ಬೃಂದಾವನ ದೀಪಾಲಂಕಾರವೂ ಬಂದ್:ನಿರಾಸೆಯಿಂದ ವಾಪಸ್ಸಾದ ಪ್ರವಾಸಿಗರು

ಶ್ರೀರಂಗಪಟ್ಟಣ, ಜು.15(ವಿನಯ್)- ಕಳೆದ 4 ತಿಂಗಳಿಂದ ಸಂಬಳ ನೀಡಿಲ್ಲ ವೆಂದು ಕೆ.ಆರ್.ಸಾಗರದ ನೂರಾರು ಗುತ್ತಿಗೆ ನೌಕರರು ಕಾವೇರಿ ನೀರಾವರಿ ನಿಗಮದ ಮುಖ್ಯ ಕಚೇರಿ ಮುಂಭಾಗ ದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ದರು. ಅಧಿಕಾರಿಗಳು ಕೆಲವೇ ದಿನಗಳಲ್ಲಿ ಸಂಬಳ ನೀಡುವುದಾಗಿ ಹೇಳಿದರೂ ಯಾವುದಕ್ಕೂ ಬಗ್ಗದ ಪ್ರತಿಭಟನಾ ನಿರತರು ಸಂಜೆವರೆಗೂ ಪ್ರತಿಭಟನೆ ನಡೆಸಿದರು. ಇದರಿಂದ ಸಂಜೆ ಬೃಂದಾವನದ ದೀಪಾಲಂಕಾರ ಬಂದ್ ಆಯಿತು. ಈ ಕಾರಣದಿಂದ ಬೃಂದಾವನದ ದೀಪಾಲಂಕಾರ ನೋಡಲು ಬಂದಿದ್ದ ಸುಮಾರು ಎರಡರಿಂದ ಮೂರು ಸಾವಿರ ಪ್ರವಾಸಿಗರು ನಿರಾಸೆಯಿಂದ ಹಿಂತಿರುಗಿದರು. ಪರಿಣಾಮ ಲಕ್ಷಾಂತರ ರೂಪಾಯಿ ಇಲಾಖೆಗೆ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಂಬಳ ನೀಡಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. 180 ಕಾರ್ಮಿಕರಿಗೆ 5 ತಿಂಗಳಿಗೂ ಹೆಚ್ಚು ದಿನಗಳ ವೇತನ ನೀಡಿಲ್ಲ. ನಿಗಮದ ಎಇಇ ವಾಸುದೇವ್ ಅವರು ಕಾರ್ಮಿಕರಿಗೆ ನೀಡಬೇಕಾದ ವೇತನವನ್ನು ವಿದ್ಯುತ್ ಬಿಲ್ ಸೇರಿದಂತೆ ಇತರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಕಾರ್ಮಿಕರೊಂದಿಗೆ ತುಂಬಾ ನಿಷ್ಟುರವಾಗಿ ಮಾತನಾಡುತ್ತಾರೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೆ.ರಾಜು, ಸಿ.ಮಂಜುನಾಥ್, ರವಿಶಂಕರ್, ಪಿ.ರಾಜು, ಮಂಜು, ಜಗದೀಪ್‍ಸಿಂಗ್, ನೌಕರರಾದ ವೈರಮುಡಿ ಚಲುವ, ಜಗದೀಶ್, ಸುನಂದಾ, ರಾಧಮ್ಮ ಸೇರಿದಂತೆ ನೂರಾರು ನೌಕರರು ಪಾಲ್ಗೊಂಡಿದ್ದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಭರವಸೆ: ಈ ಸಂಬಂಧ ಪ್ರತಿಕೆಯೊಂದಿಗೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ವಿಚಾರ ತಿಳಿದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಾನೇ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಕೆಲಸಗಾರರ ಸಂಬಳವÀನ್ನು ತಿಂಗಳಗಟ್ಟಲೆ ಉಳಿಸಿಕೊಂಡರೆ ಅವರ ಜೀವನ ಹೇಗೆ ನಡೆಯಬೇಕು. ಕೂಡಲೇ ಕೆಲಸಗಾರರ ಸಂಬಳ ನೀಡಬೇಕೆಂದು ಆಗ್ರಹ ಮಾಡಿದ್ದೇನೆ. ನನ್ನ ಜೊತೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇದ್ದರು. ಅವರು ಕೂಡ ನಿಗಮದ ಎಂಡಿ ಪ್ರಸನ್ನ ಅವರಿಗೆ ಹೇಳಿದ್ದಾರೆ. ಹಾಗಾಗಿ ತಕ್ಷಣವೇ ಕಾರ್ಮಿಕರ ಸಂಬಳ ಬಿಡು ಗಡೆಯಾಗುತ್ತದೆÉ ಎಂದು ಭರವಸೆ ನೀಡಿದರು. ಕಾರ್ಯಪಾಲಕ ಅಭಿಯಂತರ ರಾಮಕೃಷ್ಣ ಮಾತನಾಡಿ, ಈ ವಿಚಾರವಾಗಿ ನಾನು ಮೇಲಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಅವರು ಕೂಡಲೇ ಸಮಸ್ಯೆಗೆ ಸ್ಪಂದಿಸಲು ಒಪ್ಪಿದ್ದಾರೆ. ಆದ್ದರಿಂದ ಕೆಲಸಗಾರರು ಪ್ರತಿಭಟನೆ ಕೈ ಬಿಡಬೇಕು ಎಂದು ಮನವಿ ಮಾಡಿದರು.