ರೈತ ಹೋರಾಟಕ್ಕೆ ಹೊಸ ರೂಪ: ದರ್ಶನ್ ಪುಟ್ಟಣ್ಣಯ್ಯ

ನಂಜನಗೂಡು: ಹೊಸ ತಲೆ ಮಾರಿನ ರೈತರನ್ನು ಸಂಘಟನೆಗೊಳಿಸಿ ರೈತ ಹೋರಾಟಕ್ಕೆ ಹೊಸ ರೂಪವನ್ನು ನೀಡುವ ಮೂಲಕ ತಂದೆಯ ರೈತ ಹೋರಾಟದ ಹಾದಿಯನ್ನು ಮುಂದುವರೆಸುತ್ತೇನೆ ಎಂದು ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಅವರು ನಂಜನಗೂಡು ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ ರೈತರು ಸಮಸ್ಯೆಗಳಿಂದ ನರಳಾಡುತ್ತಿದ್ದರೆ. ನಾನು ವಿದೇಶದಲ್ಲಿ ಉದ್ಯಮಿ ಯಾಗಿ ಐಷರಾಮಿ ಜೀವನ ನಡೆಸುವುದು ಸರಿಯಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ರಾಜಕಾರಣಿ ಮತ್ತು ಅಧಿಕಾರಿಗಳ ವಿರುದ್ದ ನಮ್ಮ ತಂದೆ ಸಿಡಿದೆದ್ದು ಹೋರಾಟ ನಡೆ ಸುತ್ತಿದ್ದರು. ಅವರ ಹಾದಿಯಲ್ಲಿ ಮುಂದುವರೆ ಯುವ ಸಲುವಾಗಿ ನಾನು ಅಮೇರಿಕಾ ತೊರೆದು ರೈತರ ಕಷ್ಟ ಕಾರ್ಪಣ್ಯಗಳಿಗೆ ಬೆನ್ನೆಲುಬಾಗಿ ನಿಂತು ಹೋರಾಟದಲ್ಲಿ ಭಾಗಿಯಾಗಲು ಬಂದಿದ್ದೇನೆ ಎಂದರು.

ರೈತ ಸಮಸ್ಯೆಗಳನ್ನು ಸರ್ಕಾರ, ಅಧಿಕಾರಿ ವರ್ಗ ಯಾರೂ ಪರಿಹರಿಸಲು ಸಾಧ್ಯವಿಲ್ಲ. ಅದಕ್ಕೆ ರೈತರೇ ಸಂಘಟನೆ ಗೊಂಡು ಹೋರಾಟದ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ಗ್ರಾಮದಲ್ಲಿ ನಮ್ಮ ಸಂಘಟನೆಗಳಿವೆ ಮುಂದಿನ ದಿನಗಳಲ್ಲಿ ರೈತ ಸಂಘ ಟನೆಗಳನ್ನು ಗ್ರಾಮ ಹಾಗೂ ಬೂತ್ ಮಟ್ಟದಲ್ಲಿ ಸಂಘಟಿಸಿ ರೈತ ಸಮಸ್ಯೆಗಳನ್ನು ನಿವಾರಿಸಲು ಶ್ರಮಿಸುತ್ತೇನೆ ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ದಿ.ಕೆ.ಎಸ್. ಪುಟ್ಟಣ್ಣಯ್ಯ ರವರು ರಾಜ್ಯದ ರೈತರ ಸಮಸ್ಯೆಗಳಿಗೆ ಹಗಲಿರುಳು ದುಡಿಯುತ್ತಿದ್ದ ಧೀಮಂತ ನಾಯಕರೆನಿಸಿದ್ದರು. ರೈತ ಸಮಸ್ಯೆ ಗಳ ಸುಳಿಗೆ ಸಿಲುಕಿ ಆತ್ಮಹತ್ಯೆ ಯಂತಹ ಸಮಸ್ಯೆ ಎದುರಿಸುತ್ತಿರುವ ಇಂತಹ ಸಂದರ್ಭ ದಲ್ಲಿ ತಂದೆಯಂತೆ ರೈತರ ಸಮಸ್ಯೆಗಳಿಗೆ ಭಾಗಿಯಾಗಲು ಅಮೇರಿಕಾದಲ್ಲಿ ಸಾಫ್ಟ್‍ವೇರ್ ಉದ್ಯಮವನ್ನು ತೊರೆದು ಬಂದಿರುವ ದರ್ಶನ್ ಪುಟ್ಟಣ್ಣಯ್ಯರವರ ಹೋರಾಟ ಗಳಲ್ಲಿ ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರೈತ ಮುಖಂಡ ರಾದ ಅಶ್ವಥ್‍ನಾರಾಯಣ ರಾಜೇ ಅರಸ್, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಹೊಸ ಕೋಟೆ ಬಸವರಾಜು, ಸತೀಶ್ ರಾವ್, ನೇತ್ರಾವತಿ, ಶಿರಮಳ್ಳಿ ಸಿದ್ದಪ್ಪ, ಸಿದ್ದರಾಜು, ನಾಗ ರಾಜು ಸೇರಿದಂತೆ ಹಲವಾರು ಪ್ರಮುಖರು ಇದ್ದರು.

View Comments (1)