ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಎನ್‌ಎಸ್‌ಎಸ್ ಪಠ್ಯಕ್ರಮವಾಗಿ ಬದಲಾವಣೆ

ಮೈಸೂರು, ನ.೧೫(ಎಂಕೆ)- ನೂತನ ರಾಷ್ಟಿçÃಯ ಶಿಕ್ಷಣ ನೀತಿಯಿಂದಾಗಿ ಪಠ್ಯೇ ತರ ಚಟುವಟಿಕೆಯಾಗಿದ್ದ ಎನ್‌ಎಸ್‌ಎಸ್ (ರಾಷ್ಟಿçÃಯ ಸೇವಾ ಯೋಜನೆ) ಪಠ್ಯಕ್ರಮ ದಲ್ಲಿನ ಚಟುವಟಿಕೆಯಾಗಿ ಬದಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಹೇಳಿದರು.

ಮೈಸೂರು ವಿವಿ ಎನ್‌ಎಸ್‌ಎಸ್ ಭವನ ದಲ್ಲಿ ಆಯೋಜಿಸಿದ್ದ ‘ರಾಷ್ಟಿçÃಯ ಭಾವೈಕ್ಯತಾ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಪಠ್ಯಕ್ರಮದಲ್ಲಿ ಚಟುವಟಿಕೆಯಾಗಿರುವುದರಿಂದ ಎನ್‌ಎಸ್‌ಎಸ್‌ಗೆ ಬಲ ಹೆಚ್ಚಾಗಿದೆ. ದೇಶ ದಲ್ಲಿಯೇ ರಾಷ್ಟಿçÃಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕೆ ಸಲ್ಲುತ್ತದೆ ಎಂದರು.
ದೇಶದಲ್ಲಿ ಅತ್ಯಂತ ಹಿಂದುಳಿದ ೭೫೦ ಹಳ್ಳಿಗಳ ಅಭಿವೃದ್ಧಿ ಜವಾಬ್ದಾರಿಯನ್ನು ಎನ್‌ಎಸ್‌ಎಸ್ ವಹಿಸಿಕೊಂಡಿದೆ. ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಾಗೂ ಹಳ್ಳಿಗಳನ್ನು ಅಭಿ ವೃದ್ಧಿಪಡಿಸುವ ಜವಾಬ್ದಾರಿ ಎನ್‌ಎಸ್‌ಎಸ್ ನದ್ದಾಗಿದೆ ಎಂದು ತಿಳಿಸಿದರು.

ಭಾವೈಕ್ಯತಾ ಶಿಬಿರ: ದೇಶದಲ್ಲಿರುವ ವಿವಿಧ ಜಾತಿ, ಸಮುದಾಯದ ನೂರಾರು ವಿದ್ಯಾರ್ಥಿಗಳು ರಾಷ್ಟಿçÃಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದು, ಶಿಬಿರದಲ್ಲಿ ಎಲ್ಲಾ ಜಾತಿ, ಸಮುದಾಯವನ್ನು ಒಂದು ಗೂಡಿಸುವ ಕೆಲಸವಾಗಲಿದೆ. ಸಮಾಜದ ಕಟ್ಟಕಡೆಯ ಮನುಷ್ಯನ ಕಷ್ಟಕ್ಕೆ ಸ್ಪಂದಿಸುವ ಗುಣಗಳನ್ನು ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಅಳವಡಿಸಿ ಕೊಳ್ಳಲಿದ್ದಾರೆ. ನಾಯಕತ್ವದ ಗುಣಗಳು ಬೆಳೆಯಲಿದ್ದು, ಉತ್ತಮ ನಾಗರಿಕರಾಗಲಿ ದ್ದಾರೆ. ರಾಷ್ಟç ನಿರ್ಮಾಣಕ್ಕೆ ಎನ್‌ಎಸ್‌ಎಸ್ ಬಹುಮುಖ್ಯ ಕೊಡುಗೆ ನೀಡುತ್ತಿದೆ ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್, ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎನ್. ನಟರಾಜ್, ಮೈಸೂರು ವಿವಿ ಎನ್‌ಎಸ್‌ಎಸ್ ಸಂಚಾಲಕ ಡಾ.ಎಂ.ಬಿ.ಸುರೇಶ, ಪ್ರೊ.ಬಿ. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.