ಅ.7, ಶ್ರೀ ವಿದ್ಯಾ-ನಾದವಿದ್ಯಾ: ವಿಶೇಷ ಸಂಗೀತ ರೂಪಕ

ಮೈಸೂರು: ಭಾರತ ಸರ್ಕಾರದ ಸಂಸ್ಕøತಿ ಸಚಿವಾಲಯದ ವತಿಯಿಂದ ಅ.7ರಂದು ಸಂಜೆ 6 ಗಂಟೆಗೆ ಸಂಗೀತ ವಿದ್ವಾನ್ ಡಾ. ಆರ್. ನಂದಕುಮಾರ್ ಮತ್ತು ಅವರು ಶಿಷ್ಯ ವೃಂದದವರಿಂದ ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಶ್ರೀ ವಾಸುದೇವಾ ಚಾರ್ಯ ಭವನದಲ್ಲಿ ಶ್ರೀವಿದ್ಯಾ-ನಾದವಿದ್ಯಾ: ವಿಶೇಷ ಸಂಗೀತ ರೂಪಕ ಕಾರ್ಯ ಕ್ರಮ ಏರ್ಪಡಿಸಲಾಗಿದೆ. ಪಕ್ಕವಾದ್ಯದಲ್ಲಿ ವಿದ್ವಾನ್ ಪ್ರೊ. ಜಿ.ಎಸ್. ರಾಮಾನುಜಂ, ವಿದ್ವಾನ್ ವಿ.ಎಸ್. ರಮೇಶ್ ಮತ್ತು ವಿದ್ವಾನ್ ವಿಶ್ವಜಿತ್ ಸಹಕಾರ ನೀಡಲಿದ್ದಾರೆ.

ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ವಿದ್ವಾನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಡಾ.ಆರ್.ಸತ್ಯನಾರಾಯಣ ಸಾನ್ನಿಧ್ಯ ವಹಿಸುವರು. ಖ್ಯಾತ ವೇದ ವಿದ್ವಾಂಸ ಮತ್ತು ಆಗಮಿಕರಾದ ಡಾ.ಎಸ್.ಆರ್.ನರಸಿಂಹಮೂರ್ತಿ ಅವರಿಗೆ ಶ್ರೀ ಜಯಚಾಮರಾಜ ಒಡೆಯರ್ ಜನ್ಮ ಶತಾಬ್ಧಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ಮೋಹನ್ ದೇಶರಾಜ್ ಅರಸು ಭಾಗವಹಿಸುವರು.