್ ಷರೀಫ್‍ಗೆ ಏಳು ವರ್ಷ ಜೈಲು

ಇಸ್ಲಾಮಾಬಾದ್: ಅಲ್-ಅಝಿಝಿಯಾ ಭ್ರಷ್ಟಾ ಚಾರ ಪ್ರಕರಣಕ್ಕೆ ಸಂಬಂ ಧಿಸಿದಂತೆ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವ ರಿಗೆ ಭ್ರಷ್ಟಾಚಾರ ನಿಗ್ರಹ ಕೋರ್ಟ್ ಸೋಮವಾರ 7 ವರ್ಷ ಶಿಕ್ಷೆ ವಿಧಿಸಿದೆ. ನವಾಜ್ ಷರೀಫ್ ವಿರುದ್ಧದ 2 ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆ ಸಿದ ಅಕೌಂಟಬೆಲಿಟಿ ಕೋರ್ಟ್ ನ್ಯಾಯಾ ಧೀಶ ಮಹಮದ್ ಅರ್ಷದ್ ಮಲ್ಲಿಕ್, ಒಂದು ಪ್ರಕರಣದಲ್ಲಿ 68 ವರ್ಷದ ನವಾಜ್ ಷರೀಫ್ ಅವರನ್ನು ಖುಲಾಸೆಗೊಳಿಸಿದ್ದಾರೆ. ಕಳೆದ ವಾರ ನವಾಜ್ ಷರೀಫ್ ವಿರುದ್ಧ ಫ್ಲಾಗ್‍ಶಿಪ್ ಇನ್ವೆಸ್ಟ್‍ಮೆಂಟ್ ಮತ್ತು ಅಲ್-ಅಝಿಝಿಯಾ ಪ್ರಕರಣಗಳ ವಿಚಾರಣೆಗಳನ್ನು ಪೂರ್ಣಗೊಳಿಸಿದ್ದ ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಈಗಾಗಲೇ ಒಂದು ಪ್ರಕರಣದಲ್ಲಿ 11 ವರ್ಷಗಳ ಜೈಲು ಶಿಕ್ಷೆಗೆ ಗುರಿ ಯಾಗಿರುವ ನವಾಜ್ ಅವರು ಈಗ ಮತ್ತೆ 7 ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ.