ಮೈಸೂರಿಂದ ದೂರದ ಊರುಗಳಿಗೆ ರಾತ್ರಿ ಬಸ್ ಸೇವೆ ಆರಂಭ

ಮೈಸೂರು, ಜೂ 6(ಆರ್‍ಕೆ)- ಮೈಸೂರಿನಿಂದ ರಾಜ್ಯದ ವಿವಿಧ ದೂರದ ಜಿಲ್ಲೆಗಳಿಗೆ ರಾತ್ರಿ ಬಸ್ ಸಂಚಾರ ಸೇವೆ ಇಂದಿನಿಂದ ಆರಂಭವಾಗಿದೆ.

ಈಗಾಗಲೇ ರಾಜ್ಯದಾದ್ಯಂತ ಅಂತರ ಜಿಲ್ಲೆಗಳಿಗೆ ಬೆಳಗ್ಗೆ 7ರಿಂದ ರಾತ್ರಿ 7ಗಂಟೆ ವರೆಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಆರಂಭವಾಗಿದ್ದು, 30 ಮಂದಿ ಪ್ರಯಾಣಿಕ ರೊಂದಿಗೆ ಸಾರಿಗೆ ಬಸ್ಸುಗಳು ಸೇವೆ ಒದಗಿ ಸುತ್ತಿವೆ. ಇದೀಗ ಕೋವಿಡ್ ಲಾಕ್‍ಡೌನ್ ನಿರ್ಬಂಧ ಸಡಿಲಗೊಳಿಸಿರುವುದರಿಂದ ಇಂದಿನಿಂದ ರಾತ್ರಿ ವೇಳೆಯೂ ಸೇವೆಯನ್ನು (ಓighಣ ಃus Seಡಿviಛಿe) ಆರಂಭಿಸ ಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ಡಿವಿಷನಲ್ ಕಂಟ್ರೋಲರ್ ಆರ್.ಅಶೋಕ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮೈಸೂರಿನ ಮಂಗಳೂರು, ಉಡುಪಿ, ಮಣಿಪಾಲ್, ಕಾರವಾರ, ಗೋಕರ್ಣ, ಹುಬ್ಬಳ್ಳಿ, ಗದಗ, ಬಿಜಾಪುರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ರಾತ್ರಿ ಬಸ್ಸುಗಳ ಸೇವೆಯನ್ನು ಆರಂಭಿಸಲಾ ಗಿದ್ದು, ಪ್ರಯಾಣಿಕರ ಬೇಡಿಕೆಗನುಗುಣ ವಾಗಿ ಬಸ್‍ಗಳನ್ನು ಬಿಡಲಾಗುವುದು ಎಂದು ಅವರು ತಿಳಿಸಿದರು. ಲಾಕ್‍ಡೌನ್ ಸಡಿಲ ಗೊಂಡಿರುವ ಕಾರಣ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಹಂತ-ಹಂತವಾಗಿ ಆರಂಭವಾಗುತ್ತಿರುವುದರಿಂದ ಹಾಗೂ ಸೋಮವಾರದಿಂದ ಎಲ್ಲಾ ದೇವಾಲಯ, ಯಾತ್ರಾ ಸ್ಥಳಗಳು, ಪ್ರವಾಸಿ ಕೇಂದ್ರಗಳು ಓಪನ್ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕ ರಿಂದ ನೈಟ್ ಬಸ್ ಸರ್ವೀಸ್‍ಗೆ ಬೇಡಿಕೆ ಬರಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅಶೋಕ್ ಕುಮಾರ್ ಅವರು ತಿಳಿಸಿದರು.

ಎಸಿ ಬಸ್ಸುಗಳನ್ನು ಹೊರತುಪಡಿಸಿ ಉಳಿದಂತೆ ರಾಜಹಂಸ, ಸಾಮಾನ್ಯ ಬಸ್ಸು ಹಾಗೂ ಸ್ಲೀಪರ್ ಕೋಚ್‍ಗಳನ್ನು ದೂರದ ಊರುಗಳಿಗೆ ರಾತ್ರಿ ವೇಳೆ ಓಡಿಸಲಾಗು ತ್ತಿದೆ. ಅದಕ್ಕಾಗಿ ಬಸ್ಸುಗಳನ್ನು ಸ್ಯಾನಿಟೈಸ್, ಫ್ಯೂಮಿಗೇಷನ್ ಮಾಡಲಾಗಿದ್ದು, ಚಾಲಕ, ನಿರ್ವಾಹಕರಿಗೆ ಮಾಸ್ಕ್ ಪೂರೈಸಲಾಗಿದೆ.

ಒಂದು ಬಸ್ಸಿಗೆ ಕೇವಲ 30 ಮಂದಿ ಯಂತೆ ಸಾಮಾಜಿಕ ಅಂತರ ಕಾಯ್ದು ಕೊಂಡು ಪ್ರಯಾಣಿಸಲು ಅವಕಾಶ ಮಾಡಿ, ಬಸ್ಸಿಗೆ ಹತ್ತುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರಯಾಣಿಕರ ದೇಹದ ಟೆಂಪರೇಚರ್ ಚೆಕ್ ಮಾಡಲಾಗುವುದು ಎಂದು ಅವರು ನುಡಿದರು.